Showing posts with label chintane- CONFUSED PHRASES ಪದಗುಚ್ಛಗಳ ಗೊಂದಲ 🤔😀. Show all posts
Showing posts with label chintane- CONFUSED PHRASES ಪದಗುಚ್ಛಗಳ ಗೊಂದಲ 🤔😀. Show all posts

Wednesday, 30 October 2024

CONFUSED PHRASES ಪದಗುಚ್ಛಗಳ ಗೊಂದಲ 🤔😀



good morning everyone


ದೀಪ ಹಚ್ಚೋದೋ    ದೀಪ ಬೆಳಗೋದೋ 

ಊಟಕ್ಕೆ ಏಳೋದೋ   ಊಟಕ್ಕೆ ಕುಳಿತುಕೊಳ್ಳೋದೋ 

ತಲೆ ತಿನ್ನೋದೋ    ತಲೆ ಕೆಡಿಸೋದೋ   ಬುದ್ಧಿ ಕೆಡಿಸೋದೋ

ಸೈಕಲ್ ಹೊಡೆಯೋದೋ   ಸೈಕಲ್ ತುಳಿಯೋದೋ

ಹೊಟ್ಟೆ ಚುರುಚುರುವೋ    ಹೊಟ್ಟೆ ಹಸಿವೋ 

ಕಾಲು ಕಿತ್ತಾ (ಕಿತ್ತನೋ)      ಜಾಗ ಖಾಲಿ ಮಾಡಿದನೋ 

ಕಾಲ ಕೆಟ್ಟಿತೋ ಅಥವಾ ಜನರು ಕೆಟ್ಟರೋ

ಬೆಳಕು ಚೆಲ್ಲುವುದೋ  ಬುದ್ಧಿ ಹೇಳುವುದೋ   ತಿಳಿ ಹೇಳುವುದೋ  ತಿಳಿ ಕಲ್ಸುವುದೋ   (ಮೇಸ್ತ್ರಿ - 'ತಿಳಿ ಕಲ್ಸು ಮಗ' 😀)

ಬಚ್ಚಿ ಹೋಗುವುದೋ    ಸುಸ್ತಾಗುವುದೋ 

ಮನಸ್ಸು ಕೆಡಿಸಿದನೋ   ತಲೆ ಕೆಡಿಸಿದನೋ 

ಮನಸ್ಸು ಭಾರವಾಯಿತೋ    ಮನಸ್ಸಿಗೆ ಬೇಸರವಾಯಿತೋ/ನೋವಾಯಿತೋ 

ಚಿತ್ರಾನ್ನ - ಮಾಡೋದೋ  ? ಆಗೋದೋ  ? 😀

ದೋಸೆ ಹುಯ್ಯೋದೋ   ದೋಸೆ ಬಿಡೋದೋ ?

ಸ್ನಾನಕ್ಕೆ ಹೋಗುವುದೋ   ಸ್ನಾನಕ್ಕೆ ಇಳಿಯುವುದೋ

ನಿಧಾನವಾಗಿ ಕೂತ್ಕೊಳ್ಳಿನೋ   ನಿಧಾನವಾಗಿ ಊಟ ಮಾಡಿನೋ


ಉತ್ತರ ಕರ್ನಾಕದಲ್ಲಿ...

ಮರ ಇಳೀಲಿಕ್ ಹತ್ಯಾನ ?

ಆವಾ ಬರಲಿಕ್ ಹತ್ಯಾನ?

ಗೊಂದಲವೋ    ಗೋಜಲವೋ ?

*

ನಮ್ ಕುಂದಾಪುರದವರು ಮಾತನಾಡುವುದ್

ಹೊಯ್ ಬಾ = ಹೋಗಿ ಬಾ
ಉಂಡ್ಯಾ  = ಊಟ ಮಾಡಿದೆಯಾ 
ಬರ್ಕ್ =ಬರಬೇಕು 
ಕುಕೋ =ಕುಳಿತುಕೊಳ್ಳು
*


ಅರ್ಥ ಆಗುತ್ತಿಲ್ಲ...
ಯಾರಾದರೂ ಸ್ವಲ್ಪ  ತಿಳಿ (ಕಲ್ಸಿ)  ಹೇಳಿ...
***
end- thoughts documented ಸಂಟೈಂ ಇನ್ October 2024 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...