Showing posts with label chintane- HIRIYANA MANASSU ಹಿರಿಯನ ಮನಸ್ಸು poem. Show all posts
Showing posts with label chintane- HIRIYANA MANASSU ಹಿರಿಯನ ಮನಸ್ಸು poem. Show all posts

Saturday, 1 February 2025

HIRIYANA MANASSU ಹಿರಿಯನ ಮನಸ್ಸು



1 Feb 2025 - thoughts

ನಿನ್ನೆ, ಪೂಜ್ಯ ವರದರಾಜ ಸ್ವಾಮಿ ದೇವಾಲಯದಲ್ಲಿನ ಒಂದು ಹೃದಯಸ್ಪರ್ಶಿ (Poignant) ಪ್ರಕಟಣೆಯು ನನ್ನೊಳಗೆ ಏನೋ ಆಳವಾಗಿ ಕದಲಿಸಿತು (stirred). ಆ ಸಂದೇಶದಿಂದ ಪ್ರೇರೇಪಿತನಾಗಿ, ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನನಗೆ ಅನಿವಾರ್ಯವೆನಿಸಿತು, ಇದು ಈ ಹೃದಯಸ್ಪರ್ಶಿ ಲೇಖನಕ್ಕೆ ಕಾರಣವಾಯಿತು.


ಹಿರಿಯನ ಮನಸ್ಸು ಅಥವಾ ವೃದ್ಧನ ಮನಸ್ಸು 


ಎಲ್ಲ ಸಮಕಾಲೀನರುಹಿರಿಯರಾಗಿದ್ದಾರೆ

ನಿತ್ಯ ಯೋಚನಾಮಗ್ನರಾಗಿದ್ದಾರೆ.


ಕೆಲವರಿಗೆ ಬೊಜ್ಜು ಬಂದಿದೆ 

ಇನ್ಯಾರಿಗೋ ತಲೆ ಬೋಳಾಗಿದೆ.


ಯಾರಿಗೂ ಜವಾಬ್ದಾರಿ ಇಲ್ಲ

ಆದರೂ ಯೋಚನೆಗಳು ಇದೆಯಲ್ಲ!


ಯೌವ್ವನದಲ್ಲಿ ಓಡುತ್ತಾ ಕಚೇರಿ ತಲುಪುವುದೇ ಪ್ರಾಮುಖ್ಯ

ಮನೆಯೊಡತಿ ಮತ್ತು ಮಕ್ಕಳ ಏಳಿಗೆ ಅತಿಮುಖ್ಯ.


ತಾರುಣ್ಯದಲ್ಲಿತ್ತು ಸಮಯದ ಅಭಾವ

ಈಗ ಸಮಯವೇ ಸಮಯ.


ಯೌವ್ವನದಲ್ಲಿ ತಂದೆ ತಾಯಿಯರ ಬಗ್ಗೆ ನಿರ್ಲಕ್ಷ್ಯ

ಏಕೋ ಅದು ಕಾಡುವುದು ಈಗ ದಿನನಿತ್ಯ.


ಹಾಯ್!  ಜೀವನ ಕೆಲವೊಮ್ಮೆ ಸಾಕೆನಿಸುತ್ತಿದೆ

ಆದರೂ ಜೀವ ಹೋಗುವ ಬಗ್ಗೆ ವಿಚಾರ ಬೇಡವೆನಿಸುತ್ತಿದೆ.


ಎಲ್ಲರಿಗೂ ವಯಸ್ಸಾಗಿದೆ

ಆದರೂ ಮನಸ್ಸು ಪಕ್ವವಾಗಿದೆ.


ಮಿತಿಗೆ ತಕ್ಕಂತೆ ಸಾಧಿಸಿದ್ದೀರಿ

ಇನ್ನಾದರೂ ನೆಮ್ಮದಿಯ ಬಾಳಿನ ಬೆಳಕನ್ನು ಕಾಣಿರಿ.


ಮರಣ ಎಲ್ಲರಿಗೂ ಇರುವುದೇ 

ಸಂತಸದ ಬಾಳು ನಿಮ್ಮ ಕೈಯಲ್ಲಿದೆ.


ಬದುಕು ನಿರಾಳವಾಗಿರಲಿ 

ದ್ವೇಷ ಅಸೂಯೆಯಿಂದ ದೂರವಾಗಿರಲಿ.


ನೋವಿರಲಿ ನಲಿವಿರಲಿ

ಸ್ನೇಹಿತರಲ್ಲಿ ವಿಶ್ವಾಸವಿರಲಿ.


ಸ್ನೇಹಿತರಲ್ಲಿ ಸಂತೋಷ ಹಂಚಿಕೊಳ್ಳಿ 

ಅವರ ಸಂತಸದಲ್ಲಿ ಭಾಗಿಯಾಗುವ ಮನಸ್ಸು ಬೆಳಸಿಕೊಳ್ಳಿ.


ಮನದ ಅಳಲು ಎಲ್ಲಿ ತೋಡಿಕೊಳ್ಳುವಿರಿ?

ಹಾ! ಸ್ನೇಹಿತರಲ್ಲಿ ಮನಬಿಚ್ಚಿ ಹೇಳಿಕೊಳ್ಳಿರಿ.

***


Yesterday, a poignant (ಹೃದಯಸ್ಪರ್ಶಿ) notification at the revered Varadaraja Temple stirred something deep within me. Moved by the message, I felt compelled to share my thoughts and reflections, leading to this heartfelt write-up.


HIRIYANA MANASSU - Aged Person's Mind

All peers have now grown old

In constant contemplation they are rolled.


Some wear the weight of bloat, 

While others’ heads are bare, their youth remote.


No urgent tasks demand their call, 

Yet still, their thoughts attend them all!


In youth, the race to office claimed the day, 

The spouse and children's growth, the primary way.


In prime, the lack of time was keen, 

But now, time itself reigns sovereign, serene.


The parents' care once brushed aside in haste, 

Why does that lapse now haunt them, never erased?


Ah! Sometimes life feels simply done, 

Yet thoughts of final exit, they shun.


All have aged, and wrinkles show, 

Yet the inner mind is seasoned, wise, and slow.


You've achieved what life allotted you, 

Now seek the light of peace, let comfort through.


Death awaits every soul's last turn, 

But a joyful life is yours to earn.


Let life be easy, light, and free, 

Far from envy's grip and dark decree.


Be it pain or be it pleasure's bliss, 

May trust among your friends remain, not miss.


Share happiness with friends you hold so dear, 

Cultivate the heart to share their joy, year after year.


Where will you pour the sorrow of your soul? 

Ah! To your friends, speak freely, make yourself whole.

***


end- written ಸಂಟೈಂ ಇನ್ February 2025

.


go back to... 
    click--> LINKS TO ARTICLES 

...