Showing posts with label 1laghubaraha- HIND MUNNUDI ಹಿಂದ್ ಮುನ್ನುಡಿ 🤔😀. Show all posts
Showing posts with label 1laghubaraha- HIND MUNNUDI ಹಿಂದ್ ಮುನ್ನುಡಿ 🤔😀. Show all posts

Monday, 30 December 2002

HIND MUNNUDI ಹಿಂದ್ ಮುನ್ನುಡಿ 🤔😀

 

30 Dec 2002 - ಲಘುಬರಹ Imaginative story -Time 1980s

"ಇದೇನಿದು ಹಿಂದಿನ ನುಡಿಯೋ, ಹಿಂದೆ ಯಾವಾಗಲೋ ಬರೆದ ಮುನ್ನುಡಿಯೋ, ಅಥವಾ ಹಿಂದ್-ಮುಂದ್ ಗೊತ್ತಿಲ್ಲದ ನುಡಿಯೋ?" ಎಂದು ನೀವು ತಲೆ ಕೆಡಿಸಿಕೊಳ್ಳುತ್ತಿದ್ದೀರಾ! ನೀವು ಊಹಿಸಿದಂತೆ ಇದಾವುದೂ ಅಲ್ಲ. ನಿಧಾನವಾಗಿ ಓದುತ್ತಾ ಹೋದಂತೆ, ಇದಾವ ನುಡಿಯೆಂದು ನಿಮಗೇ ಅರ್ಥವಾಗಬಹುದೆಂದು ಭಾವಿಸಿ, ನನ್ನೀ ನುಡಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮೆಲ್ಲರ ಕಿಡಿನುಡಿ ಟೀಕೆಗಳಿಗಾಗಿ ನಾನು ಕಾಯುತ್ತಿದ್ದೇನೆ.

1980 ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನನಗೆ ಮುಂಬೈಯಲ್ಲಿರುವ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಈ ಸಂತೋಷದ ಗುಂಗಿನಲ್ಲಿ ನನ್ನನ್ನು ಕಾಡಲು ಪ್ರಾರಂಭಿಸಿದ ಭಯಕ್ಕೆ ಕಾರಣವಿಷ್ಟೇ – ಮೈಸೂರಿನಲ್ಲಿ ಓದಿದವನು ನಾನು, ಅಲ್ಲಿ ಆಗ ಎಲ್ಲಾ ಶಾಲೆಗಳಲ್ಲಿ ಕನ್ನಡಕ್ಕೆ ಮಾತ್ರ ಪ್ರಾಮುಖ್ಯತೆ ಇತ್ತು. ಐದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಹಿಂದಿ ಭಾಷೆಯನ್ನು ನಾವು ಕಲಿಯಬೇಕಾಗಿದ್ದರೂ, ಪರೀಕ್ಷೆ ಕೇವಲ 50 ಅಂಕಗಳಿಗೆ ಮಾತ್ರ ಇತ್ತು. ಅಷ್ಟೇ ಅಲ್ಲದೆ, ಪರೀಕ್ಷಕರು ತುಂಬಾ ಉದಾರವಾಗಿ ಅಂಕಗಳನ್ನು ಕೊಡುತ್ತಿದ್ದರು. ಎಲ್ಲ ಹುಡುಗರು ಹಿಂದಿ ಕಲಿಕೆಗೆ ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಉಪನ್ಯಾಸದ ಸಮಯದಲ್ಲಿ ಹುಡುಗರ ಗದ್ದಲವೋ ಗದ್ದಲ. ಆದರೂ ನಾನು ಜವಾಬ್ದಾರಿಯಿಂದ ಓದಿ ಹಿಂದಿಯಲ್ಲಿ ಸಣ್ಣ ವಾಕ್ಯಗಳನ್ನು ಬರೆಯಲು ಕೂಡ ಕಲಿತಿದ್ದೆನು. ಅಮಿತಾಭ್, ಧರ್ಮೇಂದ್ರ, ಜಿತೇಂದ್ರ, ರಾಜೇಶ್ ಖನ್ನಾ, ದೇವ್ ಆನಂದ್ ಅವರ ಚಿತ್ರಗಳನ್ನು ಆಗಾಗ್ಗೆ ನೋಡುತ್ತಿದ್ದರಿಂದ ಸುಮಾರಾಗಿ ಹಿಂದಿ ಅರ್ಥವಾಗುತ್ತಿತ್ತು. ಆದರೆ, ಹಿಂದಿಯಲ್ಲಿ ಮಾತನಾಡಲು ಬಹಳ ಕಷ್ಟಪಡಬೇಕಾಗಿತ್ತು. ಆ ದೊಡ್ಡ ಪಟ್ಟಣದಲ್ಲಿ ನನ್ನ ಜವಾಬ್ದಾರಿಯುತ ಕೆಲಸವನ್ನು ಹೇಗಪ್ಪಾ ನಿಭಾಯಿಸಬಲ್ಲೆ ಎಂಬ ಯೋಚನೆ ಮುಳ್ಳಿನಂತೆ ನನ್ನ ಹೃದಯವನ್ನು ಚುಚ್ಚುತ್ತಿತ್ತು.

ನನ್ನ ಶಿಕ್ಷಣದ ಅವಧಿಯಲ್ಲಿ ಎಲ್ಲದರಲ್ಲೂ ತುಂಬಾ ಚುರುಕು ಎಂದು ಹೇಳಿಸಿಕೊಳ್ಳುತ್ತಿದ್ದ ನನಗೆ ಅದೇನೆಂಬುದೋ ಒಂದು ಭಂಡ ಧೈರ್ಯವಿತ್ತು. ಹಿಡಿದ ಕಾರ್ಯವನ್ನು ಧೃತಿಗೆಡದೆ ಛಲದಿಂದ ಹಾಗೂ ಕಷ್ಟಪಟ್ಟು ನಿಭಾಯಿಸುವುದಂತಹ ಮನಸ್ಥಿತಿ ನನ್ನಲ್ಲಿ ಅಗಾಧವಾಗಿ ಬೇರೂರಿತ್ತು. ಹೊರಡಲು ಇನ್ನೂ ಒಂದು ತಿಂಗಳು ಸಮಯವಿದ್ದಿದ್ದರಿಂದ ಕೂಡಲೇ ಕಾರ್ಯಮಗ್ನನಾದೆ. ಲಷ್ಕರ್ ಮೊಹಲ್ಲೆಯ ನಜರ್ಬಾದ್ ಬಡಾವಣೆಯಲ್ಲಿರುವ ನನ್ನ ಸ್ನೇಹಿತ ಅಸ್ಲಮ್ ಮನೆಗೆ ಹೋಗಿ, ನನಗೆ ಹಿಂದಿಯಲ್ಲಿ ಮಾತನಾಡುವುದನ್ನು ಕಲಿಸಲು ಮೊರೆ ಹೋದೆ. ಅವನು ಒಪ್ಪಿ ದಿನವೂ ನನ್ನ ಹತ್ತಿರ ಹಿಂದಿಯಲ್ಲೇ ಮಾತನಾಡಿ, ನನಗೂ ಹಿಂದಿಯಲ್ಲಿ ಮಾತನಾಡಲು ಹೇಳುತ್ತಿದ್ದನು.

ನಾವು ಕುದುರೆ ಗಾಡಿಯಲ್ಲಿ (tonga) ಕುಳಿತುಕೊಂಡು ಮೈಸೂರು ನಗರದ ಅರಮನೆಯ ಸುತ್ತ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದೆವು. ಟಾಂಗಾ ಗಾಡಿಯನ್ನು ಆಯ್ಕೆ ಮಾಡಿದ ಕಾರಣ, ನನಗೆ ಹಿಂದಿ ಕಲಿಸಲು ಮತ್ತೊಬ್ಬನ ಅಗತ್ಯವಿತ್ತು. ಏಕೆಂದರೆ, ಬೇರೆ ಇಬ್ಬರು ಹಿಂದಿಯಲ್ಲಿ ಮಾತನಾಡಿದಾಗ ನಾನು ಹೇಗೆ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂಬುದನ್ನು ಪರೀಕ್ಷಿಸಲು ಇದು ಉತ್ತಮವಾಗಿತ್ತು. ಮೈಸೂರಿನಲ್ಲಿರುವ ಎಲ್ಲ ಟಾಂಗಾ ಚಾಲಕರಿಗೆ ಹಿಂದಿ ಬರುತ್ತಿದ್ದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹೀಗೂ ಹಾಗೆ ಮೂವತ್ತು ದಿನಗಳಲ್ಲಿ ಅಲ್ಪ ಸ್ವಲ್ಪ ಮೈಸೂರು ಟಾಂಗಾ ಹಿಂದಿ ಮಾತನಾಡಲು ಕಲಿತೆನು.

ಮುಂಬೈಗೆ ಬಂದದ್ದಾಯಿತು. ಕೆಲವೇ ದಿನಗಳಲ್ಲಿ ನನಗೆ ಈ ಜಗದ್ವ್ಯಾಪಿ (cosmopolitan) ನಗರದ ಜನರ ಹಿಂದಿ ಭಾಷಾ ಜ್ಞಾನದ ಕುರಿತು ಜ್ಞಾನೋದಯವಾಯಿತು. "ಅಯ್ಯೋ" ಎಂದೂ ಎನಿಸಿತು. ಮೈಸೂರಿನ ಟಾಂಗಾ ಹಿಂದಿಯೇ ಎಷ್ಟೋ ಮೇಲು ಎಂದರ್ಥವಾಯಿತು. ಮುಂಬೈಯಲ್ಲಿ ಸ್ವಲ್ಪವೇ ಹಿಂದಿ ಶಬ್ದಗಳು ಗೊತ್ತಿದ್ದರೆ ಸಾಕು, ಬೇರೆ ಭಾಷೆ ಮತ್ತು ಇಂಗ್ಲಿಷ್ ಭಾಷೆಯ ಶಬ್ದಗಳನ್ನು ಮಿಶ್ರಣ ಮಾಡಿ, ದಿನಗಳನ್ನು ಆರಾಮವಾಗಿ ಹಾಗೂ ನಿರ್ಭಯವಾಗಿ ನಿಭಾಯಿಸಬಹುದೆಂದು ಮನದಟ್ಟಾಯಿತು.

ಆದರೂ ನಾನು ಛಲ ಬಿಡದೆ ಒಳ್ಳೆಯ ಹಿಂದಿ ಭಾಷೆಯನ್ನು ಮಾತನಾಡಲಿಕ್ಕೆ ಕಲಿಯಲೇ ಬೇಕೆಂದು ನಿರ್ಧಾರ ಮಾಡಿ ಮೊದಲು ನನ್ನ ಕಚೇರಿಯಲ್ಲಿನ ಬಿಹಾರಿ ಗೆಳೆಯನ ಜೊತೆಗೆ ಓಡಾಡಲು ತೊಡಗಿದೆ. ಆದರೆ, ಕೆಲವೇ ದಿನಗಳಲ್ಲಿ ನನಗೆ ಬರುತ್ತಿದ್ದ कहता है, दिखता है ಎನ್ನುವ ಶಬ್ದಗಳೆಲ್ಲ ಮರೆತು, कहत है, दिखत है ಎನ್ನುವ ಶಬ್ದಗಳು ತಲೆಯಲ್ಲೂರಿದವು. ಯಾಕೋ ಸರಿಯಿಲ್ಲವೆಂದು ಈ ಪಾಟ್ನಾ ಗೆಳೆಯನನ್ನು ಬಿಟ್ಟು ಅಲಹಾಬಾದ್‌ನಿಂದ ಬಂದಂತಹ ಅಧಿಕಾರಿಯ ಗೆಳೆತನ ಮಾಡಿದೆ. Stationಗೆ, stopಗೆ इस्टेशन, इस्टाप ಅಂತೆಲ್ಲ ಶುರುವಾಗಿ, ನನ್ನ ಹಿಂದಿಯ ಜೊತೆಗೆ ಇಂಗ್ಲೀಷೂ ಕೆಟ್ಟದಾಯಿತು. "ಛೇ, ಇದು ಬೇಡಾ" ಎಂದು ಪಕ್ಕದ ಕಚೇರಿಯ ಗುಜರಾತಿಯವನ ಹತ್ತಿರ ಸ್ನೇಹ ಮಾಡಿ, ಅವನ ಜೊತೆಗೆ ಮಸಾಲಾ ಚಾಯ್ ಕುಡಿಯುವ ನೆಪದಲ್ಲಿ ಬೋರಿವಲಿ, ಕಾಂದಿವಲಿ ಬಡಾವಣೆಗಳನ್ನೆಲ್ಲ ವಿಹಾರ ಮಾಡಿದೆ. ಗುಜರಾತಿಯವನೊಟ್ಟಿಗಿದ್ದ ಪರಿಣಾಮ, बहन ಗೆ बेन ಅಂತ, पीछे ಗೆ पीछू ಅಂತೆಲ್ಲ ಬಾಯಿಗೆ ಬಂದುಬಿಟ್ಟಿತು. "ಅಯ್ಯೋ, ಏನಿದು ನನ್ನ ದೌರ್ಭಾಗ್ಯ" ಎಂದೆನಿಸಿ ಕೊನೆಯ ಪ್ರಯತ್ನವೆಂದು ಒಬ್ಬ ಪಂಜಾಬಿಯ ಜೊತೆಗೆ ಸ್ನೇಹ ಮಾಡಿದೆ. पुत्तर, कुड़ी, सोण ಎಂದೆಲ್ಲ ಶಬ್ದಗಳ ಸುರಿಮಳೆಯಾಗಿ, ಇದನ್ನೂ ಕೈಬಿಡಬೇಕಾಯ್ತು. ಇನ್ನು ಮರಾಠಿಯವನ ಜೊತೆ ಸ್ನೇಹದ ಪ್ರಶ್ನೆಯೇ ಬರಲಿಲ್ಲ, ಏಕೆಂದರೆ ಅವನು ಹಿಂದಿ ಮಾತನಾಡಲಿಕ್ಕೇ ತಯಾರು ಇರಲಿಲ್ಲ. ಮಲಯಾಳಿ, ಮದರಾಸಿಯವರನ್ನು ದೂರದಿಂದಲೇ ಗಮನಿಸಿ, ನಾನೇ ವಾಸಿ ಎಂದು ತಿಳಿದು ಅವರ ಜೊತೆಗೆ ಹಿಂದಿ ಭಾಷೆಯಲ್ಲಿ ಮಾತನಾಡಲು ಹೋಗಲಿಲ್ಲ.

"ಏನಪ್ಪಾ ಮಾಡೋದು, ಹಿಂದಿ ಒಂದು ಒಳ್ಳೆಯ ಭಾಷೆ. ಅದನ್ನು ಸರಿಯಾಗಿ ಕಲಿಯಲೇ ಬೇಕು. ಹಿಂದಿಯಲ್ಲೇ ಕಥೆ ಕವನ ಬರೆಯಲೇ ಬೇಕು" ಎಂಬ ನನ್ನ ಮನೋಚ್ಛೆ ಹೆಚ್ಚಾಗುತ್ತಾ ಹೋಯಿತು.

ಮೈಸೂರಿನ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಯೇ ಎಲ್ಲಕ್ಕಿಂತ BEST (ಮುಂಬೈನ ಬಸ್ ಸಂಸ್ಥೆ ಅಲ್ಲ) ಎಂದು ಭಾವಿಸಿ, ಮೈಸೂರಿನ ಸ್ನೇಹಿತನ ಮುಖಾಂತರ ಸಹಾಯ ಪಡೆದು ಹಿಂದಿ ಪ್ರಥಮ ಹಾಗೂ ಮಧ್ಯಮ ಪರೀಕ್ಷೆಗಳಲ್ಲಿ ತೇರ್ಗಡೆಯಾದೆ. ನಂತರ ಬಿಡುವಿನ ಸಮಯದಲ್ಲಿ ಕೆಲವು ಸಣ್ಣ ಪುಟ್ಟ ಕಥೆ, ಕವಿತೆಗಳನ್ನು ಕೂಡ ಬರೆದೆನು. ಇದೆಲ್ಲ ಮುಗಿಸುವ ಹೊತ್ತಿಗೆ ನನಗೆ ಹಾಸನಕ್ಕೆ ವರ್ಗವಾಯಿತು. ಎಲ್ಲಾ ಹಸ್ತಪ್ರತಿಗಳೊಂದಿಗೆ (manuscripts) ಹಾಸನಕ್ಕೆ ಬಂದು ನೆಲೆ ನಿಂತೆನು. ನನ್ನ ಹಿಂದಿ ಕಲಿಕೆಯ ಅನುಭವವನ್ನು ನನ್ನ ಹಾಸನದ ಹೊಸ ಸ್ನೇಹಿತರಿಗೆಲ್ಲ ಹೇಳಿದಾಗ, ಅವರೆಲ್ಲ ನಾನು ಬರೆದ ಕಥೆ ಕವಿತೆಗಳನ್ನು ಏಕೆ ಅಚ್ಚು ಹಾಕಿ ಪುಸ್ತಕದ ರೂಪದಲ್ಲಿ ತರಬಾರದು ಎಂಬ ಸಲಹೆ ಕೊಟ್ಟರು. ನನಗೂ ಸರಿ ಎನಿಸಿ ಕಾರ್ಯಮಗ್ನನಾದೆನು. ಆದರೆ ಒಂದು ವಿಷಯ ನನ್ನನ್ನು ಕಾಡುತ್ತಿತ್ತು, ಅದೇನೆಂದರೆ: ಪುಸ್ತಕಕ್ಕೆ ಒಬ್ಬ ದೊಡ್ಡ ಹಾಗೂ ಮುಖ್ಯ ವ್ಯಕ್ತಿಯ ಮುನ್ನುಡಿ (foreword) ಇದ್ದರೆ ನನ್ನ ಪುಸ್ತಕಕ್ಕೆ ಸ್ವಲ್ಪವಾದರೂ ಪ್ರಾಮುಖ್ಯತೆ ದೊರೆಯಬಹುದೇನೋ.

ತಕ್ಷಣ ನನ್ನ ಮನದಲ್ಲಿ ಟ್ಯೂಬ್‌ಲೈಟ್ ಸ್ಪೂರ್ತಿ (flash) ಮಿಂಚಿನಂತೆ ಕಾಣಿಸಿತು. ನಮ್ಮೂರಿನ ಮಾನ್ಯ ವಿಧಾನಸಭಾ ಸದಸ್ಯರಾದ ಗೌಡರಿಂದ ಒಂದು ಮುನ್ನುಡಿ ಬರೆಸಿದರೆ ಹೇಗೆ? ಮತ್ತೆ, ಅವರು ಮೂರು ಬಾರಿ ಲೋಕಸಭೆಯಲ್ಲಿ ಗೆದ್ದು ಹದಿನೈದು ವರ್ಷ ದೆಹಲಿಯಲ್ಲೇ ಇದ್ದವರು. ಈಗ ರಾಜ್ಯ ರಾಜಕಾರಣವೇ ಉತ್ತಮ ಎಂದು ವಿಧಾನಸಭೆಯ ಸದಸ್ಯರಾಗಿದ್ದರು. ನನ್ನ ಸ್ನೇಹಿತನ-ಸ್ನೇಹಿತನ ತಂದೆಯವರೇ ಈ ವಿಧಾನಸಭಾ ಸದಸ್ಯರಾಗಿದ್ದರಿಂದ ಮತ್ತು ಅವರ ಮನೆ ಹಾಸನದಲ್ಲೇ ಇದ್ದಿದ್ದರಿಂದ, ಬರುವ ಶನಿವಾರದಂದು ಅವರ ಮನೆಗೆ ಹೋಗಲು ನನ್ನ ಸ್ನೇಹಿತನ ಸ್ನೇಹಿತನಿಗೆ ಬಲವಂತ ಮಾಡಿ ಒಪ್ಪಿಸಿದೆ. ಬಹಳ ಕಷ್ಟಪಟ್ಟು ಭೇಟಿಗೆ ವ್ಯವಸ್ಥೆ (appointment) ತೆಗೆದುಕೊಂಡು ಅವರ ಮನೆಗೆ ರಾತ್ರಿ ಎಂಟರ ಹೊತ್ತಿಗೆ ಹೋದೆನು. ಮುನ್ನುಡಿಯನ್ನು ಬರೆಯಲು ಗೌಡರು ಸಂತೋಷದಿಂದಲೇ ಒಪ್ಪಿದರು. "ನಮ್ಮ ಹಳ್ಳಿಯ ಭಾಷೆಯಲ್ಲಿ ಬೇಕೋ ಅಥವಾ ನಿಮ್ಮ ಮೈಸೂರು ಭಾಷೆ ಬೇಕೋ" ಎಂದಾಗ, ನಾನು ನಮ್ರತೆಯಿಂದ, "ಇದು ನನ್ನ ಹಿಂದಿ ಕಥೆ, ಕವಿತೆಗಳು, ಆದ್ದರಿಂದ ತಾವುಗಳು ಹಿಂದಿಯಲ್ಲಿ ಬರೆದು ಕೊಡಬೇಕು" ಎಂದು ಮನವಿ ಮಾಡಿದೆ.

ಗೌಡರು ಕಿಡಿ ಕಾರಿದರು, "ಆ ದಿಲ್ಲೀ ಭಾಷೆ ಬ್ಯಾಡ, ನೀನು ಕನ್ನಡದಲ್ಲೇ ಕಥೆ, ಕವನ ಬರೀ" ಎಂದು ನನಗೆ ಸಲಹೆ ನೀಡಿದರು. "ಸಾರ್, ಛಲದಿಂದ ಹಿಂದಿ ಭಾಷೆಯಲ್ಲಿ ಬರೆದಿದ್ದೇನೆ. ನಿಮ್ಮ ಮುನ್ನುಡಿಯಿದ್ದರೆ ನನ್ನ ಪುಸ್ತಕಗಳೆಲ್ಲ ಸುಲಭವಾಗಿ ದೇಶದ ಎಲ್ಲಾ ಗ್ರಂಥಾಲಯಗಳಿಗೆ ವೇಗವಾಗಿ ಕಳಿಸಿ ಸ್ವಲ್ಪ ಹಣ ಗಳಿಸಬಹುದು. ನಿಮ್ಮ ಮುನ್ನುಡಿಯಿಲ್ಲದಿದ್ದರೆ ಪುಸ್ತಕ ಮಾರಾಟದ ಪ್ರಶ್ನೆಯಿರಲಿ, ಯಾವ ಸರ್ಕಾರಿ ಗ್ರಂಥಾಲಯ ಮತ್ತು ಕಚೇರಿ ಕೂಡ ಬೆಲೆ ಕೊಡುವುದಿಲ್ಲ" ಎಂದು ಗೋಗರೆದೆ.

ಕೊನೆಗೂ ನನ್ನ ಮೇಲೆ ಕನಿಕರ ತೋರಿ, ತಾವು ಹೇಳುತ್ತಾ ಹೋದಂತೆ ಬರೆದುಕೊಳ್ಳಲು ತಿಳಿಸಿದರು. ಸಂತೋಷದಿಂದ ಪುಸ್ತಕ, ಲೇಖನಿ ಸಿದ್ಧಪಡಿಸಿಕೊಂಡೆ. ಮತ್ತೇ ಅವರು ಹಳ್ಳಿ-ಕನ್ನಡ ಭಾಷೆಯಲ್ಲೇ ಪ್ರಾರಂಭಿಸಿದಾಗ, "ಸಾರ್, ಹಿಂದಿಯಲ್ಲಿ" ಅಂತ ಸುಳಿವು ಕೊಟ್ಟು ಪೆಚ್ಚು ಮೊರೆ ಹಾಕಿದೆ. "ಏನಯ್ಯ, ನನ್ನ ಹಿಂದಿನದನ್ನು ನೆನಪಿಸುತ್ತಾ ಹಿಂದೀ ಹಿಂದೀ ಅಂತಿದ್ದೀಯಲ್ಲ" ಎಂದು ಗೌಡರು ಬೈದರು. ಬಹುಶಃ ಅವರ ಹಿಂದಿನ ಹಿಂದೀ ಕಹಿ ಅನುಭವ ಅವರ ತಲೆಕೆಡಿಸಿರಬಹುದು.

ಹಿಂದೆ ಹದಿನೈದು ವರ್ಷ ಹಿಂದಿ ಕ್ಷೇತ್ರದಲ್ಲಿ ಇದ್ದು ಹಿಂದಿ ಬರದ ಗೌಡರು, "ನೀನೇ ಉಪಾಯ ಸೂಚಿಸು" ಎಂದು ನನಗೇ ಹೇಳಿದರು. "ಹಾಳಾದ್ದು, ಈ ಟ್ಯೂಬ್‌ಲೈಟ್ flash ಈ ಸಲ ಮಿಂಚಿನಂತೆ ಬರುತ್ತಲೇ ಇಲ್ಲವಲ್ಲ" ಎಂದು ನನ್ನನ್ನೇ ನಾನು ಶಪಿಸತೊಡಗಿದೆ.

ಸೊಪ್ಪಿನ ಸಾರು, ಎರಡು ಮುದ್ದೆ ಹಾಗೂ ಒಂದು ಕಪ್ ಕಾಫಿ ಬಂದವು. ಹಸಿವಿನಿಂದ ಕಂಗೆಟ್ಟಿದ್ದ ನನಗೆ, ಮುದ್ದೆ ತಿಂದ ಮೇಲಾದರೂ ಏನಾದರೂ ಹೊಳೆಯಬಹುದೆಂದು ತಟ್ಟೆಯನ್ನೇ ನೋಡುತ್ತಾ ಸಂಜ್ಞೆ (signal)ಗಾಗಿ ಕಾದೆ. ಇನ್ನೇನು, ತಟ್ಟೆಗೆ ನಾನು ಕೈ ಹಾಕಬೇಕು, ಅಷ್ಟರಲ್ಲಿ ಗೌಡರು "ಕಾಫಿ ತಗೊಳ್ಳಿ" ಎಂದು ಹೇಳಿ ಮುದ್ದೆ ತಟ್ಟೆಯನ್ನು ತಮ್ಮ ಕೈಗೆತ್ತಿಕೊಂಡರು.

ಇಲ್ಲಿಗೆ ಮುದ್ದೆ ತಿನ್ನಲು ಬಂದಿಲ್ಲವೆಂದು ನನ್ನನ್ನೇ ನಾನು ಸಮಾಧಾನಪಡಿಸಿಕೊಂಡು ಮುನ್ನುಡಿಯ ಉಪಾಯಕ್ಕಾಗಿ ಯೋಚನಾಮಗ್ನನಾದೆನು. ಗೌಡರು 'ಸೋರ್' ಎಂದು ಸೊಪ್ಪಿನ ಸಾರನ್ನು ಹೀರುತ್ತಿದ್ದಾಗ, 'ಆಹಾ! ಹೊಳೀತು ಯೂರೆಕಾ'. ಗೌಡರಿಗೆ ಹೇಳಿದೆ. "ನೀವು ಮುನ್ನುಡಿಯನ್ನು ಕನ್ನಡದಲ್ಲೇ ಹೇಳುತ್ತಾ ಹೋಗಿ, ನಾನು ಬರೆದುಕೊಳ್ಳುವೆ" ಎಂದಾಗ, ಅವರು "ಇದು ನೋಡು ಕನ್ನಡದ ಮೇಲಿನ ಅಭಿಮಾನ" ಎನ್ನುತ್ತಾ ಮುನ್ನುಡಿಯನ್ನು ಹೇಳುತ್ತಾ ಹೋದರು. ನಾನು ಅವರು ಹೇಳಿದ್ದನ್ನೇ, ಅಂದರೆ ಕನ್ನಡದ ಮುನ್ನುಡಿಯನ್ನು, ಹಿಂದಿ ಲಿಪಿಯಲ್ಲಿ ಬರೆಯುತ್ತಾ ಹೋದೆ.

ಪುಸ್ತಕವೂ ಪ್ರಕಟವಾಯಿತು. ಪುಸ್ತಕದ ಕೊನೆಯ ಪುಟದಲ್ಲಿ ಈ ಮುನ್ನುಡಿಯ ಹಿಂದಿ ಅನುವಾದವನ್ನು ಕನ್ನಡದ ಲಿಪಿಯಲ್ಲಿ ಬರೆದು, ಮುಂದೆ ಯಾವುದಾದರೂ ಒಂದು ದಿನ ಗೌಡರ ಸಹಾಯಕ್ಕೆ ಬರಬಹುದೆಂದು ಬಯಸಿದೆ.
***

Hindi Humorous Hook Imaginative story -Time 1980s

"Is this a previous statement, a foreword written long ago, or an unintelligible speech?" you might be wondering. As you read slowly, you will realise that it is none of those. Assuming that the nature of this narrative will become clear to you, I place these words before you. I humbly request and yearn for all your constructive criticism and feedback.

Excitement and Fear of Mumbai
In 1980, after completing my postgraduate degree, the sheer joy of landing a job at a big company in Mumbai carried me to the heights of happiness. However, a fear also began to creep in. The reason for this fear was simple: I was educated in Mysuru, where at the time, all schools prioritised only Kannada. Although we had to study Hindi from the fifth to the tenth standard, the examination was only for 50 marks. Furthermore, the examiners were very generous with the scores. Not all boys prioritised learning Hindi; the lectures were filled with noise and commotion. Despite this, I took my studies seriously and even learned to write short sentences in Hindi. Since I frequently watched films starring Amitabh, Dharmendra, Jeetendra, Rajesh Khanna, and Dev Anand, I understood Hindi reasonably well. However, speaking Hindi was very difficult for me. The thought of how I would manage my responsible job in that huge city pricked my heart like a thorn.

The Preparation Phase
Though I was considered very sharp in everything during my education, I possessed a certain boldness. The mindset of taking up a task and carrying it out with determination and hard work, without losing courage, was deeply rooted in me. Since I still had a month before leaving, I immediately got down to work. I went to the house of my friend, Aslam, in the Nazarbad area of Lashkar Mohalla and pleaded with him to teach me to speak in Hindi. He agreed and began speaking to me daily only in Hindi, prompting me to reply in Hindi as well.

Lessons on the Tonga
We both started riding in a tonga (horse-drawn carriage) around the Mysuru Palace complex. I chose the tonga because I needed a third person to help me learn Hindi. When two other people spoke in Hindi, it would force me to try and understand their conversation—and, as I assume you all know, all the tonga drivers in Mysuru spoke Hindi. In this way, I managed to learn to speak a rudimentary Mysuru Tonga Hindi within thirty days.

The Mumbai Awakening
I arrived in Mumbai. Within a few days, I had an awakening regarding the Hindi language skills of the people in this cosmopolitan city. I also felt a sense of dismay. I realised that the Mysuru Tonga Hindi I learned was far superior. I soon grasped that in Mumbai, knowing just a few Hindi words was enough; one could manage the days comfortably and fearlessly by mixing words from other languages and English.

The Pursuit of "Good" Hindi
Still determined, I decided I must learn to speak good Hindi. I first started socialising with a Bihari friend in my office. However, within a few days, the correct words I knew, like kahtā hai and dikhtā hai (कहता है, दिखता है), were replaced in my mind by kahat hai and dikhat hai. Thinking this was not right, I left the Patna friend and befriended a staff member who had come from Allahabad. Words like isteshun and istāp (इस्टेशन, इस्टाप) for 'station' and 'stop' began to corrupt both my Hindi and my English. "Oh, this is no good," I thought, and instead befriended a Gujarati colleague from the next office. On the pretext of drinking Masala Chai with him, I wandered all over the Borivali and Kandivali areas. Due to the association with the Gujarati friend, words like ben for bahan (sister) and pīchū for pīchhe (behind) started coming out of my mouth. "Alas, what is this misfortune?" I lamented, and as a last attempt, I befriended a Punjabi. When a shower of words like puttar, kudī, son (son, girl, beautiful) started, I had to give this up too. There was no question of befriending a Marathi person, as he was not even willing to speak Hindi. I observed the Malayalis and Madrasis from a distance and decided I was better off, so I did not attempt to speak Hindi with them.

The Path to Proficiency
"What am I to do?" I wondered. "Hindi is a good language. I must learn it properly. I must write stories and poems in Hindi." This desire grew stronger in my heart.

I concluded that the Dakshina Bharat Hindi Prachar Sabha in Mysuru was the BEST (not the Mumbai bus company) place to learn. I sought help through a friend in Mysuru and passed the Hindi Prathama and Madhyama examinations. Later, during my free time, I also wrote some small stories and poems. By the time I finished all this, I was transferred to Hassan. I settled in Hassan with all my manuscripts.

The Foreword Dilemma
When I told my new friends in Hassan about my Hindi learning experience, they suggested I publish the stories and poems I had written in the form of a book. I thought it was a good idea and set to work. However, one thing bothered me: I felt that if a prominent and important person wrote a foreword for the book, it might gain some importance.

Suddenly, a "tubelight flash" of inspiration hit me like lightning. Why not ask the respected Member of the Legislative Assembly (Vidhana Sabha) of our town, Gowda, to write a foreword? After all, he had won the Lok Sabha election three times and lived in Delhi for fifteen years before becoming an MLA, thinking state politics was better. Since my friend's friend's father was this MLA, and his house was in Hassan, I pressured my friend's friend to arrange a visit for the coming Saturday. After much difficulty, I secured an appointment and went to his house around 8 p.m.

The Hindi Request
Gowda happily agreed to write the foreword. When he asked, "Do you want it in our village language or your Mysuru language?" I humbly requested, "Since these are my Hindi stories and poems, I request you to please write it in Hindi."

Gowda flared up and advised, "That Delhi language is not needed; you write your stories and poems in Kannada." I pleaded, "Sir, I have written these with determination in Hindi. With your foreword, my books can be easily and quickly sent to all the country's libraries, allowing me to earn some money. Without your foreword, forget selling the books; no government library or office will value it."

The Ingenious Solution
Finally, showing pity on me, he asked me to write down as he dictated. Happily, I prepared my notebook and pen. When he started again in his rural-Kannada dialect, I nudged him again, with a disappointed look, saying, "Sir, in Hindi." Gowda scolded me, "Why are you reminding me of my past with this 'Hindi, Hindi' talk?" Perhaps his bitter past experience with Hindi was bothering him.

Gowda, who had spent fifteen years in a Hindi-speaking region but did not speak Hindi, then told me, "You suggest a solution." "Darn it, why isn't this 'tubelight flash' coming like lightning this time?" I cursed myself.

Sopina Saaru (a type of lentil broth), two muddes (finger millet balls), and a cup of coffee arrived. Exhausted by hunger, I looked at the plate, waiting for a sign, hoping something would click after eating the mudde. Just as I was about to reach for the plate, Gowda told me to take the coffee and took the mudde plate himself.

I consoled myself that I had not come here just to eat mudde and plunged into deep thought about the foreword idea. As Gowda was loudly sipping the saaru, the 'Aha! Eureka' moment flashed! I told Gowda, "You go on dictating the foreword in Kannada, and I will write it down." He responded, "See this, the love for Kannada!" and continued dictating the foreword. I wrote down everything he said—the Kannada foreword—in the Hindi script.

The book was published, and on the last page of the book, I wrote the Hindi translation of this foreword in the Kannada script, hoping that it might be of some help to Gowda someday.
***



end- elloo ನಡೆದದ್ದು ಅಲ್ಲ imagination written sometime ಇನ್ 2002
.


go back to... 
    click--> LINKS TO ARTICLES 

...