30 Dec 2002 - Imaginative Write-up Time--> 2000s ಸಮಯ 2000s
ಅಂದು ಆಫೀಸಿನಲ್ಲಿ ಹರತಾಳವಿದ್ದಿದ್ದರಿಂದ ನಾನು ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದೊದಗಿತು. ನನ್ನವಳು ಕೆಲಸಕ್ಕೆ ಹೋಗುತ್ತಿದ್ದುದರಿಂದ ಅಂದು ಮಗನನ್ನು ಮನೆಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಎಂದು ಇವಳು ಅಪ್ಪಣೆ ಕೊಟ್ಟಳು. ದಿನನಿತ್ಯದಂತೆ ಮಗನನ್ನು ಶಾಲೆಗೆ ವ್ಯಾನಿನಲ್ಲಿ ಕಳಿಸದೆ ಹಾಗೂ ಶಾಲೆಯ ನಂತರ ಕ್ರೀಚ್‌ಗೆ (Creche) ಕಳಿಸದೇ ಇರುವ ನಿರ್ಧಾರವನ್ನೂ ಇವಳು ತೆಗೆದುಕೊಂಡಿದ್ದಳು.
ಶನಿವಾರ ಬೇರೆ, ಶಾಲೆಯ ಸಮಯ ಬೆಳಿಗ್ಗೆ 7.30 ರಿಂದ 11 ರವರೆಗೆ. ಬೆಳಿಗ್ಗೆ 7 ಗಂಟೆಗೆ ಮಗನನ್ನು ದ್ವಿಚಕ್ರವಾಹನದಲ್ಲಿ ಶಾಲೆಗೆ ಕರೆದೊಯ್ದು, ಮನೆಗೆ ಬಂದು ಸ್ನಾನ, ಉಪಹಾರ ಮುಗಿಸಿ ನಂತರ ಇವಳನ್ನು ಇವಳ ಕಛೇರಿಗೆ ಹತ್ತೂವರೆಗೆ ಬಿಟ್ಟು ವಾಪಸ್ಸು ಬರುವಾಗ ಶಾಲೆಗೆ ಹೋಗಿ ಮಗನನ್ನು ಮನೆಗೆ ಕರೆತಂದು ನನ್ನ ಪ್ರಾತಃ ಕರ್ತವ್ಯವನ್ನು ನಿರ್ವಹಿಸಿದ್ದಾಯಿತು.
ಮೊದಲೇ ಇವನು ತುಂಬಾ ಹಠಮಾರಿ; ಬೆಳಿಗ್ಗೆ 11 ಗಂಟೆಯಿಂದ ಮಗನನ್ನು ಸಂಜೆಯವರೆಗೆ ನೋಡಿಕೊಳ್ಳುವುದು ಸ್ವಲ್ಪ ಕಷ್ಟ ಎಂದು ಗೋಗರೆದಿದ್ದೆ. ಇವಳು ಅರ್ಧ ದಿನ ರಜೆ ಹಾಕಿ ಬೇಗ ಬರುವೆ ಎಂದು ಕನಿಕರ ತೋರಿದಾಗ ಸ್ವಲ್ಪ ಸಮಾಧಾನವಾಯಿತು. ಶಾಲೆಯಿಂದ ಬಂದ ನಂತರ ಮಗನ ಯೂನಿಫಾರ್ಮ್ ಬದಲಾಯಿಸಿ ಇವಳು ಮಾಡಿ ಇಟ್ಟ ಅಡುಗೆಯನ್ನು ಸ್ವಲ್ಪ ಬಿಸಿ ಮಾಡಿ ಊಟ ಮಾಡಿಸಲು, ಇವನ ಜೊತೆಗೆ ಇವನಿಗೋಸ್ಕರ ನಾನೂ ಊಟಕ್ಕೆ ಕುಳಿತುಕೊಂಡೆನು.
ಏನೆಲ್ಲ ಉಪಾಯ ಮಾಡಿದರೂ ಇವನು ಊಟ ಮಾಡಲು ಸಿದ್ಧನಿಲ್ಲ. "ಶಾಲೆಯಲ್ಲಿ ಏನು ನಡೆಯಿತು, ಟೀಚರ್ ಯಾರು, ಅವರ ಹೆಸರೇನು, ನಿನ್ನ ಸ್ನೇಹಿತರು ಯಾರು, ಸ್ನೇಹಿತರನ್ನು ಯಾರು ಶಾಲೆಗೆ ಕರೆದುಕೊಂಡು ಬರುತ್ತಾರೆ" ಎಂತೆಲ್ಲ ಕೇಳಲು ನಾನು ಹಿಂಜರಿದೆ. ಏಕೆಂದರೆ ನಮ್ಮಿಬ್ಬರ ಸಂವಾದವನ್ನು ಒಂದೂ ಶಬ್ಧ ಮರೆಯದೆ ಇವಳ ಮುಂದೆ ಮಗ ಹೇಳುವುದು ಇವನ ವಾಡಿಕೆ. ಇವನ ಶಿಕ್ಷಕಿ ಸುಂದರ ಯುವತಿ ಮತ್ತು ಶಾಲೆಗೆ ಮಕ್ಕಳ ತಾಯಂದಿರೇ ಹೆಚ್ಚು ಬರುತ್ತಿದ್ದುದರಿಂದ, ಮುಂದಾಲೋಚನೆಯಿಂದ ಇವುಗಳೆಲ್ಲದರ ಬಗ್ಗೆ ನಾನು ಮಗನ ಹತ್ತಿರ ಮಾತನಾಡಲಿಕ್ಕೆ ಹೋಗಲಿಲ್ಲ.
ಊಟ ಮಾಡಿಸಲು ಸರಿಯಾದ ಉಪಾಯ ನನ್ನಮ್ಮ ಮತ್ತು ನನ್ನ ಅಜ್ಜಿಯ ಅಸ್ತ್ರ, ಕಥೆ; ಇದನ್ನೇ ನಾನು ಕೂಡ ಪ್ರಯೋಗಿಸಲು ನಿರ್ಧರಿಸಿದೆ. ಮೊದಲು ರಾಜನ ಕಥೆ ಪ್ರಾರಂಭಿಸಿದೆ: "ಒಬ್ಬ ರಾಜ, ಅವನಿಗೆ ಮೂರು ಗಂಡು ಮಕ್ಕಳು. ಮೊದಲಿಬ್ಬರು ಸೋಮಾರಿ ಹಾಗೂ ಕೆಟ್ಟವರು. ಮೂರನೆಯವನು ಬುದ್ಧಿವಂತ" ಹೀಗೆಂದಾಕ್ಷಣ ನನ್ನ ಮಗ "ರಾಜ ಮೂವರಿಗೂ ಪರೀಕ್ಷೆ ಇಡುತ್ತಾನೆ" ಎಂದ.
ಓಹ್, ಈ ಕಥೆ ಮಗನಿಗೆ ಗೊತ್ತು ಎಂದುಕೊಂಡು ನಾನು ಇನ್ನೊಂದು ಕಥೆ ಪ್ರಾರಂಭಿಸಿದೆ: "ಒಬ್ಬ ಅಜ್ಜಿ ಮತ್ತು ಅವಳ ಒಬ್ಬನೇ ಮೊಮ್ಮಗ. ಮೊಮ್ಮಗ ತುಂಬಾ ಸೋಮಾರಿ. ಊರಿನ ಪಕ್ಕದಲ್ಲಿದ್ದ ಕಾಡಿನಲ್ಲಿ ಒಬ್ಬ ರಾಕ್ಷಸ ಇದ್ದ" ಕೂಡಲೇ ನನ್ನ ಮಗ "ಆ ರಾಕ್ಷಸ ಮೊಗ್ಯಾಂಬೊ ತರಹನಾ" ಎಂದು ಕೇಳಿದಾಗ ಏನೂ ಹೇಳಲು ತೋಚದೆ "ಈ ಕಥೆ ಬೇಡ" ಎಂದು ಹೇಳಿ ಬೇರೆಯ ಕಥೆ ಪ್ರಾರಂಭಿಸಿದೆ.
"ಅಜ್ಜಿ, ಮೊಮ್ಮಗ, ಇಬ್ಬರೂ ಬಡವರು, ಮೊಮ್ಮಗ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ಆ ಊರಿನಲ್ಲಿದ್ದ ರಾಜನಿಗೆ ಒಬ್ಬನೇ ಮಗಳು" ಅಂದಾಗ ಇವನು ಮಧ್ಯೆ ಬಾಯಿ ಹಾಕಿ "ಓಹೋ ಈ ಕಥೆ ನನಗೆ ಗೊತ್ತು, ಕೊನೆಯಲ್ಲಿ ರಾಜಕುಮಾರಿ ಆ ಮೊಮ್ಮಗನನ್ನು ಮದುವೆ ಆಗುತ್ತಾಳೆ, ಅಲ್ಲವಾ" ಎಂದಾಗ ನಾನು ಬೇಸ್ತು ಬಿದ್ದೆ. ನನ್ನ ಮೊರೆ ಪೆಚ್ಚಾಯಿತು ಕೂಡ. ಬೇಸ್ತು ಬಿದ್ದರೂ ಪರವಾಗಿಲ್ಲ, ಇವನು "ನಾನು ಮಾತ್ರ ಬಾಜೀಗರ್ ತರಹ ಮದುವೆ ಆಗ್ತೀನಿ" ಎಂದು ಹೇಳಿದಾಗ ನಾನು ಸುಸ್ತಾದೆ.
ಇನ್ನೂ ತುಪ್ಪಾನ್ನ ಮುಗಿದಿಲ್ಲ, ಆಗಲೇ ಇಪ್ಪತ್ತು ನಿಮಿಷ ಕಳೆದಿದೆ. ನನ್ನಮ್ಮ ಹಾಗೂ ನನ್ನ ಅಜ್ಜಿಯ ಉಪಾಯ ಕೈಬಿಟ್ಟು "ಈಗ ಕಥೆ ಬೇಡ, ರೈಮ್ಸ್ (Rhymes) ಹೇಳಿಕೊಡುವೆ" ಎಂದಾಗ "ಡ್ಯಾಡಿ, ಸ್ಕೂಲ್‌ನಲ್ಲಿ ರೈಮ್ಸ್ ಹೇಳಿ ಹೇಳಿ ಬೇಜಾರಾಗಿದೆ. ಹಿಂದಿ ಅಂತ್ಯಾಕ್ಷರಿ ಆಡೋಣ" ಎಂದು ಅವನೇ ಸೂಚಿಸಿದಾಗ ವಿಧಿಯಿಲ್ಲದೆ ಒಪ್ಪಬೇಕಾಯಿತು.
ನನಗಿಷ್ಟವಾದ "ಜಾನೇ ಕಹಾ ಗಯೇ ವೋ ದಿನ್" (ಸ್ವಅನುಭವ) ಎಂದು ಮುಖೇಶ್ ರವರ ಸೂಪರ್ ಹಿಟ್ ಹಾಡನ್ನು ನಾನು ಪ್ರಾರಂಭಿಸಿದಾಗ ಇವನು "ಇದ್ಯಾವ ಹಾಡು, ನಾನು ಕೇಳಿಯೇ ಇಲ್ಲ" ಎನ್ನುತ್ತಾ "ನಿಕಮ್ಮಾ ಕಿಯಾ ಇಸ್ ದಿಲ್ ನೆ" ಎಂದು ಹೇಳಿ "ದಿಲ್ ದಿಲ್.. ಲ ಇಂದ" ಅಂದಾಗ ನನ್ನ ದಿಲ್‌ನ್ನು ನನ್ನವಳಿಗೆ ಮಾರಿಕೊಂಡದ್ದು ಮನದಲ್ಲಿ ಮೂಡಿ, ಮದುವೆಯ ಹಿಂದಿನ ದಿನಗಳು ನೆನಪಾಗುತ್ತಾ "ಲೇಜಾಯೆಂಗೆ ಲೇಜಾಯೆಂಗೆ ದಿಲ್ವಾಲೆ ದುಲ್ ಹನಿಯಾ ಲೇಜಾಯೆಂಗೆ" ಎಂದು ಹೇಳಿ ಗ ಗ.. ಎಂದೆ. ಇವನು 'ಅಯ್ಯೋ ಇದು ಚಿತ್ರದ ಹೆಸರು, ಹಾಡಲ್ಲ' ಎನ್ನುತ್ತಾ ತಾನೇ "ಲವ್ ಕೆ ಲಿಯೆ ಸಾಲಾ ಕುಚ್ ಭಿ ಕರೇಗ" ಎಂದು ಹೇಳಿ ನನಗೇ ಗ ಗ.. ಅಂತ ತಿರುಗಿಸಿದ. ಇನ್ನು ಈ ಅಂತ್ಯಾಕ್ಷರಿ ನಾನಂತೂ ಗೆಲ್ಲಲು ಸಾಧ್ಯ ಇಲ್ಲ, ಅದಿರಲಿ.. ಇವನ ಹಿಂದಿ ಶಬ್ದಗಳು ಇವನ ಮುಂದಿನ ಕಾಲೇಜು ದಿನಗಳ ಬಗ್ಗೆ ನನ್ನನ್ನು ಕೊಂಡೊಯ್ದಿತ್ತು.
ಪರವಾಗಿಲ್ಲ, ಈಗ ಸಾರನ್ನ ಮುಗಿಸಿದ್ದನು. ಮಗ ಆಗಾಗ್ಗೆ ಹುಷಾರು ತಪ್ಪುತ್ತಿದ್ದು ನನಗೆ ನನ್ನ ಅರ್ಧಾಂಗಿ ಮೊದಲೇ ಎಚ್ಚರಿಕೆ ಕೊಟ್ಟು "ಮೊಸರು ಕೊಡಬೇಡಿ, ಹಾಲನ್ನ ಕೊಡಿ" ಎಂದಿದ್ದಳು. ಆದರೆ ಇವನು ಅನ್ನಕ್ಕೆ ಮೊಸರೇ ಬೇಕು ಎಂದು ಹಠ ಹಿಡಿದಾಗ ವಿಧಿಯಿಲ್ಲದೆ ಇವನ ದೃಷ್ಟಿಯನ್ನು ಬೇರೆಡೆ ವರ್ಗಾಯಿಸಿ ಸ್ವಲ್ಪ ಮೊಸರಿನ ಜೊತೆಗೆ ಹಾಲೂ ಸೇರಿಸಿದಾಗ ಸಮಾಧಾನದಿಂದ ನಿಟ್ಟುಸಿರು ಬಿಟ್ಟೆ. ಆಗಲೇ ಗಡಿಯಾರ ೧೨.೩೦ ತೋರಿಸುತ್ತಿತ್ತು.
ಈಗ ಅವನನ್ನು ಹೇಗಾದರೂ ಮಾಡಿ ಮಲಗಿಸಬೇಕು. ಶನಿವಾರವಿದ್ದಿದ್ದರಿಂದ ಮಗು ಬೇಗ ಎದ್ದಿದ್ದಾನೆ, ಆದರೆ ಇವನು ಪಂಜರದಲ್ಲಿದ್ದ (ಕ್ರೀಚ್) ಗಿಣಿ ಹೊರಗೆ ಬಂದ ಹಾಗೆ ಹಾರಾಡುತ್ತಿದ್ದಾನೆ. ಅಮ್ಮನ ಭಯವಿದ್ದರೂ ಈಗ ಮನೆಯಲ್ಲಿ ನಾನೊಬ್ಬನೇ ಇರುವುದು. ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಧಾಂಧಲೆ ಹೆಚ್ಚುತ್ತಾ ಹೋಯಿತು. ಹಾಗೂ ಹೀಗೂ ಫುಸಲಾಯಿಸಿ ನಾನೂ ಪಕ್ಕದಲ್ಲಿ ಮಲಗಿ ನಿದ್ರೆ ಬಂದ ಹಾಗೆ ನಟಿಸಲು ಹೋಗಿ, ನನಗೇ ನಿದ್ರೆ ಹತ್ತಬೇಕೇ! ಇವನು ನನ್ನನ್ನು ತಿವಿದೂ ತಿವಿದೂ ನನ್ನನ್ನು ಮಲಗಲಿಕ್ಕೆ ಬಿಡಲಿಲ್ಲ. ಏನಾದರೂ ಆಟ ಆಡೋಣ ಎಂದು ಅಲ್ಲಿದ್ದ ಚೆಂಡನ್ನು ತೆಗೆದೆ.
ಆಗ ಇವನು "ಇದೆಲ್ಲ ಬೇಡ, ನನಗೆ ನೀನು ಹೊಡೆಯುವ ಬೈಕ್ ಕಲಿಸು, ದೊಡ್ಡವನಾದ ಮೇಲೆ ರೇಸ್ ಗೆ ಹೋಗುತ್ತೇನೆ" ಅಂದಾಗ "ಆ ರೇಸ್ ಕುದುರೆ ರೇಸ್ ಆಗದಿದ್ದರೆ ಸಾಕು" ಎಂದು ನನ್ನಲ್ಲೇ ಆ ದೇವರನ್ನು ವಿನಂತಿಸಿಕೊಂಡೆ. ಪೊಲೀಸ್ ಎಂದರೆ ಸ್ವಲ್ಪ ಭಯವಿದ್ದಿದ್ದರಿಂದ ಪೊಲೀಸ್ ಕಾರಣ ಕೊಟ್ಟು ಮೋಟಾರ್ ಸೈಕಲ್ ವಿಷಯ ಮರೆಸಿದ್ದಾಯಿತು. ನಮ್ಮ ಆಫೀಸಿನ ಹರತಾಳ ಏನಾಯಿತೆಂದು ಯೋಚಿಸಿ ಫೋನ್ ಮಾಡಲು ಫೋನ್ (Landline) ಹತ್ತಿರ ಬಂದಾಗ ಇವನು ತಾನು ಮೊದಲು ಎನ್ನುತ್ತಾ ತನ್ನ ಸ್ನೇಹಿತೆಯ ಮನೆಗೆ ದೂರವಾಣಿ ಮಾಡಿದನು. "ಹಲೋ ಆಂಟಿ, ನಿಶಾ ಗೆ ಫೋನ್ ಕೊಡಿ" ಎಂದು ಧೈರ್ಯದಿಂದ ಹೇಳಿದನು. ಅದಕ್ಕವರು "ನಿಶಾ ಆಗಲೇ ಮಲಗಿ ನಿದ್ರೆ ಮಾಡುತ್ತಿದ್ದಾಳೆ" ಎಂದಿರಬೇಕು "ಆಂಟೀ ಆಮೇಲೆ ಫೋನ್ ಮಾಡುವೆ" ಎಂದು ಹೇಳಿ ನಂತರ ತನ್ನ ಇತರ ಸ್ನೇಹಿತರಿಗೆ ಫೋನ್ ಮಾಡಿ ನಿಶಾಳ ಮನೆಗೆ ಮಧ್ಯಾಹ್ನ ೪ ಗಂಟೆಗೆ ಬರಲೇ ಬೇಕೆಂದು ಒತ್ತಾಯಿಸುತ್ತಿದ್ದನು. ನಾನು ಆಶ್ಚರ್ಯದಿಂದ "ನಿಶಾಳ ಮನೆಗೆ ಏಕೆ ಹೋಗಬೇಕು, ಯಾರು ನಿನ್ನನ್ನು ಕರೆದುಕೊಂಡು ಹೋಗುತ್ತಾರೆ" ಎಂದು ಕೇಳಿದಾಗ "ನಿಶಾ ಮನೆಗೆ ಹೊಸ VCD ಡಿಜಿಟಲ್ ಪ್ಲೇಯರ್ ಬಂದಿದೆ, ಹೊಸ ಪಿಕ್ಚರ್ ಕಹೋ ನ ಪ್ಯಾರ್ ಹೈ ನ ಕ್ಯಾಸೆಟ್ ತಂದಿದ್ದಾರೆ, ಅಮ್ಮ ಬೇಗ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾಳೆ" ಎಂದಾಗ ನನಗೆ ಗೊತ್ತಾಯಿತು ಇವಳ ಅರ್ಧ ದಿನ ರಜೆಯ ಗುಟ್ಟು!
***
Husband vs. Hyperactive Son - Imaginative Write-up Time--> 2000s
A Day of Domestic Duty
The office strike forced me to stay home that day. Since my wife was working, she issued a clear command: I was responsible for looking after our son. She had expressly decided against using the school van and also against sending him to the creche after his classes.
It was a Saturday, so school was short, from 7:30 AM to 11 AM. I dropped him off on the two-wheeler at 7 AM, rushed back for a bath and breakfast, then dropped her at her office at 10:30 AM. My morning duties culminated when I picked him up from school and brought him home.
Knowing how stubborn he is, I’d pleaded with her about the difficulty of caring for him from 11 AM until evening. I felt some relief when she showed compassion, promising to take a half-day off and return early. Once he was home, I changed his uniform, warmed the food she’d prepared, and sat down with him, hoping to finally get him to eat.
The Battle of the Storytellers
No matter what tricks I tried, he refused to eat. I cautiously avoided asking him about school—his teacher, friends, or who dropped them off—as he habitually reported every word of our conversations to his mother later. Since his teacher was a beautiful young woman and mothers often brought the children to school, prudence was the better part of fatherhood.
I decided to deploy the ultimate weapon used by my mother and grandmother: stories. I began a king’s tale: "There was a king with three sons. The first two were lazy and bad; the third was intelligent..." He immediately cut in, "The king sets a test for all three!" Ah, he knows this one. I switched: "There was a grandmother and her only grandson. The boy was very lazy. There was a demon in the neighboring forest..." "Is the demon like Mogambo?" he asked, referencing the iconic Bollywood villain. Stumped, I declared, "No, not this story," and started yet another.
"There was a poor grandmother and grandson, and the boy worked very hard. The king of that village had only one daughter..." He interrupted again: "Oh, I know this story! In the end, the princess marries the grandson, right?" My jaw dropped. I was exhausted when he announced, "I’m only going to marry like Baazigar."
The Antyakshari Debacle
The tuppaanna (sweet rice dessert) was still untouched, and twenty minutes had vanished. Abandoning the stories, I offered, "No more stories, I’ll teach you Rhymes." He countered: "Daddy, I’m bored of rhymes at school. Let’s play Hindi Antyakshari." I had no choice but to agree.
I started with my favorite Mukesh hit, "Jaane Kahan Gaye Woh Din," which reflects my self-experience. "What song is this? I’ve never heard it!" he scoffed, launching into "Nikamma Kiya Is Dil Ne" and giving me the prompt 'Dil Dil...' starting with 'La.' Remembering how I’d given my heart to my wife, I recalled our pre-marriage days and sang, "Le Jayenge Le Jayenge Dilwale Dulhania Le Jayenge," and gave him 'Ga Ga...' He corrected me: "That’s just a movie title, not a song!" He then sang "Love Ke Liye Saala Kuch Bhi Karega" and threw 'Ga Ga...' back at me. I knew I couldn't win this Antyakshari—but his advanced Hindi vocabulary did make me ponder his college years ahead.
He finally finished the saar (rasam/soup). Since he falls ill easily, my wife had strictly warned me, "Do not give him curd, give him milk." But when he stubbornly demanded curd rice, I had to subtly distract him and mix some milk into the curd. I breathed a sigh of relief as I got him to finish it. The clock read 12:30 PM.
The Grand Revelation
Next, I needed to get him to sleep. Since it was Saturday, he'd woken up early, but he was fluttering about like a parrot freed from a cage (the creche). Though my wife's rules lingered, I was alone. Despite all efforts, I couldn't get him to nap; his commotion only grew. I tried coaxing him onto the bed and pretended to sleep myself—only to actually fall asleep! He poked and prodded me until I gave up. I picked up a ball nearby, suggesting a game.
"No, none of this," he said. "Teach me to ride the bike you ride. When I’m big, I’m going to race." I mentally prayed that race wouldn't be a horse race. Knowing his slight fear of the police, I used the cops as an excuse to shut down the motorcycle topic. When I finally got near the landline phone to call the office about the strike, he beat me to it. He bravely called his friend’s house: "Hello Auntie, please put Nisha on the phone." They must have replied that Nisha was asleep, because he said, "Auntie, I’ll call later," and then immediately called other friends, insisting they must come to Nisha's house at 4 PM.
Confused, I asked, "Why must you go to Nisha’s house? Who will take you?" He then delivered the punchline: "Nisha’s house has a new VCD Digital Player, and they got the cassette for the new movie Kaho Naa Pyaar Hai! Mom will come soon and take me."
That’s when I finally understood the secret reason for her half-day leave!
***
