30 Dec 2002 - ಲಘುಬರಹ
Imaginative story-Time-->when lazy men are still going to office
ಕಾರಣಾಂತರದಿಂದ ನನ್ನವಳು ತವರೂರಿಗೆ ಹೋಗಬೇಕಾಗಿದ್ದಿದ್ದರಿಂದ ನಾನು ಎರಡು ದಿನ ಆಫೀಸಿಗೆ ರಜೆ ಹಾಕಬೇಕಾಗಿತ್ತು. ಕಾರಣ ಮಗ ಹಾಗೂ ಮಗಳನ್ನು ನೋಡಿಕೊಳ್ಳುವ ಭಾರ ನನ್ನ ಮೇಲೆ ಬಿದ್ದಿತ್ತು. ದೇವರ ದಯೆಯಿಂದ ಮಕ್ಕಳ ಶಾಲೆಗೆ ಜನಗಣತಿಯ ಪ್ರಯುಕ್ತ ಎರಡು ದಿನಗಳ ರಜೆ ಘೋಷಿಸಿದ್ದರಿಂದ ಮಕ್ಕಳಿಗೆ ಶಾಲೆಯಲ್ಲಿ ಕೊಟ್ಟಂತಹ ಹೋಮ್ ವರ್ಕ್, ಸಮವಸ್ತ್ರಗಳ ಇಸ್ತ್ರಿ, ಬೂಟುಗಳ ಪಾಲಿಶ್, ಶಾಲೆಗೆ ಕೊಂಡೊಯ್ಯಲು ಉಪಾಹಾರದ ವ್ಯವಸ್ಥೆ ಇತ್ಯಾದಿ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಸಂದರ್ಭ ಬರಲಿಲ್ಲ.
ಅಡುಗೆ ಕೋಣೆಗೇ ಕಾಲಿಡದ ನಾನು ಈಗ ಎರಡು ದಿನ ಹೇಗಪ್ಪ ಊಟದ ವ್ಯವಸ್ಥೆ ಮಾಡುವುದು ಎಂದು ಯೋಚನಾಮಗ್ನನಾದೆನು. ಬೆಳಿಗ್ಗೆ ಕಾಮತ್ ಕೆಫೆಯಿಂದ ಇಡ್ಲಿ ವಡೆ ತರುವುದು ಎಂದು ನಿರ್ಧರಿಸಿದೆ. ಮಕ್ಕಳನ್ನು ಮನೆಯ ಒಳಗೆ ಬಿಟ್ಟು ಬಾಗಿಲು ಹಾಕಿಕೊಳ್ಳಲು ಹೇಳಿ ಮೋಟಾರ್ ಸೈಕಲ್ ನಲ್ಲಿ ಹೋಟೆಲಿಗೆ ಹೋದೆ. ಉಪಹಾರವನ್ನು ಪಾರ್ಸೆಲ್ ಮಾಡಲು ಹೇಳಿ ಕುರ್ಚಿಯಲ್ಲಿ ಕುಳಿತು ಅಲ್ಲಿಯೇ ಒಂದು ಲೋಟ ಕಾಫಿ ತರಲು ಹೇಳಿದೆ. ಕಾಫಿ ಕುಡಿದು ಮನೆಗೆ ಪಾರ್ಸೆಲ್ ತಂದದ್ದಾಯಿತು, ಮಕ್ಕಳು ತಿಂದದ್ದೂ ಆಯಿತು.
ಸದ್ಯ ಹೇಗೋ ಬೆಳಿಗ್ಗಿನ ಕತೆ ಕಳೆಯಿತು ಎಂದು ಯೋಚಿಸುತ್ತಿರುವಾಗಲೇ ಮಧ್ಯಾಹ್ನದ ಚಿಂತೆ ಪ್ರಾರಂಭವಾಯಿತು. ಮಧ್ಯಾಹ್ನ ಹರ್ಷಮಹಲ್ ಹೋಟೆಲಿಗೆ ಊಟಕ್ಕೆ ಎಲ್ಲಾರೂ ಹೋಗಿ ನಂತರ ಸಾಯಂಕಾಲ ಮನೆಯ ಹೊರಗೆ ಮೂಲೆಯಲ್ಲಿ ಮಾರುತ್ತಿದ್ದ ಆಲೂಗಡ್ಡೆ ಬೋಂಡ ತಂದು ಮತ್ತೆ ರಾತ್ರಿ ಕಾಮತ್ ಕೆಫೆಯಲ್ಲಿ ಉತ್ತರ ಭಾರತದ ಊಟ ನಾವೆಲ್ಲ ಮುಗಿಸಿದಾಗ ದೊಡ್ಡ ನಿಟ್ಟಿಸುರು ಬಿಟ್ಟೆನು.
ಬೆಳಿಗ್ಗೆ ಆದದ್ದು ಗೊತ್ತಾಗಲೇ ಇಲ್ಲ. ಮತ್ತೆ ಪ್ರಾರಂಭ ಹೊಟ್ಟೆ ತುಂಬಿಸುವ ಯೋಚನೆ. ಇಂದು ಶಾನ್ ಭಾಗ್ ಹೋಟೆಲ್ಲಿನಿಂದ ಉಪಾಹಾರ ತಂದು ಮಧ್ಯಾಹ್ನ ಹರ್ಷಮಹಲ್ ಹೋಟೆಲ್ ನಲ್ಲಿ ಊಟ ಕೂಡ ಮಾಡಿದೆವು.
ಆಗಲೇ ಐದು ಸಲ ಉಪಹಾರ/ಭೋಜನ ಗೃಹದ ತಿನಿಸು ನಮಗೆಲ್ಲ ಬೇಸರ ತಂದಿತ್ತು. ಹಾಗಾಗಿ ನನ್ನ ಮಗಳು ರಾತ್ರಿಗೆ ನಾನೇ ಏನಾದರೂ ಹೊಸರುಚಿ ಮನೆಯಲ್ಲೇ ಮಾಡಬೆಂಕೆಂದು ಒತ್ತಾಯಿಸಿದಾಗ ನನ್ನ ಮನಸ್ಸು ಕೂಡ ಏಕೆ ಪ್ರಯತ್ನಿಸಬಾರದು ಎಂದು ಹೇಳಿತು.
ಆದರೆ ಏನು ತಯಾರಿಸಬೇಕೆಂಬುದೇ ಪ್ರಶ್ನೆ. ಮಗಳು ಕೂಡಲೇ ಸುಮಿತ್ ಮಿಕ್ಸರ್ ಕುಕ್ಕರ್ ಜೊತೆಗೆ ಕೊಟ್ಟಿದ್ದ ಪಾಕ ಪುಸ್ತಕ ಹುಡುಕಿ ತೆಗೆದುಕೊಟ್ಟಳು. ನನ್ನ ದುರದ್ರುಷ್ಟಕ್ಕೆ ಈ ಪುಸ್ತಕ ಇಂಗ್ಲೀಷನಲ್ಲಿ ಬರೆದಿದ್ದರಿಂದ ತರಕಾರಿ, ಮಸಾಲೆ, ಬೇಳೆ ಇತರೆ ಪದಾರ್ಥಗಳ ಒಂದೂ ಹೆಸರು ನಮಗೆ ಇಂಗ್ಲಿಷಿನಲ್ಲಿ ಗೊತ್ತಿಲ್ಲದೇ ಇರುವುದು ಮನದಟ್ಟಾಯಿತು. ಇಂಗ್ಲಿಷ್-ಕನ್ನಡ ನಿಘಂಟು ಮನೆಯಲ್ಲಿರದ ಕಾರಣ, ಮೊದಲು ಅದನ್ನು ಖರೀದಿಸಲು ಪುಸ್ತಕದ ಅಂಗಡಿಗೆ ಹೋಗಬೇಕು, ಬೇಕಾಗಿರುವ ಪದಾರ್ಥಗಳ ಪಟ್ಟಿ ತಯಾರಿಸಬೇಕು ನಂತರ ಮತ್ತೆ ಬಜಾರಿಗೆ ಹೋಗಿ ಪದಾರ್ಥಗಳನ್ನು ತರಬೇಕು. ಸಮಯದ ಅಭಾವ ಇದೆ. ಆದ್ದರಿಂದ ಬೇರೆ ಕನ್ನಡದಲ್ಲಿ ಕೊಟ್ಟಿರುವ ಪುಸ್ತಕಗಳನ್ನು ಹುಡುಕಲು ನಾನು ಮತ್ತು ನನ್ನ ಮಗಳು ಪ್ರಾರಂಭಿಸಿದೆವು. ಮನೆಯಲ್ಲಿದ್ದ ಭಾನುವಾರದ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳನ್ನೆಲ್ಲ ಜಾಲಾಡಿದರೂ ವ್ಯರ್ಥ ಶ್ರಮವಾಯಿತು.
ಹಾಗೆಯೇ ಯೋಚಿಸುತ್ತ ಕುಳಿತಿರುವಾಗ ಮಗಳು ಲಾಟರಿ ಸಿಕ್ಕಿದವಳಂತೆ ಕೂಗಿ ನನ್ನವಳು ಹೋಗುತ್ತಿದ್ದ ವನಿತಾ ಸಮಾಜದ ತ್ರೈಮಾಸಿಕ ಪತ್ರಿಕೆಗಳನ್ನು ಹೊರತೆಗೆದಳು. ನನಗಂತೂ ಹೊಸರುಚಿ ತಯಾರಿಸಿದಷ್ಟೇ ಸಂತೋಷ ಆ ಪತ್ರಿಕೆಗಳನ್ನು ನೋಡಿದಾಗ ಆಯಿತು. ಏಕೆಂದರೆ ಪ್ರತಿಯೊಂದು ಪತ್ರಿಕೆಯಲ್ಲೂ ಹೊಸರುಚಿ ಬಗ್ಗೆ ಬರೆದಿದ್ದರು.
ಈಗ ಯಾವ ಪದಾರ್ಥ ತಯಾರಿಸಬೇಕೆಂದು ನಾನು ಮತ್ತು ನನ್ನ ಮಗಳು ತಲೆಕೆಡಿಸಿಕೊಳ್ಳಲು ಪ್ರಾರಂಭಿಸಿದೆವು. ನನ್ನ ಮಗ ಇನ್ನೂ ಚಿಕ್ಕವನಿದ್ದಿದ್ದರಿಂದ ನಮ್ಮ ಪರದಾಟದ ಬಗೆಗೆ ಕಿಂಚಿತ್ತೂ ಚಿಂತಿಸದೆ ತನ್ನ ಪಾಡಿಗೆ ತಾನು ಧಾಂಧಲೆ ನಡೆಸುತ್ತಿದ್ದು ಮಧ್ಯೆ ಮಧ್ಯೆ ಬಂದು ತನಾಗಿಷ್ಟವಾದ ಕ್ಯಾರೆಟ್ ಹಲ್ವ ಮಾಡು ಎಂದು ನನ್ನ ಪೀಡಿಸುತ್ತಿದ್ದನು.
ಪತ್ರಿಕೆಗಳಲ್ಲಿ ನಮಗೆ ಕಂಡಿದ್ದು ಅವಿಲ್ ಕರಿ, ಅಚ್ಚಪ್ಪಂ, ಪತ್ರೊಡೆ, ಅತ್ರಾಸ, ಬನಾನ ಡಿಲೈಟ್ ಮುಂತಾದುವುಗಳು. ನಾನೋ ಉಪ್ಪಿಟ್ಟು ಅಥವಾ ಸಜ್ಜಿಗೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಹುಡುಕಲು ತಡಕಾಡಿದೆ. ನನ್ನಂಥವರಿಗೋಸ್ಕರವಾದರೂ ಉಪ್ಪಿಟ್ಟು, ಸಜ್ಜಿಗೆ, ಒಗ್ಗರಣೆ ಅನ್ನ, ಟೊಮೆಟೊ ಸಾರು ಇಂಥಹವುಗಳನ್ನು ತಯಾರಿಸುವುದು ತಿಳಿಸಿರಿ ಎಂದು ನಾಳೆ ಇವಳು ಬಂದಮೇಲೆ ಸಲಹೆ ಕೊಡಬೇಕೆಂದು ನಿರ್ಧರಿಸಿದೆನು.

ಮಗಳನ್ನು ಕೇಳಿದೆ-
"ಯಾವುದನ್ನು ಮಾಡೋಣ ಹೇಳು"
ಮಗಳು ಸೂಚಿಸಿದಳು -
"ಕ್ಯಾರೆಟ್ ಹಲ್ವದ ಬಗ್ಗೆ ಕೊಟ್ಟಿದ್ದಾರೆ. ಅದನ್ನೇ ಮಾಡು ......ಬೇಡಾ, ಹಲ್ವ ಬೇಡಾ" ಎಂದು ತನ್ನನ್ನೇ ತಿದ್ದಿಕೊಂಡಳು.
"ಏಕೆ, ಅದನ್ನೇ ಮಾಡೋಣ, ಹೇಗೂ ನಿನ್ನ ತಮ್ಮನಿಗೂ ಅದು ಇಷ್ಟ"
"ಬೇಡವೇ ಬೇಡ, ಏಕೆಂದರೆ ಅದನ್ನು ತಯಾರಿಸಲು ನಿಪುಣತೆ ಬೇಕು. ಸ್ವಲ್ಪ ತಪ್ಪಿದರೂ ಕೆಟ್ಟು ಹೋಗುತ್ತದೆ. ನಿನಗೋ ಅನ್ನ ಕೂಡ ಮಾಡಲು ಬರುವುದಿಲ್ಲ, ಇನ್ನು ಕ್ಯಾರೆಟ್ ಹಲ್ವ ನೀನು ಮಾಡಿದ ಹಾಗೇ". ಮಗಳು ಹೇಳುವುದೂ ಸರಿಯೇ. "ಹಲ್ವ ಕ್ಯಾನ್ಸಲ್" ಎಂದೆ.
"ವೆಳ್ಳಿಯಪ್ಪಮ್" ತಯಾರು ಮಾಡೋಣ ಎಂದು ಏನೇನು ಸಾಮಗ್ರಿಗಳು ಬೇಕೆಂದು ಓದಿದೆ. ಅಕ್ಕಿ-ಇದೆ, ತೆಂಗಿನಕಾಯಿ-ಇದೆ, ಸಕ್ಕರೆ-ಇದೆ, ಉಪ್ಪು-ಇದೆ, ತೆಂಗಿನಕಾಯಿಯ ನೀರು ಹಿಂದಿನ ದಿನ ತೆಗೆದಿರಿಸಿದ್ದು. "ಇದನ್ನು ಎಲ್ಲಿಂದ ತರುವುದು ಪುಟ್ಟಿ" ಎಂದು ಮಗಳಿಗೆ ಪ್ರಶ್ನೆ ಹಾಕಿದೆ. ಅದಕ್ಕವಳು "ಕ್ಯಾನ್ಸಲ್" ಎಂದಳು.
ಈಗ ಮುಂದಿನದು "ಅವಿಲ್ ಕರಿ". ಬಾಳೆಕಾಯಿ, ಕುಂಬಳಕಾಯಿ, ಸುವರ್ಣಗೆಡ್ಡೆ, ಪರವಾಗಿಲ್ಲ ಎಲ್ಲ ಮಾರುಕಟ್ಟೆಯಲ್ಲಿ ಲಭ್ಯ. ನುಗ್ಗೆಕಾಯಿ 3 ಬೇಕು. ಈಗೆಲ್ಲಿಯ ನುಗ್ಗೆಕಾಯಿಯ ಕಾಲ. ಆದಂತೂ ಈ ಊರಿನಲ್ಲಿ ಸಿಗುವುದಿಲ್ಲ. ಮಗಳು ಹೇಳಿದಳು "ಕ್ಯಾನ್ಸಲ್, ಮುಂದಿನದು".
"ನನ್ನ ಅದೃಷ್ಟ ಸರಿಯಿಲ್ಲ, ನೀನೇ ಓದು" ಎಂದು ಮಗಳಿಗೆ ಹೇಳಿದೆ.
"ಉಣ್ಣಿಯಪ್ಪನ್" ಮಗಳು ಓದಲು ಪ್ರಾರಂಭಿಸಿದಳು. ಅಕ್ಕಿ, ಬೆಲ್ಲ, ತೆಂಗಿನಕಾಯಿ, ಜೀರಿಗೆ, ಎಳ್ಳು, ಏಲಕ್ಕಿ, ಉಪ್ಪು ಎಲ್ಲಾ ಇವೆ. ತೆಂಗಿನ ಎಣ್ಣೆ ಅರ್ಧ ಲೀಟರ್ ಎಂದು ಓದುತ್ತಿದ್ದಂತೆ ಮುಖವನ್ನು ಎಣ್ಣೆ ಕುಡಿದ ಮುಖದಂತೆ ನನ್ನ ಮಗಳು ಮಾಡಿಕೊಂಡಳು.
"ಯೋಚಿಸಬೇಡ, ನಾವು ಕಡ್ಲೆಕಾಯಿ ಎಣ್ಣೆಯಲ್ಲಿ ತಯಾರು ಮಾಡೋಣ" ಮಗಳಿಗೆ ಸಮಾಧಾನ ಹೇಳಿದೆ. ಸಂತೋಷದಿಂದ ಮಾಡುವ ವಿಧಾನವನ್ನು ಓದಲು ಮತ್ತೆ ಪ್ರಾರಂಭಿಸಿದಳು.
"ಅಕ್ಕಿಯನ್ನು ತೊಳೆದು 3 ಗಂಟೆಗಳ ಕಾಲ ನೆನಸಬೇಕು". "ನಿಲ್ಲಿಸು" ಎಂದೆ. "ಈಗಾಗಲೇ ರಾತ್ರಿ ಏಳೂವರೆ ಗಂಟೆ ಆಗಿದೆ. ಮೂರು ಗಂಟೆ ನೆನಸುವುದು ಎಂದೆರೆ ರಾತ್ರಿ ಹತ್ತೂವರೆ ಆಗುತ್ತೆ. ತಯಾರಿಸಲು ಒಂದು ಗಂಟೆಯಾದರೂ ಬೇಕು. ಊಟ ಮುಗಿಸುವಾಗ ರಾತ್ರಿ ಹನ್ನೆರಡು ಹೊಡಿಯುತ್ತೆ" ಎಂದಾಗ ನನ್ನ ಮಗ "ಕ್ಯಾನ್ಸಲ್" ಎಂದು ಕಿರುಚಿದನು.
"ಬನಾನ ಡಿಲೈಟ್" ಓದಲು ಮತ್ತೇ ಪ್ರಾರಂಭಿಸಿದಳು. "ಬೇಕಾಗುವ ಪದಾರ್ಥಗಳು, ನೇಂದ್ರ ಬಾಳೆ 4.

"ನೇಂದ್ರ ಬಾಳೆ ಇಲ್ಲಿ ಸಿಗುವುದಿಲ್ಲ ... ಮುಂದಿನದು"
"ದಾಸವಾಳ ಸೊಪ್ಪಿನ ಇಡ್ಲಿ, ಬೇಕಾಗುವ ಸಾಮಗ್ರಿಗಳು - ಅಕ್ಕಿ, ಬಿಳೀ ದಾಸವಾಳ ಸೊಪ್ಪು ಎರಡು ಮುಷ್ಟಿ". ನಾನು ಯೋಚನೆಯಲ್ಲಿ ಮುಳುಗಿದೆ. ಈ ರಾತ್ರಿಯಲ್ಲಿ ದಾಸವಾಳದ ಸೊಪ್ಪು, ಅದೂ ಬಿಳೀದನ್ನು ಯಾರ ಮನೆಯಿಂದ ಕದ್ದು ತರಬಹುದು? ನನ್ನ ಮುಖ ನೋಡಿ ಮಗಳು ತಾನಾಗಿಯೇ "ಕ್ಯಾನ್ಸಲ್" ಎಂದಳು.
ನಂತರ ಮಗಳು "ಮುಂದಿನ ತಿನಸು" ಎಂದಾಗ, "ಫುಲ್ಸ್ಟಾಪ್" ಎಂದೆ.
"ಯಾಕೆ ಪಪ್ಪಾ?"
"ಈಗಾಗಲೇ ರಾತ್ರಿ ಏಳೂವರೆ ಗಂಟೆಯಾಗಿದೆ. ಇನ್ನು ತಿನಿಸುಗಳ ಬಗ್ಗೆ ಓದಿ ನಿರ್ಧಾರ ತೆಗೆದುಕೊಳ್ಳಲು ಇಪ್ಪತ್ತು ನಿಮಿಷಗಳಾದರೂ ಬೇಕು. ನಂತರ ಅಡುಗೆ ಕೋಣೆಯಲ್ಲಿರುವ 50 ಡಬ್ಬಿಗಳನ್ನು ತೆಗೆದು ಬೇಕಾದ ಸಾಮಗ್ರಿಗಳನ್ನು ಜೋಡಿಸಿಡಲು ಕನಿಷ್ಠ ಅರ್ಧ ಗಂಟೆಯಾದರೂ ಬೇಕು. ಮನೆಯಲ್ಲಿರದ ಪದಾರ್ಥಗಳನ್ನು ತರಲು ಮಾರುಕಟ್ಟೆಗೆ ಹೋಗಿ ಬರಲು ಅರ್ಧ ಗಂಟೆಯಾದರೂ ಬೇಕು. ನಂತರ ತಯಾರಿಸಲು ಒಂದು ಗಂಟೆಯಾದರೂ ಬೇಕು-ನೆನೆಸುವುದು ಇಲ್ಲದಿದ್ದರೆ. ಇದೆಲ್ಲ ಮುಗಿಸುವಷ್ಟರಲ್ಲಿ ನೀವಿಬ್ಬರೂ ನಿದ್ದೆ ಹೋಗಿರುತ್ತೀರಾ. ಆದ್ದರಿಂದ ರೆಡೀ, ಸ್ಟೆಡೀ, ಗೋ ಕಾಮತ್ ಕೆಫೆ".

***
NEW DISH Imaginative story-Time-->when lazy men are still going to office
Two Days in the Kitchen
My wife had to travel to her native place for a few days, so I took two days of leave from the office as the sole responsibility of looking after my son and daughter fell upon me. By God's grace, the children's school declared a two-day vacation for the census, saving me the worry of overseeing homework, ironing uniforms, polishing shoes, or arranging school snacks.
The Restaurant Reliance
As someone who never stepped into the kitchen, I immediately began pondering how I would manage two days of meals. I decided to bring Idli Vada from Kamat Cafe in the morning. I asked the children to stay inside and lock the door and then rode my motorcycle to the hotel. I requested the breakfast parcel and sat down for a quick cup of coffee. I brought the parcel home, and the children ate it up quickly.
Just as I was thinking, "I've managed the morning successfully," the worry about lunchtime started. In the afternoon, we all went to Harshamahal Hotel for lunch, and in the evening, we bought Aloo Bonda from the corner stall outside the house. When we finished our North Indian dinner at Kamat Cafe that night, I breathed a huge sigh of relief.
The Call for Home Cooking
The next morning, I didn't even realize what was happening before the thought of feeding everyone returned. Today, we brought breakfast from Shanbhag Hotel and again had lunch at Harshamahal Hotel.
By then, five continuous meals from restaurants had made us all weary. So, when my daughter insisted that I should make some new dish at home for dinner, my mind also suggested, "Why not give it a try?"
The Language Barrier
But the question was: what to prepare? My daughter immediately found and brought the cookbook that came with the Sumit Mixer Cooker. To my misfortune, since the book was written in English, it became immediately clear that we did not know the English names of a single vegetable, spice, pulse, or other ingredient. Since we had no English-Kannada dictionary at home, I would first have to go to a bookstore, buy one, then prepare a list of required ingredients, and then go to the market again. There was simply a shortage of time. Therefore, my daughter and I started searching for other books written in Kannada. Our frantic search through the Sunday papers, weeklies, and monthlies in the house was a futile effort.
A Culinary Treasure Trove
As I sat there pondering, my daughter shouted like she had won the lottery and pulled out the quarterly magazines from the Vanitha Samaja (Women's Association) that my wife used to read. I was as happy looking at those magazines as I would be after successfully making a new dish. This was because every magazine had something written about new recipes.
Now, my daughter and I started racking our brains over which item to prepare. Since my son was still small, he was busy making a commotion in his own world, oblivious to our struggle, though he kept pestering me every now and then to make his favorite Carrot Halwa.
The Simplicity Conundrum
The exotic items we found in the magazines were Avil Curry, Achappam, Patrode, Athrasa, Banana Delight, etc. I, however, struggled to find out how to make basic dishes like Uppittu (Upma) or Sajjige (sweet semolina). I decided that when she (my wife) returned tomorrow, I would advise her to include instructions on how to make simple things like Uppittu, Sajjige, Oggarane Anna (tempered rice), and Tomato Saaru (rasam) for people like me.
The conversation with my daughter went on like this
I asked my daughter— "Tell me which one we should make."
My daughter suggested— "They have given instructions for Carrot Halwa. Let’s make that... wait, no, not Halwa," she corrected herself.
"Why? Let's make that, anyway your brother also likes it."
"No, absolutely not, because preparing that requires skill. Even a slight mistake will spoil it. You can't even make rice, so forget about you making Carrot Halwa." What my daughter said was true. "Halwa cancelled," I said.
"Let's prepare Velliyappam," I read what ingredients were needed. Rice—check, coconut—check, sugar—check, salt—check, coconut water saved from the previous day. "Where can we get this from, Puttī (dear girl)?" I questioned my daughter. To which she replied, "Cancelled."
Next was "Avil Kari." Raw banana, pumpkin, elephant foot yam (suran)—okay, all available in the market. Drumsticks—need three. It's not the season for drumsticks now, and anyway, they are not available in this town. My daughter said, "Cancelled, next one."
"My luck is not good, you read," I told my daughter.
"Uṇṇiyappan," my daughter started reading. Rice, jaggery, coconut, cumin, sesame seeds, cardamom, salt—all available. As she read "Half a litre of coconut oil," my daughter made a face as if she had drunk oil.
"Don't worry, we'll prepare it in groundnut oil," I consoled my daughter. She happily started reading the method of preparation again.
"Wash the rice and soak it for 3 hours." "Stop," I said. "It's already seven-thirty at night. Soaking for three hours means it will be ten-thirty. It will take at least one hour to prepare. By the time we finish dinner, it will be midnight," upon which my son shouted, "Cancelled!"
She started reading "Banana Delight" again. "Ingredients required: Nendra Banana—4."
"Nendra Bananas are not available here... Next."
"Dasavāḷa Soppina Idli (Hibiscus Leaf Idli). Ingredients required: Rice, two handfuls of white hibiscus leaves." I sank into thought. From whose house can I steal white hibiscus leaves at this hour of the night? Seeing my face, my daughter herself said, "Cancelled."
Then, when my daughter said, "Next dish," I said, "Full stop."
"Why, Papa?"
"It's already seven-thirty at night. It will take at least twenty minutes more just to read about the dishes and decide. Then, it will take at least half an hour to take out the 50 tins in the kitchen and arrange the required ingredients. It will take half an hour to go to the market and come back for the ingredients not in the house. Then, it will take at least one hour to prepare—if no soaking is required. By the time all this is finished, both of you will be asleep. Therefore, Ready, Steady, Go! Kamat Cafe."
***
end- elloo ನಡೆದದ್ದು ಅಲ್ಲ imagination written sometime ಇನ್ 2002
.
go back to...
click--> LINKS TO ARTICLES
...