Showing posts with label nenapu- CHANDAMAMA ಚಂದಮಾಮ 🤔😀. Show all posts
Showing posts with label nenapu- CHANDAMAMA ಚಂದಮಾಮ 🤔😀. Show all posts

Thursday, 30 January 2025

CHANDAMAMA ಚಂದಮಾಮ 🤔😀

 



ನನಗೆ ಚಂದಮಾಮದ  ಎರಡು ಕತೆಗಳು ನೆನಪಾದವು.

ಒಂದು

ಮಂತ್ರಿ ಪದವಿಗೆ ಇಬ್ಬರಿಗೆ ಒಂದೊಂದು 100 ಚಕ್ಕುಲಿ ಇರುವ ಡಬ್ಬ ದೂರದ ಊರಿಗೆ ಕೊಟ್ಟು ಬರಬೇಕು. 2 ದಿನದ ಪ್ರಯಾಣ. ಬುತ್ತಿ ತೆಗೆದುಕೊಂಡು ಹೋಗುವ ಹಾಗಿಲ್ಲ, ಯಾರನ್ನೂ ಮಾತನಾಡಿಸುವ ಹಾಗಿಲ್ಲ. ಊಟ ಬೇಡುವ ಹಾಗಿಲ್ಲ.

ಒಬ್ಬ ಊಟ ಇಲ್ಲದೇ ಊರು ತಲುಪುತ್ತಾನೆ. ಇನ್ನೊಬ್ಬ ಎಲ್ಲ 100 ಚಕ್ಕುಲಿಗಳ ತುದಿಯನ್ನು ಒಂದೇ ತರಹದ ಸ್ವಲ್ಪ ತುಂಡು ಮಾಡಿ ಹಸಿವನ್ನು ನೀಗಿಸಿಕೊಳ್ಳುತ್ತಾನೆ.

ಅವನೇ ಮಂತ್ರಿ ಅಂಥ ತೀರ್ಮಾನವಾಗುತ್ತದೆ.


ಎರಡು

ಇದೇ ತರಹ ಇಬ್ಬರು ಇನ್ನೊಂದು ರಾಜ್ಯಕ್ಕೆ ಹೋಗಿ ಬೂದಿಯನ್ನು ರಾಜನಿಗೆ ಕಾಣಿಕೆ ಅಂತ ಹೇಳಿ ಕೊಟ್ಟು  ಬರಬೇಕು.

ಒಬ್ಬ ಬೂದಿ ಅಂತ ಹೇಳಿದಾಗ ರಾಜನಿಗೆ ಕೋಪ ಬಂದು ಶಿಕ್ಷೆ ಕೊಡುತ್ತಾನೆ. ಅಲ್ಲೇ ಜೈಲು ವಾಸ ಆಗುತ್ತದೆ.

ಇನ್ನೊಬ್ಬ ಇನ್ನೊಂದು ರಾಜ್ಯಕ್ಕೆ ಹೋಗಿ, ದೇವರ ಭಸ್ಮ ಅಂತ ಹೇಳಿ ಸಾಕಷ್ಟು ಉಡುಗೊರೆಯಿಂದ ವಾಪಸ್ಸು ಬರುತ್ತಾನೆ. ಮಂತ್ರಿ ಪದವಿ ಸಿಗುತ್ತದೆ.


1970 ರ ದಶಕದ ಕಥೆ.

ಯಾರಿಗಾದರೂ ನೆನಪಿದೆಯೇ ?

***
end- recollections and thoughts documented ಸಂಟೈಂ ಇನ್ January 2025 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...