ಪ್ರೇಮ ಅಥವಾ ಪ್ರೀತಿ ಅಥವಾ ಲವ್ ಎನ್ನುವ ಪದ ಎಲ್ಲ ಹದಿಹರೆಯದ ಹುಡುಗ ಹುಡುಗಿಯರಿಗೆ ಪ್ರೀತಿಸುವಷ್ಟೇ ಪ್ರಿಯವಾದದ್ದು. ಪ್ರೇಮದ ಬಗ್ಗೆ ಕವನವಿರಲಿ, ಲೇಖನವಿರಲಿ ಓದುವುದಕ್ಕೆ ತುಂಬಾ ಹಿತಕರ. ಆದ್ದರಿಂದಲೇ ಪ್ರೀತಿಯ ಬಗ್ಗೆ ತೆಗೆದ ಎಲ್ಲ ಚಿತ್ರಗಳೂ ಗಲ್ಲಾಪಟ್ಟಿಯಲ್ಲಿ ಯಶಸ್ವಿಯನ್ನು ಕಾಣುತ್ತಾ ಇವೆ. ಈ ಪ್ರೇಮದ ಫೇಮ್ (fame) ಎಂತಹುದೆಂದರೆ ಪ್ರೀತಿಯ ಆಳವಾದ ಗಾಳದಲ್ಲಿ ಸಿಲುಕುವವರು ಮತ್ತು ಪ್ರೀತಿಯ ಪರಿಗೋಸ್ಕರ ಪರದಾಡುವವರು ಅದೆಷ್ಟೋ ಲೆಕ್ಕವಿಲ್ಲದಷ್ಟು ಜನ. ಇದಕ್ಕೆ ದೇವರೂ ಕೂಡ ಹೊರತಲ್ಲ. ಪ್ರೀತಿಯ ಜಾಲದಲ್ಲಿ ಸಿಲುಕಿದ ಶ್ರೀಕೃಷ್ಣ ಹಾಗೂ ಶ್ರೀನಿವಾಸ ದೇವರುಗಳ ಪ್ರೇಮ ಪ್ರಸಂಗಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಹಾಗೆಯೇ ಎಲ್ಲವನ್ನೂ ತ್ಯಾಗ ಮಾಡಿದ್ದ ಋಷಿಮುನಿಗಳೂ ಪ್ರೇಮಕ್ಕೆ ತಲೆಬಾಗಿದ್ದ ಘಟನೆಗಳನ್ನು ನಾವು ಕೇಳಿದ್ದೇವೆ.
ಪ್ರೆಮಸಾಗರದಲ್ಲಿ ನೀವು ಈಜಲು ಇಷ್ಟಪಡುವಿರಾದರೆ ಈ ಪ್ರೀತಿ ಎಂದರೇನು, ಅದರ ಗುಣಗಳೇನು, ಅದರ ಪ್ರಭಾವ ಎಂತಹುದು ಎಂದೆಲ್ಲ ಮೊದಲು ತಿಳಿದು ಕೊಳ್ಳಲು ಅತ್ಯವಶ್ಯಕ.
ಮೊದಲು ಪ್ರೇಮದ ಗುಣಗಳ ಬಗ್ಗೆ ಪರಿಶೀಲಿಸೋಣ. (points 5 to 8 are compiled from a lecture in Mumbai)
01.💰 ವಿತ್ತ ನೀತಿಯ ಆಧಾರದ ಮೇಲೆ
ಪ್ರೀತಿಯಲ್ಲಿ ಹಣ ಹೆಚ್ಚು ಖರ್ಚಾಗುತ್ತದೆ. ಎಷ್ಟು ಬಂಡವಾಳ ಹಾಕಿದರೂ, ನಷ್ಟವೇ ಆಗುತ್ತದೆ ಮತ್ತು ಉಳಿಯುವ ನಗದು ಶೂನ್ಯವಾಗಿರುತ್ತದೆ.
02.🧠 ಮನಃ ಶಾಸ್ತ್ರದ ಆಧಾರದ ಮೇಲೆ
ಮದುವೆಗೆ ಮೊದಲು: ಪ್ರೀತಿಯು ಮೊದಲು ಆಲೋಚನೆಯಾಗಿ ಪ್ರಾರಂಭವಾಗಿ, ನಂತರ ಬಯಸುವುದಾಗಿ ಮತ್ತು ಕೊನೆಯಲ್ಲಿ ಪೂಜಿಸುವುದಾಗಿ ಬದಲಾಗುತ್ತದೆ.
ಮದುವೆಯ ನಂತರ: ಪ್ರೀತಿಯು ಮಕ್ಕಳಲ್ಲಿ ಹಂಚಿಹೋಗುತ್ತದೆ. ಮಕ್ಕಳಿಗೆ ಮದುವೆಯಾದ ನಂತರ ಪುನಃ (ಪತಿಗೆ-ಪತ್ನಿಗೆ) ಪ್ರೀತಿ ಸ್ಥಾಪನೆಯಾಗುವ ಸಾಧ್ಯತೆ ಇರುತ್ತದೆ.
03.📈 ಅರ್ಥಶಾಸ್ತ್ರದ ಆಧಾರದ ಮೇಲೆ
ಮಕ್ಕಳಾದಾಗ ತಲಾವಾರು ಆದಾಯ (per capita income) ಕಡಿಮೆಯಾಗಿ ದೇಶದ ಆರ್ಥಿಕ ಸ್ಥಿತಿಯ ಮೇಲೆ ಭಾರೀ ಪರಿಣಾಮ ಬೀರುತ್ತದೆ.
04.🏛️ ರಾಜನೀತಿಯ ಆಧಾರದ ಮೇಲೆ
ಪ್ರೀತಿಯ ಕಾರಣದಿಂದಾಗಿ ರಾಜರ ನಡುವೆ ನಡೆದ ಕಲಹಗಳು ಅಥವಾ ಯುದ್ಧಗಳ ಬಗ್ಗೆ ನೀವು ಇತಿಹಾಸದಲ್ಲಿ ಓದಿರುತ್ತೀರಿ.
05.🔬ಭೌತ ಶಾಸ್ತ್ರದ ಆಧಾರದ ಮೇಲೆ
ಪ್ರೀತಿ ಕಣ್ಣಿಗೆ ಕಾಣಿಸುವುದಿಲ್ಲ, ಪ್ರೀತಿಯ ತೂಕವನ್ನು ಅಳೆಯಲು ಸಾಧ್ಯವಿಲ್ಲ. ಪ್ರೀತಿಯ ಕಾಂತಶಕ್ತಿ (magnetism) ಅಸಾಧಾರಣವಾದುದು. ಹೇಗೆ ಪ್ರೀತಿ ಹೆಚ್ಚುತ್ತದೆಯೋ, ಹಾಗೆಯೇ ಆ ಕಾಂತಶಕ್ತಿಯು ಎರಡು ಪಟ್ಟು ಹೆಚ್ಚುತ್ತದೆ.
06.🧪 ರಸಾಯನ ಶಾಸ್ತ್ರದ ಆಧಾರದ ಮೇಲೆ
ಪ್ರೀತಿಯನ್ನು ಯಾರೂ ನೋಡಲು ಸಾಧ್ಯವಿಲ್ಲ, ಆದರೂ ಪ್ರೀತಿ ಬಣ್ಣಬಣ್ಣದ್ದಾಗಿದೆ (ರಂಗೀಲಾ), ಸಿಹಿಯಾಗಿದೆ. ಪ್ರಾರಂಭದಲ್ಲಿ ಪ್ರೀತಿ ಸರಳವಾಗಿರುತ್ತದೆ (simple), ಮುಂದೆ ಅದು ಸಂಯುಕ್ತವಾಗಿ (compound) ಸಂಕೀರ್ಣವೂ (complex) ಆಗಬಹುದು.
07.➕ ಗಣಿತ ಶಾಸ್ತ್ರದ ಆಧಾರದ ಮೇಲೆ
ಪ್ರೀತಿ ಮಾಡುವವ = ರೇಖೆ (line) ಎಂದು ತಿಳಿದಾಗ
ಪ್ರೇಮ = ಕೋನ (angle _/ )
ಎರಡು ರೇಖೆಗಳು ಭೇಟಿ ಆದಾಗ ಪ್ರೀತಿ ಹುಟ್ಟುತ್ತದೆ. ಕೋನದ ಡಿಗ್ರಿ ಕಡಿಮೆ ಆದಷ್ಟೂ ಪ್ರೇಮ ಗಾಢ ವಾಗುತ್ತದೆ. ಆದರೆ ಕೆಲವೊಮ್ಮೆ ತ್ರಿಕೋಣ ದಿಂದ ಸಮಸ್ಯೆಗಳು ಉದ್ಭವಿಸಿ ಪರಿಹಾರಕ್ಕೆ ಕಂಪ್ಯೂಟರ್ ಕೂಡ ಹ್ಯಾಂಗ್ ಆಗುವ ಸಾಧ್ಯತೆ ಇದೆ.
08.🌿 ನಿಸರ್ಗ ನೀತಿಯ ಆಧಾರದ ಮೇಲೆ
ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರೀತಿಯೇ ಅನನ್ಯ (ಅನೋಖಾ) ಎಂದು ಭಾವಿಸುತ್ತಾರೆ/ಭಾವಿಸುತ್ತಾಳೆ.
ಉಪಸಂಹಾರ
ಪ್ರಪಂಚದಲ್ಲಿ ಪ್ರತಿಯೊಬ್ಬರೂ ಪ್ರೀತಿಸಲು ಹಾತೋರೆಯುತ್ತಾರೆ. ಪ್ರೀತಿ ಪಡೆಯಲು ಏನು ಮಾಡಲೂ ಸಿದ್ಧರಾಗುತ್ತಾರೆ. ಪ್ರಾರಂಭದಲ್ಲಿ ಪ್ರೀತಿಸುವವರು ಬಹಳ ಸಂತೋಷದಲ್ಲಿ ಇರುತ್ತಾರೆ. ಅವರ ಮುಖ ಅರಳಿದ ಮಲ್ಲಿಗೆಯಾಗಿರುತ್ತದೆ. ಪ್ರೀತಿಯ ಕೊನೆಯ ಮೆಟ್ಟಿಲು ಬಂದಾಗ ಮನೆಯಲ್ಲಿರುವ ಹಿರಿಯರ ಹಾಗೂ ಸಮಾಜ ಎದುರಿಸಲು ಹಿಂಜರಿಕೆ ಆಗುತ್ತದೆ. ಆ ಸಮಯದಲ್ಲಿ ಒಬ್ಬರೇ ಇರಲು ಇಷ್ಟ ಪಡುತ್ತಾರೆ. ಗಾಯಕ ಮುಖೇಶ್ ರವರ ಹಾಡುಗಳನ್ನು ಕೇಳುತ್ತಾ ದಿನ ದೂಡುತ್ತಾರೆ. ದೇವರ ಮೇಲೆ ಅಪಾರ ಭಕ್ತಿ ಹುಟ್ಟುತ್ತದೆ. ದೇವರಲ್ಲಿ ನಾನಾ ಹರಕೆಗಳನ್ನು ಹರಿಸಿಕೊಂಡು ಒಳ್ಳೆಯ ಅಂತ್ಯಕ್ಕೆ ಮೊರೆಹೋಗುತ್ತಾರೆ.
ಪ್ರೇಮಕ್ಕೆ ಕಣ್ಣಿಲ್ಲವೆಂದು ಹೇಳಿ ಪ್ರೀತಿ ಮಾಡುವವರು ಕುರುಡರಾಗುತ್ತಾರೆ. ಆದರೆ ನೆನಪಿರಲಿ, ಪ್ರೀತಿಯೆಂಬುದು ಒಂದು ದೊಡ್ಡ ಖಾಯಿಲೆ. ಇದಕ್ಕೆ ಔಷಧಿ ಪ್ರಪಂಚದ ಯಾವ ವೈದ್ಯನ ಬಳಿಯೂ ಇಲ್ಲ. ಆದರೂ ಈ ಪ್ರೇಮಜ್ವರದಿಂದ ಪಾರುಮಾಡಲು ಕೇವಲ ಎರಡು ವಿಧಗಳಿಂದ ಸಾಧ್ಯ. ಒಂದು ಮದುವೆ, ಇನ್ನೊಂದು ಆತ್ಮಹತ್ಯೆ.
***
The word Preema or Preeti or Love is as dear to every teenager, boy or girl, as the act of loving itself. Whether it is a poem or an article about love, it is very pleasant to read. That is why all films made about love have been successful at the box office. Such is the fame of this love that countless people are caught in the deep spell of love and many more struggle desperately for the essence of love. Even the Gods are no exception to this. We have all heard about the love episodes of Lord Shri Krishna and Lord Srinivasa, who were caught in the web of love. Similarly, we have heard of incidents where great sages who had renounced everything bowed down to love.
If you wish to swim in the ocean of love, it is essential to first understand what love is, what its qualities are, and what its effects are.
Let us first examine the qualities of love. (points 5 to 8 are compiled from a lecture in Mumbai)
A lot of money is spent in love. No matter how much capital is invested, there is only loss, and the remaining cash is zero.
02. 🧠 Based on Psychology (Manah Shastra)
Before Marriage: Love begins as an idea first, then turns into desiring, and finally changes into worshiping.
After Marriage: Love gets divided among the children. There is a possibility of it being re-established between the husband and wife after the children get married.
03. 📈 Based on Economics (Artha Shastra)
When children are born, the per capita income decreases, which heavily impacts the economic condition of the country.
04. 🏛️ Based on Political Science (Rajaniti)
You must have read in history about the disputes or wars that occurred between kings due to love.
05. 🔬 Based on Physics (Bhautha Shastra)
Love is invisible; the weight of love cannot be measured. The magnetism of love is extraordinary. As love increases, the strength of that magnetism doubles.
06. 🧪 Based on Chemistry (Rasayana Shastra)
No one can see love, yet love is colorful (rangeela), sweet. In the beginning, love is simple; later it can become a compound and even complex.
07. ➕ Based on Mathematics (Ganita Shastra)
The one who loves = Line (rekhe) Then Love = Angle (kona) That is, love forms an angle. As the degree of the angle decreases, love increases. However, sometimes becoming a triangle can make solving problems difficult.
08. 🌿 Based on Nature's Policy (Nisarga Niti)
Everyone in the world thinks that his or her love is unique (anokhā).
Conclusion
Everyone in the world longs to love. They are ready to do anything to receive love. In the beginning, those who love are very happy. Their face is like a blooming jasmine. When the final stage of love arrives, they hesitate to face the elders in the house and society. At that time, they prefer to be alone. They spend their days listening to the songs of singer Mukesh. Immense devotion to God sprouts within them. They offer various vows to God and seek refuge for a good end.
It is said that love is blind, and those who fall in love become blind. But remember, love is a great disease. There is no medicine for it with any doctor in the world. However, rescue from this fever of love is possible through only two ways: one is marriage, and the other is suicide.
***

