Showing posts with label chintane- BHAGAVADGITA CHAPER 2 ಭಗವದ್ಗೀತೆ ಅಧ್ಯಾಯ 2. Show all posts
Showing posts with label chintane- BHAGAVADGITA CHAPER 2 ಭಗವದ್ಗೀತೆ ಅಧ್ಯಾಯ 2. Show all posts

Tuesday, 30 January 2001

BHAGAVADGITA CHAPER 2 ಭಗವದ್ಗೀತೆ ಅಧ್ಯಾಯ 2

  


30 Jan 2001 - assignment

Assignment for Chaitra Rao - a write-up

Sometime in January 2001 in Hassan, Chaitra had requested that I provide her with a summary of shlokas 55 to 69 in Chapter 2 of the Bhagavad Gita. She was eager to participate in a recitation competition. Despite feeling uncertain about my abilities, I compiled the summary to meet her urgent request. I'm now archiving it before discarding the original manuscript. This summary has been lying dormant for years, and I'm glad to have finally organised it. Hopefully, it will prove useful to someone in the future. I am glad that Chaitra Rao Got the first place in Karnataka State in the competition held at Mahajana College, Mysore.

The Bhagavad Gita

The Śrīmad Bhagavad Gita, which contains approximately 700 ślokas, is the divine discourse of the Supreme Lord Himself. It encapsulates the essence of the entire Vedas. The Bhagavad Gita is a scripture applicable to all times, all countries, and all faiths. The Gita is a vast ocean of infinite sentiments (or meanings). Just as one obtains jewels by diving deep into the ocean (Ratnākara), a seeker (Jijñāsu) who dives deep and studies this ocean of Gita obtains a treasure trove of ever-new, distinct, and characteristic sentiments, like precious gems.

Lord Krishna made Arjuna the instrument through whom He imparted the great teaching in the form of the Gita to the entire world. The first chapter is called Arjuna Viṣāda Yoga (The Yoga of Arjuna's Despair), while the second chapter is called Sāṅkhya Yoga (The Yoga of Knowledge).

The first 30 ślokas of the second chapter describe the nature of the Ātma Tattva (The principle of the Soul). The subsequent ślokas describe Svadharma (One's own duty) and also reveal the nature of Karma Yoga (The Yoga of Action). Since the instruction truly begins from the 2nd chapter, it is called 'Sāṅkhya Yoga'.

From Śloka 55 to Śloka 69, the characteristics that a Sthitaprajña (a person of steady wisdom or fixed intellect) must possess are explained. Arjuna asks four questions. Those questions are: What are the characteristics of a man of steady intellect? How does that man of steady intellect speak? How does he sit? And how does he walk? The Lord answers these questions in detail from Śloka 55 to Śloka 69 (the last 15 ślokas).

***


ಸುಮಾರು January ೨೦೦೧ರಲ್ಲಿ, ಚೈತ್ರಾಳು ಭಗವದ್ಗೀತೆಯ ಎರಡನೇ ಅಧ್ಯಾಯದ ೫೫ ರಿಂದ ೬೯ನೇ ಶ್ಲೋಕಗಳ ಸಾರಾಂಶವನ್ನು ನನಗೆ ನೀಡುವಂತೆ ಕೇಳಿಕೊಂಡಿದ್ದಳು. ಅವಳು ಒಂದು ಪಠಣ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ಸುಕಳಾಗಿದ್ದಳು. ನನ್ನ ಸಾಮರ್ಥ್ಯದ ಬಗ್ಗೆ ನನಗೆ ಅನಿಶ್ಚಿತತೆ ಇದ್ದರೂ, ಅವಳ ತುರ್ತು ಕೋರಿಕೆಯನ್ನು ಪೂರೈಸಲು ನಾನು ಆ ಸಾರಾಂಶವನ್ನು ಸಿದ್ಧಪಡಿಸಿದೆ. ಮೂಲ ಹಸ್ತಪ್ರತಿಯನ್ನು ವಿಲೇವಾರಿ ಮಾಡುವ ಮೊದಲು, ನಾನು ಅದನ್ನು ಈಗ ದಾಖಲೆಗಾಗಿ (Archive) ಇಡುತ್ತಿದ್ದೇನೆ. ಈ ಸಾರಾಂಶವು ಹಲವು ವರ್ಷಗಳಿಂದ ಸುಮ್ಮನೆ ಬಿದ್ದಿತ್ತು, ಮತ್ತು ಅದನ್ನು ಅಂತಿಮವಾಗಿ ವ್ಯವಸ್ಥೆಗೊಳಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಭವಿಷ್ಯದಲ್ಲಿ ಇದು ಯಾರಿಗಾದರೂ ಉಪಯುಕ್ತವಾಗಬಹುದು ಎಂದು ಆಶಿಸುತ್ತೇನೆ. ಮೈಸೂರಿನ ಮಹಾಜನ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಚೈತ್ರಾ ರಾವ್ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ನನಗೆ ಸಂತೋಷ ತಂದಿದೆ.

ಭಗವದ್ಗೀತೆ

ಸುಮಾರು 700 ಶ್ಲೋಕಗಳನ್ನು ಒಳಗೊಂಡ ಶ್ರೀಭಗವದ್ಗೀತೆ ಸಾಕ್ಷಾತ್ ಭಗವಂತನ ದಿವ್ಯವಾಣಿಯಾಗಿದೆ. ಇದರಲ್ಲಿ ಸಂಪೂರ್ಣ ವೇದಗಳ ಸಾರವನ್ನು ಸಂಗ್ರಹಿಸಲಾಗಿದೆ. ಭಗವದ್ಗೀತೆ ಎಲ್ಲಾ ಕಾಲಕ್ಕೆ, ಎಲ್ಲಾ ದೇಶಕ್ಕೆ, ಎಲ್ಲಾ ಧರ್ಮಕ್ಕೆ, ಅನ್ವಯಿಸುವ ಧರ್ಮ ಗ್ರಂಥ. ಗೀತೆಯು ಅನಂತ ಭಾವಗಳ ಅಗಾಧ ಸಮುದ್ರವಾಗಿದೆ. ರತ್ನಾಕರದಲ್ಲಿ ಆಳವಾಗಿ ಮುಳುಗಿದಾಗ ಹೇಗೆ ರತ್ನಗಳು ಪ್ರಾಪ್ತಿಯಾಗುವುದೋ ಹಾಗೆಯೇ ಈ ಗೀತಸಾಗರದಲ್ಲಿ ಆಳವಾಗಿ ಮುಳುಗಿ ಅಧ್ಯಯನ ಮಾಡಿದಾಗ ಜಿಜ್ಞಾಸುಗಳಿಗೆ ನಿತ್ಯ ನೂತನ ವಿವಿಧ ಲಕ್ಷಣ ಭಾವರತ್ನಗಳ ರಾಶಿಯು ದೊರೆಯುತ್ತದೆ.

ಶ್ರೀ ಭಗವಂತನಾದ ಕೃಷ್ಣನು ಅರ್ಜುನನನ್ನು ನಿಮಿತ್ತವಾಗಿಸಿಕೊಂಡು ಸಮಸ್ತ ವಿಶ್ವಕ್ಕೆ ಗೀತೆಯ ರೂಪದಲ್ಲಿ ಮಹಾನ್ ಉಪದೇಶವನ್ನು ಕೊಟ್ಟಿರುವನು. ಮೊದಲನೆಯ ಅಧ್ಯಾಯವನ್ನು ಅರ್ಜುನ ವಿಷಾದ ಯೋಗ ಎಂದು ಕರೆದರೆ ಎರಡನೆಯ ಅಧ್ಯಾಯವನ್ನು ಸಾಂಖ್ಯ ಯೋಗ ಎಂದು ಕರೆಯುತ್ತಾರೆ. ಎರಡನೆಯ ಅಧ್ಯಾಯದ ಮೊದಲ 30 ಶ್ಲೋಕಗಳ ವರೆಗೆ ಆತ್ಮ ತತ್ವದ ವರ್ಣನೆಯನ್ನು ಕಾಣಬಹುದು. ನಂತರದ ಶ್ಲೋಕಗಳಲ್ಲಿ ಸ್ವಧರ್ಮದ ವರ್ಣನೆಯನ್ನು ಮಾಡಿ ಕರ್ಮಯೋಗದ ಸ್ವರೂಪವನ್ನು ಕೂಡ ತಿಳಿಸಲಾಗಿದೆ. ಉಪದೇಶದ ಪ್ರಾರಂಭವೂ 2 ನೇ ಅಧ್ಯಾಯದಿಂದ ಇರುವುದರಿಂದ ಇದನ್ನು 'ಸಾಂಖ್ಯಯೋಗ' ಎಂದು ಕರೆಯುತ್ತಾರೆ.

ಶ್ಲೋಕ 55 ರಿಂದ ಶ್ಲೋಕ 69ರ ವರೆಗೆ ಸ್ಥಿತಪ್ರಜ್ಞ ಅಂದರೆ ಸ್ಥಿರ ಬುದ್ಧಿಯುಳ್ಳವನಲ್ಲಿ ಏನು ಲಕ್ಷಣಗಳಿರಬೇಕೆಂದು ತಿಳಿಸಿದ್ದಾರೆ. ಅರ್ಜುನನು 4 ಪ್ರಶ್ನೆಗಳನ್ನು ಕೇಳುತ್ತಾನೆ. ಆ ಪ್ರಶ್ನೆಗಳು ಯಾವುವೆಂದರೆ ಸ್ಥಿರ ಬುದ್ಧಿಯುಳ್ಳ ಪುರುಷನ ಲಕ್ಷಣಗಳೇನು, ಆ ಸ್ಥಿರ ಬುದ್ಧಿಯ ಪುರುಷನು ಹೇಗೆ ಮಾತಾಡುತ್ತಾನೆ, ಹೇಗೆ ಕುಳಿತಿರುತ್ತಾನೆ ಮತ್ತು ಹೇಗೆ ನಡೆಯುತ್ತಾನೆ. ಈ ಪ್ರಶ್ನೆಗಳಿಗೆ ಭಗವಂತನು ಉತ್ತರವನ್ನು ವಿವರವಾಗಿ ಶ್ಲೋಕ 55 ರಿಂದ ಶ್ಲೋಕ 69 ವರೆಗೆ (last 15) ಹೀಗೆ ತಿಳಿಸುತ್ತಾನೆ. 

Shloka 55.

श्रीभगवानुवाच ।

प्रजहाति यदा कामान्सर्वान्पार्थ मनोगतान् ।

आत्मन्येवात्मना तुष्टः स्थितप्रज्ञस्तदोच्यते ॥ 55 ॥

ಶ್ರೀಭಗವಾನುವಾಚ |

ಪ್ರಜಹಾತಿ ಯದಾ ಕಾಮಾನ್ಸರ್ವಾನ್ಪಾರ್ಥ ಮನೋಗತಾನ್ |

ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಙ್ಞಸ್ತದೋಚ್ಯತೇ || 55 ||

ಯಾವ ಕಾಲದಲ್ಲಿ ಪುರುಷನು ಮನಸ್ಸಿನಲ್ಲಿರುವ ಎಲ್ಲ ಕಾಮನೆಗಳನ್ನು ಸಂಪೂರ್ಣವಾಗಿ ತ್ಯಜಿಸುತ್ತಾನೋ ಮತ್ತು ಆತ್ಮನಿಂದ ಆತ್ಮನಲ್ಲಿಯೇ ಸಂತುಷ್ಟನಾಗಿರುತ್ತಾನೋ ಆ ಕಾಲದಲ್ಲಿ ಸ್ಥಿತಪ್ರಜ್ಞ ನೆಂದು ಹೇಳಲ್ಪಡುತ್ತಾನೆ. 

56.

दुःखेष्वनुद्विग्नमनाः सुखेषु विगतस्पृहः ।

वीतरागभयक्रोधः स्थितधीर्मुनिरुच्यते ॥ 56 ॥

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ |

ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ || 56 ||

ದುಃಖಗಳು ಪ್ರಾಪ್ತಿಯಾದ ಮೇಲೆ ಮನಸ್ಸಿನಲ್ಲಿ ಉದ್ವೇಗಗಳು ಉಂಟಾಗದೆ ಸುಖಗಳಲ್ಲಿ ಆಶೆ ಇಲ್ಲದೇ ಆಸಕ್ತಿ ಭಯ ಕ್ರೋಧಗಳಿಲ್ಲದೇ ಇರುವಂಥಹನಾದ ಮುನಿಯು ಸ್ಥಿತಪ್ರಜ್ಞನು.

57.

यः सर्वत्रानभिस्नेहस्तत्तत्प्राप्य शुभाशुभम् ।

नाभिनन्दति न द्वेष्टि तस्य प्रज्ञा प्रतिष्ठिता ॥ 57 ॥

ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಮ್ |

ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಙ್ಞಾ ಪ್ರತಿಷ್ಠಿತಾ || 57 ||

ಯಾವನು ಪ್ರಿಯ ವಿಷಯಗಳನ್ನು ಪಡೆದಾಗ ಸಂತೋಷಿಸುವುದಿಲ್ಲವೋ ಹಾಗೂ ದ್ವೇಷಿಸುವುದಿಲ್ಲವೋ ಆತನ ಪ್ರಜ್ಞೆಯು ಸ್ಥಿರವಾಗಿರುವುದು.

58.

यदा संहरते चायं कूर्मो‌உङ्गानीव सर्वशः ।

इन्द्रियाणीन्द्रियार्थेभ्यस्तस्य प्रज्ञा प्रतिष्ठिता ॥ 58 ॥

ಯದಾ ಸಂಹರತೇ ಚಾಯಂ ಕೂರ್ಮೋ‌உಂಗಾನೀವ ಸರ್ವಶಃ |

ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಙ್ಞಾ ಪ್ರತಿಷ್ಠಿತಾ || 58 ||

ಇದಕ್ಕೆ ಉದಾರರಣೆಗೆ ಭಗವಂತನು ಆಮೆಯ ಲಕ್ಷಣಗಳಿಗೆ ಹೋಲಿಸುತ್ತಾನೆ. ಆಮೆಯು ತನ್ನ ಅಂಗಗಳನ್ನು ಒಳಕ್ಕೆಳದುಕೊಳ್ಳುವಂತೆ ಜ್ಞಾನನಿಷ್ಠನಾದ ಯೋಗಿಯೂ ತನ್ನ ಇಂದ್ರಿಯಗಳನ್ನು ತನ್ನ ವಶದಲ್ಲಿರಿಸಿಕೊಂಡಾಗ ಅವನ ಬುದ್ಧಿಯು ಸ್ಥಿರವಾಗಿರುತ್ತದೆ.

59.

विषया विनिवर्तन्ते निराहारस्य देहिनः ।

रसवर्जं रसो‌உप्यस्य परं दृष्ट्वा निवर्तते ॥ 59 ॥

ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ |

ರಸವರ್ಜಂ ರಸೋ‌உಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ || 59 ||

ಸ್ಥಿತಪ್ರಜ್ಞ ಪುರುಷನ ಆಸಕ್ತಿಯೂ ಕೂಡ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡು ನಿವೃತ್ತಿಹೊಂದುತ್ತದೆ.

60.

यततो ह्यपि कौन्तेय पुरुषस्य विपश्चितः ।

इन्द्रियाणि प्रमाथीनि हरन्ति प्रसभं मनः ॥ 60 ॥

ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ |

ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ || 60 ||

ವಿಕ್ಷೇಪವನ್ನುಂಟುಮಾಡುವ ಇಂದ್ರಿಯಗಳು ಜ್ಞಾನಿಯ ಮನಸ್ಸನ್ನೂ ಕೂಡ ಬಲಾತ್ಕಾರದಿಂದ ಹರಣ ಮಾಡುವುವು.

61.

तानि सर्वाणि संयम्य युक्त आसीत मत्परः ।

वशे हि यस्येन्द्रियाणि तस्य प्रज्ञा प्रतिष्ठिता ॥ 61 ॥

ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ |

ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಙ್ಞಾ ಪ್ರತಿಷ್ಠಿತಾ || 61 ||

ಆದ್ದರಿಂದ ಇಂದ್ರಿಯಗಳನ್ನೆಲ್ಲಾ ನಿಗ್ರಹಿಸಿ ಭಗವಂತನ ಧ್ಯಾನದಲ್ಲಿ ಕುಳಿತುಕೊಳ್ಳಬೇಕು.

62 and 63.

ध्यायतो विषयान्पुंसः सङ्गस्तेषूपजायते ।

सङ्गात्सञ्जायते कामः कामात्क्रोधो‌உभिजायते ॥ 62 ॥

ಧ್ಯಾಯತೋ ವಿಷಯಾನ್ಪುಂಸಃ ಸಂಗಸ್ತೇಷೂಪಜಾಯತೇ |

ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋ‌உಭಿಜಾಯತೇ || 62 ||

क्रोधाद्भवति संमोहः संमोहात्स्मृतिविभ्रमः ।

स्मृतिभ्रंशाद्बुद्धिनाशो बुद्धिनाशात्प्रणश्यति ॥ 63 ॥

ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ಸ್ಮೃತಿವಿಭ್ರಮಃ |

ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ || 63 ||

ವಿಷಯಗಳನ್ನು ಚಿಂತಿಸುವ ಪುರುಷನಿಗೆ ಆ ವಿಷಯಗಳಲ್ಲಿ ಆಸಕ್ತಿಯುಂಟಾಗುತ್ತದೆ. ಆಸಕ್ತಿಯಿಂದಾಗಿ ವಿಷಯಗಳ ಕಾಮನೆ ಉಂಟಾಗುತ್ತದೆ. ಕಾಮದಲ್ಲಿ ವಿಘ್ನವುಂಟಾಗುವುದರಿಂದ ಕ್ರೋಧವು ಉತ್ಪತ್ತಿಯಾಗುತ್ತದೆ. ಕ್ರೋಧದಿಂದ ಸ್ಮೃತಿಭ್ರಮೆಯಾಗುತ್ತದೆ. ಸ್ಮೃತಿಭ್ರಮೆಯಿಂದ ಬುದ್ದಿ ನಾಶವಾಗುತ್ತದೆ. ಬುದ್ದಿನಾಶದಿಂದ ಪುರುಷನು ತನ್ನ ಸ್ಥಿತಿಯಿಂದ ಜಾರಿ ಬಿದ್ದು ತಾನು ನಾಶವಾಗುತ್ತಾನೆ. 

64.

रागद्वेषविमुक्तैस्तु विषयानिन्द्रियैश्चरन् ।

आत्मवश्यैर्विधेयात्मा प्रसादमधिगच्छति ॥ 64 ॥

ರಾಗದ್ವೇಷವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ |

ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ || 64 ||

ಆದರೆ ಅಂತಃಕರಣವನ್ನು ತನ್ನ ಅಧೀನ ಮಾಡಿಕೊಂಡಿರುವ ಸಾಧಕನು ತನ್ನ ವಶದಲ್ಲಿರುವ ತ್ಯಾಗ ದ್ವೇಷರಹಿತವಾದ ಇಂದ್ರಿಯಗಳ ಮೂಲಕ ಸಂಯಮ ಚಿತ್ತವುಳ್ಳ ಮನುಷ್ಯನು ಪ್ರಸನ್ನತೆಯನ್ನು ಹೊಂದುವನು.

65.

प्रसादे सर्वदुःखानां हानिरस्योपजायते ।

प्रसन्नचेतसो ह्याशु बुद्धिः पर्यवतिष्ठते ॥ 65 ॥

ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ |

ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ || 65 ||

ಅಂತಃಕರಣದಲ್ಲಿ ಆಧ್ಯಾತ್ಮಿಕ ಪ್ರಸನ್ನತೆ ಉಂಟಾದ ಮೇಲೆ ಇವನ ಸಂಪೂರ್ಣ ದುಃಖಗಳ ನಾಶವಾಗುತ್ತದೆ. 

66.

नास्ति बुद्धिरयुक्तस्य न चायुक्तस्य भावना ।

न चाभावयतः शान्तिरशान्तस्य कुतः सुखम् ॥ 66 ॥

ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ |

ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ || 66 ||

ಮನಸ್ಸು ಇಂದ್ರಿಯಗಳನ್ನು ಗೆಲ್ಲದಿರುವ ಪುರುಷನಲ್ಲಿ ಬುದ್ಧಿಯು ಇರುವುದಿಲ್ಲ. ಆಯುಕ್ತ ಮನುಷ್ಯನ ಅಂತಃಕರಣದಲ್ಲಿ ಭಾವನೆಯೂ ಇರುವುದಿಲ್ಲ. ಹಾಗೆಯೇ ಭವಾಹೀನನಾದವಣಿಗೆ ಶಾಂತಿಯು ಇರುವುದಿಲ್ಲ. ಶಾಂತಿ ಇಲ್ಲದವಣಿಗೆ ಸುಖವು ಹೇಗೆ ತಾನೇ ಸಿಗಬಲ್ಲದು ?

67. 

इन्द्रियाणां हि चरतां यन्मनो‌உनुविधीयते ।

तदस्य हरति प्रज्ञां वायुर्नावमिवाम्भसि ॥ 67 ॥

ಇಂದ್ರಿಯಾಣಾಂ ಹಿ ಚರತಾಂ ಯನ್ಮನೋ‌உನುವಿಧೀಯತೇ |

ತದಸ್ಯ ಹರತಿ ಪ್ರಙ್ಞಾಂ ವಾಯುರ್ನಾವಮಿವಾಂಭಸಿ || 67 ||

ಇದಕ್ಕೆ ಭಗವಂತನು ವಾಯು ಮಾತು ನೌಕೆಯ ದೃಷ್ಟಾಂತವನ್ನು ಕೊಡುತ್ತಾನೆ. ಚಲಿಸುತ್ತಿರುವ ಇಂದ್ರಿಯಗಳನ್ನು ಯಾವ ಮನಸ್ಸು ಅನುಸರಿಸುತ್ತಿದೆಯೋ ಅದು ನೀರಿನಲ್ಲಿರುವ ದೋಣಿಯನ್ನು ಗಾಳಿಯು ಹೊಡೆದುಕೊಂಡು ಹೋಗುವಂತೆ ಇವನ ಬುದ್ಧಿಯನ್ನು ಅಥವಾ ಪ್ರಜ್ಞೆಯನ್ನು ಅಪಹರಿಸುತ್ತದೆ.

68, 69.

तस्माद्यस्य महाबाहो निगृहीतानि सर्वशः ।

इन्द्रियाणीन्द्रियार्थेभ्यस्तस्य प्रज्ञा प्रतिष्ठिता ॥ 68 ॥

ತಸ್ಮಾದ್ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ |

ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಙ್ಞಾ ಪ್ರತಿಷ್ಠಿತಾ || 68 ||

या निशा सर्वभूतानां तस्यां जागर्ति संयमी ।

यस्यां जाग्रति भूतानि सा निशा पश्यतो मुनेः ॥ 69 ॥

ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ |

ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ || 69 ||

ಅಂಧಕಾರಮಯ ಅಜ್ಞಾನದಿಂದ ವಿಷಯಾಸಕ್ತ ಮನುಷ್ಯರು ಅವುಗಳನ್ನು ನಿತ್ಯ ಮತ್ತು ಸುಖರೂಪಿ ಎಂದು ಭಾವಿಸುತ್ತಾರೆ. ಯಾವ ನಾಶವಾಗುವ ಸಾಂಸಾರಿಕ ಸುಖದ ಪ್ರಾಪ್ತಿಯಲ್ಲಿ ಎಲ್ಲ ಪ್ರಾಣಿಗಳು ಎಚ್ಚರವಾಗಿರುತ್ತವೆಯೋ ಪರಮಾತ್ಮ ತತ್ವವನ್ನು ಅರಿತಿರುವ ಮುನಿಗೆ ಅದು ರಾತ್ರಿಗೆ ಸಮಾನ. ಅವಿವೇಕಿ ಮನುಷ್ಯನು ಸ್ವಯಂ ಪ್ರಕಾಶಮಯ ಪರಮಾತ್ಮನನ್ನು ನೋಡಲಾರನು. ಅಂದರೆ ಅಜ್ಞಾನಿಗಳಿಗೆ ಪ್ರಕಾಶಮಯ ಪರಮಾತ್ಮನನ್ನು ಕಾಣದೆ ಅಂಧಕಾರವಿರುತ್ತದೆ. ಇದೇ ಅಂಧಕಾರವು ಸ್ಥಿತಪ್ರಜ್ಞ ಪುರುಷನಿಗೆ ಹಗಲಿನಂತೆ ಇರುತ್ತದೆ.

ಭೋಗಗಳ ಕಾಮನೆಯುಳ್ಳ ಅಜ್ಞಾನಿ ಮನುಷ್ಯನಿಗೆ ಶಾಂತಿಯನ್ನು ಪಡೆಯಲಾಗುವುದಿಲ್ಲ. ಪರಮಾತ್ಮ ತತ್ವವನ್ನು ಅರಿತ ಜ್ಞಾನಿಯು ಪರಮಶಾಂತಿಯನ್ನು ಪಡೆಯುತ್ತಾನೆ. ಆದ್ದರಿಂದ ಯಾವ ಮನುಷ್ಯನು ತನ್ನ ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುವನೋ ಅವನೇ ನಿಜವಾದ ಸ್ಥಿರ ಬುದ್ಧಿಯವನೆಂಬ ಮಾತನ್ನು ಸಿದ್ಧಪಡಿಸುತ್ತದೆ. 

end- written and documented sometime ಇನ್ 2001

chapter 14 summary (this is different for another competition)


***


end- thoughts documented ಸಂಟೈಂ ಇನ್ 2001 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...