Showing posts with label chintane- PREETI NIBHAYISUVUDU ಪ್ರೀತಿ ನಿಭಾಯಿಸುವುದು MANAGING LOVE. Show all posts
Showing posts with label chintane- PREETI NIBHAYISUVUDU ಪ್ರೀತಿ ನಿಭಾಯಿಸುವುದು MANAGING LOVE. Show all posts

Monday, 30 December 2002

PREETI NIBHAYISUVUDU ಪ್ರೀತಿ ನಿಭಾಯಿಸುವುದು MANAGING LOVE

  


30 Dec 2002 - thoughts 

ಆಲೋಚನೆ - ಪ್ರೀತಿ ನಿಭಾಯಿಸುವುದು preeti nibhayisuvudu

ಪ್ರೀತಿ ಮಾಡಬೇಕು ಎಂದು ಕೆಲವರು ಹೇಳಿದರೂ ಪ್ರೀತಿ ಅದಾಗಿಯೇ ಇದ್ದಕ್ಕಿದ್ದಂತೆ ಹೇಗೋ ಆಗಿಹೋಗುತ್ತದೆ ಎಂದು ಬಹಳ ಜನರ ವಾದ, ವಿಚಾರ, ಭಾವನೆ. ಪ್ರೀತಿ ಎಂದರೆ, ಹುಡುಗ-ಹುಡುಗಿ, ಗಂಡ-ಹೆಂಡತಿ, ಅಕ್ಕ-ತಂಗಿ, ಅಕ್ಕ-ತಮ್ಮ, ಅಣ್ಣ-ತಮ್ಮ, ಅಣ್ಣ-ತಂಗಿ,  ಸ್ನೇಹಿತರ ನಡುವೆ, ಯಾವ ತರಹದ ಪ್ರೀತಿಯೂ ಆಗಿರಬಹುದು. 

'ಪ್ರೀತಿ ಪಡೆಯುವುದು ಮತ್ತು ನಿಭಾಯಿಸುವುದು' ಎಂಬುದರ ಬಗ್ಗೆ ಕೆಳಗೆ ಕೊಟ್ಟಿರುವ ವಿಚಾರಗಳನ್ನು ಪರಿಶೀಲಿಸಿ. 

  1. ಎರಡೂ ಸುಲಭ - ಕಾರಣ ಕೇಳಬೇಡಿ, ಯೋಚಿಸಿಲ್ಲ 
  2. ಎರಡೂ ಕಷ್ಟ - ಕಾರಣ ಕೇಳಬೇಡಿ, ಯೋಚಿಸಿಲ್ಲ 
  3. ಪ್ರೀತಿ ಪಡೆಯುವುದು ಸುಲಭ ಆದರೆ ಅದನ್ನು ನಿಭಾಯಿಸುವುದು ಕಷ್ಟ 
  4. ಪ್ರೀತಿ ಪಡೆದರೆ ತಾನೇ ನಿಭಾಯಿಸುವ ಬಗ್ಗೆ ಯೋಚಿಸಬೇಕು 
  5. ಪ್ರೀತಿ ಒಂದು ಕ್ಷಣದಲ್ಲಿ ಆಗುತ್ತದೆ ಆದರೆ ಜೀವನ ಪರ್ಯಂತ ನಿಭಾಯಿಸಬೇಕಾಗುತ್ತದೆ 
  6. ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳಿಂದ ಮನಸ್ತಾಪ ಉಂಟಾಗಿ ಪ್ರೀತಿಯನ್ನು ನಿಭಾಯಿಸಲು ಕಷ್ಟವಾಗುತ್ತದೆ 
  7. ಪ್ರೀತಿ ಒಂದು ಹೂವಿನ ತರಹ, ಹೂದಾನಿಯಲ್ಲಿಟ್ಟುಬಿಡಬಹುದು. ಆದರೆ ಹೂವಿನ ಪರಿಮಳವನ್ನು (ನಿಭಾಯಿಸುವಿಕೆ) ಕಾಪಾಡುವುದು ಕಷ್ಟ 
  8. ಜೀವನದ್ಲಲಿನ ಕಹಿ ಅನುಭವಗಳ ಕಾರಣ ಪ್ರೀತಿ ನಿಭಾಯಿಸುವುದು ನಿಜಕ್ಕೂ ಕಷ್ಟ ಕರ 
  9. ಯಾರು ಪ್ರೀತಿ ಮಾಡುವದಕ್ಕೆ ಹೆದರುವುದಿಲ್ಲವೋ ಅವರು ನಿಭಾಯಿಸಲೂ ಹೆದರುವುದಿಲ್ಲ 
  10. ಎರಡೂ ಸುಲಭ - ಇಬ್ಬರಲ್ಲಿಯೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಶಕ್ತಿ ಇದ್ದರೆ 
  11. ಮೊದಲು ತನ್ನನ್ನು ತಾನು ಅರ್ಥ ಮಾಡಿಕೊಂಡರೆ ಎರಡೂ ಸುಲಭ 
  12. ನಾನು ನಿಭಾಯಿಸಲು ತಯಾರು, ಆದರೆ ಅವನೂ/ಅವಳೂ ಕೂಡ ತಯಾರಿದ್ದರೆ 
  13. ಸಂಸ್ಕಾರ ಒಳ್ಳೆಯದಿದ್ದರೆ ಎರಡೂ ಕಷ್ಟಕರವಲ್ಲ 
  14. ಪ್ರೀತಿ ಪಡೆಯಲು ಏನೆಲ್ಲಾ  ಕಷ್ಟಗಳನ್ನು ಎದುರಿಸಿ ಅಭ್ಯಾಸವಾಗಿದ್ದರಿಂದ ನಿಭಾಯಿಸಲು ಅಂತಹ ಕಷ್ಟವಾಗುವುದಿಲ್ಲ 
  15. ಜೀವನ ಪರ್ಯಂತ ಸವಾಲುಗಳಿವೆ, ನಿಭಾಯಿಸಲು ಕಷ್ಟ 
ಮೇಲೆ ಕೊಟ್ಟ ವಿಚಾರಗಳಲ್ಲಿ ನಿಮ್ಮ ಮನಸ್ಸು ಯಾವುದಕ್ಕೆ ಸರಿತೂಗುವುದು? ಪರವಾಗಿಲ್ಲ, ನನಗೆ ತಿಳಿಸಬೇಡಿ, ನಿಮ್ಮಲ್ಲೇ ಇಟ್ಟುಕೊಳ್ಳಿ.

ಈ ವಿಚಾರಗಳನ್ನೆಲ್ಲ ತುಲನೆ ಮಾಡಿದಾಗ ನನಗನ್ನಿಸುವುದು ಹೀಗೆ:
ಪ್ರೀತಿ ಪವಿತ್ರದಿಂದ ಕೂಡಿದ್ದು. ಪ್ರೀತಿ ಮಾಡಿದಮೇಲೆ (ಪ್ರೀತಿ ಇಟ್ಟಮೇಲೆ) ಅದನ್ನು ನಿಭಾಯಿಸಲೇ ಬೇಕು. 
ಇನ್ನು ಗಂಡ ಹೆಂಡತಿಯ ಬಗ್ಗೆ ಹೇಳುವುದಾದರೆ ಮದುವೆಗೆ ಮುಂಚೆ ಇದ್ದ ಪ್ರೀತಿ ನಂತರವೂ ನಿಮ್ಮ ಕಡೆಯಿಂದ ಇರಲೇಬೇಕು, ಮತ್ತು ಹೆಚ್ಚಾಗಲೇ ಬೇಕು, ತೆರೆದ ಮನಸ್ಸಿನಿಂದ ಪ್ರೀತಿ ನಿಭಾಯಿಸಬೇಕು. ಅತಿ ಮುಖ್ಯವಾಗಿ 'ರಾಜಿ' (compromise) ಮಾಡಿಕೊಳ್ಳುವುದನ್ನು ಕಲಿಯಬೇಕು. ಹಿಟ್ಲರ್ ಶಾಹಿ ಅವತಾರ ಯಾರಲ್ಲಿಯೂ ಬೇಡ. ಭಾವನೆಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಿರಿ. ಸಹಭಾಗಿಯ  ಭಾವನೆಗಳಿಗೆ ಮತ್ತು ವಿಚಾರಗಳಿಗೆ ಹುರಿದುಂಬಿಸಿರಿ.  ಇನ್ನೂ ಹೆಚ್ಚಿನ ಪ್ರೀತಿ ಪಡೆಯಿರಿ.
***

Managing Love (Preeti Nibhayisuvudu) - thoughts

While some suggest one should deliberately set out to love, many argue, conceptualise, and feel that love happens spontaneously, suddenly, and somehow on its own. Love here can be any kind: between a boy and a girl, husband and wife, elder sister and younger sister, elder sister and younger brother, elder brother and younger brother, elder brother and younger sister, or among friends.

Please consider the following perspectives regarding 'gaining and managing love':
  1. Both are easy - Don't ask for the reason, I haven't thought about it. 
  2. Both are difficult - Don't ask for the reason, I haven't thought about it. 
  3. Gaining love is easy, but managing it is difficult. 
  4. One should only worry about managing love if they have successfully gained it. 
  5. Love happens in an instant, but it has to be managed for a lifetime. 
  6. In life, small issues lead to disagreements, making it hard to manage love. 
  7. Love is like a flower; you can put it in a vase. But it is difficult to preserve the flower's fragrance (managing it). 
  8. Due to bitter experiences in life, managing love is truly difficult. 
  9. Those who are not afraid to fall in love will also not be afraid to manage it. 
  10. Both are easy - if both individuals possess the capacity to understand each other. 
  11. Both are easy if one first understands oneself. 
  12. I am ready to manage it, but only if he/she is also ready. 
  13. If the upbringing (Sanskaara) is good, neither is difficult. 
  14. Since facing difficulties and getting accustomed to them was necessary to gain love, managing it won't be that difficult. 
  15. There are challenges throughout life, so managing it is hard.

Which of the above views resonates most with your mind? Never mind, don't tell me, keep it to yourself.

After comparing all these ideas, what occurs to me is this:

Love is sacred. Once you love someone (once you have placed your affection), you must manage it.

Regarding husband and wife, the love you had before marriage must remain after marriage, and it must even increase from your side. You must manage this love with an open heart. Most importantly, you must learn to 'compromise' (Rāji Māḍikoḷḷuvudu). The behavior of a dictator (Hitler Shahi Avatara) is unwanted in anyone. Share your feelings with an open mind. Encourage your partner's feelings and thoughts. By doing so, you will receive even greater love.
***


end- thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...