30 Mar 2018 - thoughts
In a world obsessed with external validation, the pressure to conform has never been stronger. Yet, wisdom from ancient traditions urges us to seek a path rooted in authentic selfhood. Why don't you be yourself and stop trying to be like others? This concept was conveyed in a simple yet profound way in our Sanatana Dharma long ago. I still remember the shloka and the tale from my high school Sanskrit curriculum because of the deep impact it had on me.
The Story of the Sand Shivlinga
The story tells of a poor sadhu (ascetic) on a pilgrimage who wished to bathe in the Ganga River. Alone, and with only a copper vessel containing his meager savings, he needed to keep his belongings safe while bathing. He devised a plan: he created a Shivlinga (śivaliṅga) from sand, placed a couple of flowers on it, and carefully hid his money underneath the deity. When other pilgrims saw him creating the Shivlinga, they thought they would earn more Punya (spiritual merit or good karma) by blindly following his example. Consequently, every pilgrim began creating their own sand Shivlinga before taking their bath.
When the sadhu returned to retrieve his belongings, he was shocked to see innumerable Shivlingas everywhere. He couldn't trace his own, nor could he check any of the others, as everyone was still busy preparing theirs. Distressed, he uttered this shloka:
गतानुगतिको लोकः न लोकः पारमार्थिकः।
गंगा सैकतलिंगेन नश्टम् मे तामृभाजनम्॥
The meaning is: "I lost my money because people blindly followed others. The world follows trends, not truth. The moral is: don't follow others without using your own judgment."
The Peril of Conformity
In today's world, people often prioritise showcasing themselves, seeking recognition, and craving praise from others. Many simply follow the latest trends. A prime example of this behavior is the extravagant way people conduct ceremonies like weddings and birthdays. The underlying motives are often either to flaunt one's status and wealth or to conform out of fear of societal judgment. When will we break free from this mentality? Why not embrace our individuality and forge our own paths in life, rather than blindly following the crowd? The greatest value lies not in imitation, but in the courage to think critically and choose your unique way. Let us choose consciousness over conformity and make our own path the greatest form of worship.
The Tragedy of the Envious Man
It is a natural irony that a person who says, "Why should we worry about others?" often ends up worrying about others most of all. Here is an illustration of the mentality where one believes what they receive should not be given to others, or where we ultimately fail ourselves.
The Boon and the Blunder
According to a story, one day Yama Dharma Raja (the God of Death) came down to Earth to take a man's life. However, the man whose life was to be taken appeared before Yama. Yama, tired and thirsty from roaming the Earth, asked the man for water. The man, who was about to die, gave him water and quenched his thirst.
Yama, realising this was the man he had come for, was pleased by the offering and granted him a boon. He gave the man a Book of Destiny and said: "There is a page in this for you. Write down whatever you wish for yourself. Whatever you write will be fulfilled, there is no doubt about it. But you only have five minutes to write. Those five minutes are your most precious time. After they are over, your destiny will be as it is written." He then handed over the book.
Focused on Others' Downfall
As soon as the man took the book, he began reading the entries reserved for others. He read the first page—it said, "Your friend is going abroad." So, he wrote, "He should not go abroad," and stopped him. He turned another page, and it said another friend would win a lottery worth lakhs. But the man wrote, "He should not get the lottery."
He turned another page. It said his close female friend would marry an extremely rich man. But the man wrote, "His close friend should not marry that rich man." He turned yet another page. It said the farmer next door would get a good price for his crop and become wealthy. But the man wrote, "He should not become wealthy."
He opened the last page. It was a blank page reserved for him. Just as he intended to write something on it, Yama snatched the book away, for the five-minute deadline was over.
The Ultimate Lesson
Then Yama said, "Your lifespan is over. Come." The man replied, "But I didn't write anything for myself."
Yama then delivered the ultimate lesson: "We give you a certain number of years of life. Even when given five minutes as a boon within that life, you didn't think about yourself but instead worried only about the downfall of others. What is there to say? If you are a person who spends your entire life without realising your own importance and only thinking about others, you have no right to live here," and he took him away.
Find Your Own Page
We have pages reserved for us. We have days reserved for us. We have a life reserved for us. We have a path reserved for us. Leaving aside the worry about others, when will the time come for us to cultivate the uniqueness of the right path within ourselves and truly guide others?
***
ನೀವೇಕೆ ನೀವಾಗಿಲ್ಲ, ಬೇರೆಯವರಂತೆ ಏಕೆ?
ಬಾಹ್ಯ ಮಾನ್ಯತೆಗಾಗಿ (external validation) ಹಂಬಲಿಸುವ ಜಗತ್ತಿನಲ್ಲಿ, ಅನುಸರಣೆಯ ಒತ್ತಡ ಹಿಂದೆಂದಿಗಿಂತಲೂ ಪ್ರಬಲವಾಗಿದೆ. ಆದರೆ, ನಮ್ಮ ಪ್ರಾಚೀನ ಸಂಪ್ರದಾಯಗಳ ಜ್ಞಾನವು ಅಧಿಕೃತ ವ್ಯಕ್ತಿತ್ವದಲ್ಲಿ ಬೇರೂರಿರುವ ಮಾರ್ಗವನ್ನು ಹುಡುಕಲು ನಮ್ಮನ್ನು ಪ್ರೇರೇಪಿಸುತ್ತದೆ. ನೀವೇಕೆ ನೀವಾಗಿರಬಾರದು ಮತ್ತು ಇತರರಂತೆ ಇರಲು ಪ್ರಯತ್ನಿಸುವುದನ್ನು ನಿಲ್ಲಿಸಬಾರದು? ಈ ಪರಿಕಲ್ಪನೆಯನ್ನು ನಮ್ಮ ಸನಾತನ ಧರ್ಮದಲ್ಲಿ ಬಹಳ ಹಿಂದೆಯೇ ಸರಳವಾದರೂ ಗಾಢವಾದ ರೀತಿಯಲ್ಲಿ ತಿಳಿಸಲಾಗಿದೆ. ನಮ್ಮ ಪ್ರೌಢಶಾಲೆಯ ಸಂಸ್ಕೃತ ಪಠ್ಯಕ್ರಮದಲ್ಲಿ ಒಂದು ಆಸಕ್ತಿದಾಯಕ ಕಥೆಯಿತ್ತು, ಮತ್ತು ಆ ಕಥೆ ಹಾಗೂ ಶ್ಲೋಕ ನನ್ನ ಮೇಲೆ ಬೀರಿದ ಆಳವಾದ ಪ್ರಭಾವದಿಂದಾಗಿ ನನಗೆ ಇಂದಿಗೂ ನೆನಪಿದೆ.
ಕಥೆಯ ಪ್ರಕಾರ, ತೀರ್ಥಯಾತ್ರೆಗೆ ಹೋಗುತ್ತಿದ್ದ ಒಬ್ಬ ಬಡ ಸಾಧು (ಸನ್ಯಾಸಿ) ಗಂಗಾ ನದಿಯಲ್ಲಿ ಸ್ನಾನ ಮಾಡಲು ಬಯಸುತ್ತಾನೆ. ಏಕಾಂಗಿಯಾಗಿದ್ದ ಆತನ ಬಳಿ ಸ್ವಲ್ಪ ಹಣವಿದ್ದ ತಾಮ್ರದ ಪಾತ್ರೆಯೊಂದಿತ್ತು. ಸ್ನಾನ ಮಾಡುವಾಗ ತನ್ನ ವಸ್ತುಗಳನ್ನು ಸುರಕ್ಷಿತವಾಗಿ ಇಡಬೇಕಾಗಿತ್ತು. ಆತ ಒಂದು ಉಪಾಯ ಮಾಡಿದ: ಮರಳಿನಿಂದ ಒಂದು ಶಿವಲಿಂಗವನ್ನು (śivaliṅga) ನಿರ್ಮಿಸಿ, ಅದರ ಮೇಲೆ ಒಂದೆರಡು ಹೂವುಗಳನ್ನು ಇಟ್ಟನು. ನಂತರ ತನ್ನ ಹಣವನ್ನು ಆ ದೇವರ ಅಡಿಯಲ್ಲಿ ಬಚ್ಚಿಟ್ಟನು. ಬೇರೆ ಯಾತ್ರಾರ್ಥಿಗಳು ಅವನು ಶಿವಲಿಂಗವನ್ನು ನಿರ್ಮಿಸುವುದನ್ನು ನೋಡಿ, ಅವನ ಉದಾಹರಣೆಯನ್ನು ಅನುಸರಿಸಿದರೆ ತಮಗೂ ಹೆಚ್ಚು ಪುಣ್ಯ (ಒಳ್ಳೆಯ ಕರ್ಮ) ಸಿಗುತ್ತದೆ ಎಂದು ಭಾವಿಸಿದರು. ಪರಿಣಾಮವಾಗಿ, ಪ್ರತಿಯೊಬ್ಬ ಯಾತ್ರಾರ್ಥಿಯೂ ಸ್ನಾನ ಮಾಡುವ ಮೊದಲು ತಮ್ಮದೇ ಆದ ಶಿವಲಿಂಗಗಳನ್ನು ನಿರ್ಮಿಸಲು ಪ್ರಾರಂಭಿಸಿದರು.
ತಾನು ಸಿದ್ಧಪಡಿಸಿದ ಶಿವಲಿಂಗವನ್ನು ಹುಡುಕಲು ಆ ಸಾಧು ಹಿಂತಿರುಗಿದಾಗ, ಎಲ್ಲೆಲ್ಲೂ ಅಸಂಖ್ಯಾತ ಶಿವಲಿಂಗಗಳನ್ನು ನೋಡಿ ಆಘಾತಕ್ಕೊಳಗಾದನು. ತನ್ನ ಶಿವಲಿಂಗವನ್ನು ಪತ್ತೆಹಚ್ಚಲು ಆತನಿಗೆ ಸಾಧ್ಯವಾಗಲಿಲ್ಲ, ಮತ್ತು ಎಲ್ಲರೂ ಇನ್ನೂ ತಮ್ಮದನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದರಿಂದ ಆತ ಬೇರೆ ಯಾವ ಶಿವಲಿಂಗವನ್ನೂ ಪರಿಶೀಲಿಸಲಾಗಲಿಲ್ಲ. ದುಃಖಿತನಾದ ಆತ ಈ ಶ್ಲೋಕವನ್ನು ಉಚ್ಚರಿಸಿದನು:
ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ।
ಗಂಗಾ ಸೈಕತಲಿಂಗೇನ ನಶ್ಟಮ್ ಮೇ ತಾಮೃಭಾಜನಮ್॥
ಇದರ ಅರ್ಥ: "ಜನರು ಕುರುಡಾಗಿ ಇತರರನ್ನು ಅನುಸರಿಸಿದ್ದರಿಂದ ನಾನು ನನ್ನ ಹಣವನ್ನು ಕಳೆದುಕೊಂಡೆನು. ಈ ಕಥೆಯ ನೀತಿಯೇನೆಂದರೆ: ನಿಮ್ಮ ಸ್ವಂತ ವಿವೇಚನೆಯನ್ನು ಬಳಸದೆ ಇತರರನ್ನು ಹಿಂಬಾಲಿಸಬೇಡಿ."
ಇಂದಿನ ಜಗತ್ತಿನಲ್ಲಿ, ಜನರು ಹೆಚ್ಚಾಗಿ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುವುದು, ಗುರುತಿಸುವಿಕೆ ಪಡೆಯುವುದು ಮತ್ತು ಇತರರಿಂದ ಪ್ರಶಂಸೆಯನ್ನು ಬಯಸುವುದಕ್ಕೆ ಆದ್ಯತೆ ನೀಡುತ್ತಾರೆ. ಅನೇಕರು ಇತ್ತೀಚಿನ ಪ್ರವೃತ್ತಿಗಳನ್ನು ಕುರುಡಾಗಿ ಅನುಸರಿಸುತ್ತಾರೆ. ಈ ನಡವಳಿಕೆಗೆ ಪ್ರಮುಖ ಉದಾಹರಣೆಯೆಂದರೆ, ಜನರು ಮದುವೆ ಮತ್ತು ಹುಟ್ಟುಹಬ್ಬದಂತಹ ಸಮಾರಂಭಗಳನ್ನು ನಡೆಸುವ ಅದ್ದೂರಿ ವಿಧಾನ.
ಇದರ ಹಿಂದಿನ ಪ್ರೇರಣೆಗಳು, ತಮ್ಮ ಸ್ಥಾನಮಾನ ಮತ್ತು ಸಂಪತ್ತನ್ನು ಪ್ರದರ್ಶಿಸುವುದು ಅಥವಾ ಸಾಮಾಜಿಕ ನಿರ್ಣಯಕ್ಕೆ ಹೆದರಿ ಅನುರೂಪವಾಗಿ ನಡೆದುಕೊಳ್ಳುವುದು. ನಾವು ಈ ಮನಸ್ಥಿತಿಯಿಂದ ಯಾವಾಗ ಹೊರಬರುತ್ತೇವೆ? ಕುರುಡಾಗಿ ಜನಸಮೂಹವನ್ನು ಹಿಂಬಾಲಿಸುವ ಬದಲು, ನಮ್ಮ ವೈಯಕ್ತಿಕತೆಯನ್ನು ಏಕೆ ಅಪ್ಪಿಕೊಳ್ಳಬಾರದು ಮತ್ತು ಜೀವನದಲ್ಲಿ ನಮ್ಮದೇ ಆದ ಮಾರ್ಗಗಳನ್ನು ಏಕೆ ರೂಪಿಸಿಕೊಳ್ಳಬಾರದು? ಹಾಗೆ ಮಾಡುವುದರಿಂದ, ನಾವು ಹೆಚ್ಚು ಪ್ರಾಮಾಣಿಕ ಮತ್ತು ತೃಪ್ತಿಕರ ಅಸ್ತಿತ್ವವನ್ನು ಬೆಳೆಸಿಕೊಳ್ಳಬಹುದು. ಅಂತಿಮವಾಗಿ, ನಿಜವಾಗಿಯೂ ಮುಖ್ಯವಾದುದನ್ನು ಪುನರ್ ವ್ಯಾಖ್ಯಾನಿಸುವ ಮತ್ತು ನಮ್ಮದೇ ನಿಯಮಗಳ ಮೇಲೆ ಜೀವನ ನಡೆಸುವ ಸಮಯ ಇದು. ಅನುಕರಣೆಯಲ್ಲಿ ಅಲ್ಲ, ಆದರೆ ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ನಿಮ್ಮ ಅನನ್ಯ ಮಾರ್ಗವನ್ನು ಆರಿಸುವ ಧೈರ್ಯದಲ್ಲಿಯೇ ಅತಿದೊಡ್ಡ ಮೌಲ್ಯವಿದೆ. ನಾವು ಅನುಸರಣೆಗಿಂತ ಪ್ರಜ್ಞೆಯನ್ನು ಆರಿಸೋಣ ಮತ್ತು ನಮ್ಮ ಸ್ವಂತ ಮಾರ್ಗವನ್ನು ಪೂಜೆಯ ಶ್ರೇಷ್ಠ ರೂಪವನ್ನಾಗಿ ಮಾಡೋಣ.
**
"ಪರರ ಚಿಂತೆ ನಮಗೇಕೆ" ಎಂದು ಹೇಳುವ ಮನುಷ್ಯ ಯಾವಾಗಲೂ ಪರರ ಚಿಂತೆಯನ್ನೇ ಮಾಡುವುದು ಸಹಜ. ತನಗೆ ಸಿಕ್ಕಿದ್ದು ಬೇರೆಯವರಿಗೆ ಸಿಗಬಾರದು ಎಂಬ ಮಾನಸಿಕತೆ ಇದೆ ಎಂಬುದಕ್ಕೆ ಅಥವಾ ನಾವು ಎಲ್ಲಿ ಸೋತಿರುತ್ತೇವೆ ಎಂಬುದಕ್ಕೆ ಇಲ್ಲೊಂದು ದೃಷ್ಟಾಂತವಿದೆ.
ಕೇಳಿಬಂದ ಒಂದು ಕಥೆಯ ಪ್ರಕಾರ: ಒಂದು ದಿನ ಯಮಧರ್ಮರಾಯನು ಒಬ್ಬ ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದನು. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದನು. ಯಮನು ಭೂಲೋಕದಲ್ಲಿ ಸುತ್ತಿ ದಾಹದಿಂದ ಬಳಲಿದ್ದನು. ಅವನು ಆ ವ್ಯಕ್ತಿಯಲ್ಲಿ ಕುಡಿಯಲು ನೀರು ಕೇಳುತ್ತಾನೆ. ಸಾಯಬೇಕಾಗಿದ್ದ ವ್ಯಕ್ತಿಯೇ ನೀರು ಕೊಟ್ಟು ಯಮನ ದಾಹ ತೀರಿಸುತ್ತಾನೆ.
ಆದರೆ, ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿ ಇವನೇ ಎಂದು ತಿಳಿದು ಯಮನು ಅವನಿಗೆ ಒಂದು ವರವನ್ನು ಕೊಡುತ್ತಾನೆ. ಅದೇನೆಂದರೆ, ಅವನಿಗೆ ಹಣೆಬರಹದ ಪುಸ್ತಕವೊಂದನ್ನು ನೀಡಿ, "ಇದರಲ್ಲಿ ನಿನಗೆಂದೇ ಒಂದು ಹಾಳೆಯಿದೆ. ನಿನಗೆ ಏನು ಬೇಕೋ ಅದನ್ನು ಬರೆದುಕೊ. ನೀನು ಏನು ಬರೆದುಕೊಂಡರೂ ಅದು ನೆರವೇರುವುದು, ಇದರಲ್ಲಿ ಸಂಶಯವಿಲ್ಲ. ಆದರೆ ನಿನಗೆ ಬರೆದುಕೊಳ್ಳಲು ಕೇವಲ ಐದು ನಿಮಿಷ ಮಾತ್ರ ಸಮಯ. ಆ ಐದು ನಿಮಿಷವೇ ನಿನಗೆ ಅತ್ಯಮೂಲ್ಯ. ಆ ಐದು ನಿಮಿಷಗಳು ಮುಗಿದ ನಂತರ ನಿನ್ನ ಹಣೆಬರಹ ಹೇಗಿರುತ್ತದೋ ಹಾಗಾಗುವುದು" ಎಂದು ಹೇಳಿ ಆ ಪುಸ್ತಕವನ್ನು ಕೊಡುತ್ತಾನೆ.
ಆ ವ್ಯಕ್ತಿ ಪುಸ್ತಕ ತೆಗೆದ ತಕ್ಷಣ ಮೊದಲ ಪುಟವನ್ನು ಓದುತ್ತಾನೆ—ಅದರಲ್ಲಿ, "ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ" ಎಂದಿರುತ್ತದೆ. ಅದಕ್ಕೆ ಅವನು, "ವಿದೇಶಕ್ಕೆ ಹೋಗಬಾರದು" ಎಂದು ಬರೆದು ಅವನನ್ನು ತಡೆಯುತ್ತಾನೆ. ಮತ್ತೊಂದು ಪುಟ ತೆರೆಯುತ್ತಾನೆ, ಅದರಲ್ಲಿ ಮತ್ತೊಬ್ಬ ಸ್ನೇಹಿತ ಲಕ್ಷಗಟ್ಟಲೆ ಲಾಟರಿ ಗೆಲ್ಲುತ್ತಾನೆ ಎಂದಿರುತ್ತದೆ. ಆದರೆ ಆ ವ್ಯಕ್ತಿ, "ಅವನಿಗೆ ಲಾಟರಿ ಸಿಗಬಾರದು" ಎಂದು ಬರೆಯುತ್ತಾನೆ.
ಮತ್ತೊಂದು ಪುಟ ತೆರೆಯುತ್ತಾನೆ. ಅದರಲ್ಲಿ ಅವನ ಆಪ್ತ ಗೆಳತಿ ಆಗರ್ಭ ಶ್ರೀಮಂತನನ್ನು ಮದುವೆಯಾಗುತ್ತಾಳೆ ಎಂದಿರುತ್ತದೆ. ಆದರೆ ಆ ವ್ಯಕ್ತಿ, "ಅವಳ ಆಪ್ತ ಗೆಳತಿ ಆ ಆಗರ್ಭ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬಾರದು" ಎಂದು ಬರೆಯುತ್ತಾನೆ.
ಮತ್ತೊಂದು ಪುಟ ತೆರೆಯುತ್ತಾನೆ. ಪಕ್ಕದ ಮನೆಯ ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿ ಸಿರಿವಂತನಾಗುತ್ತಾನೆ ಎಂದು ಇರುತ್ತದೆ. ಆದರೆ ಆ ವ್ಯಕ್ತಿ, "ಅವನು ಸಿರಿವಂತ ನಾಗಬಾರದು" ಎಂದು ಬರೆಯುತ್ತಾನೆ. ಕೊನೆಯ ಹಾಳೆ ತೆರೆಯುತ್ತಾನೆ. ಅದು ಖಾಲಿ ಹಾಳೆಯಾಗಿರುತ್ತದೆ. ಅದರಲ್ಲಿ ಬರೆಯಬೇಕೆನ್ನುವಷ್ಟರಲ್ಲಿ ಯಮನು ಆ ಪುಸ್ತಕವನ್ನು ಕಸಿದುಕೊಳ್ಳುತ್ತಾನೆ. ಏಕೆಂದರೆ ಅವನಿಗೆ ನೀಡಿದ ಐದು ನಿಮಿಷದ ಗಡುವು ಮುಗಿದು ಹೋಗಿರುತ್ತದೆ.
ಆಗ ಯಮನು, "ನಿನ್ನ ಆಯಸ್ಸು ಮುಗಿದಿದೆ, ನಡೆ" ಎಂದು ಹೇಳುತ್ತಾನೆ. ಆಗ ಆ ವ್ಯಕ್ತಿ, "ನನಗೋಸ್ಕರ ನಾನು ಏನು ಬರೆದುಕೊಳ್ಳಲಿಲ್ಲ" ಎಂದು ಹೇಳುತ್ತಾನೆ. ಆಗ ಯಮನು, "ನಿನಗೆಂದೇ ಒಂದಷ್ಟು ವರ್ಷಗಳ ಆಯಸ್ಸನ್ನು ಕೊಟ್ಟಿರುತ್ತೇವೆ. ಅದರಲ್ಲೂ ವರವೆಂದು ಐದು ನಿಮಿಷಗಳ ಆಯಸ್ಸನ್ನು ಕೊಟ್ಟರೂ, ನೀನು ನಿನ್ನ ಬಗ್ಗೆ ಯೋಚಿಸದೆ ಪರರ ಅವನತಿಯ ಬಗ್ಗೆಯೇ ಯೋಚಿಸುತ್ತೀಯೆಂದರೆ ಏನು ಹೇಳೋಣ? ಜೀವನವಿಡೀ ಸಮಯ ಕೊಟ್ಟರೂ ನೀನು ನಿನ್ನ ಮಹತ್ವವನ್ನೇ ತಿಳಿಯದೆ ಪರರ ಬಗ್ಗೆ ಆಲೋಚಿಸುವವರಿಗೆ ಇಲ್ಲಿ ಬದುಕುವ ಹಕ್ಕಿಲ್ಲ" ಎಂದು ಹೇಳಿ ಅವನನ್ನು ಕರೆದುಕೊಂಡು ಹೋಗಿಬಿಡುತ್ತಾನೆ.
ನಮಗೆಂದೇ ಒಂದಷ್ಟು ಹಾಳೆಗಳಿವೆ, ನಮಗೆಂದೇ ಒಂದಷ್ಟು ದಿನಗಳಿವೆ, ನಮಗೆಂದೇ ಒಂದು ಬದುಕಿದೆ, ನಮಗೆಂದೇ ಒಂದು ದಾರಿಯಿದೆ. ನಾವು ಪರರ ಬಗ್ಗೆ ಚಿಂತಿಸುವುದನ್ನು ಬಿಟ್ಟು, ನಮ್ಮಲ್ಲಿ ಸನ್ಮಾರ್ಗದ ವಿಶಿಷ್ಟತೆಯನ್ನು ಬೆಳೆಸಿಕೊಂಡು ಇತರರಿಗೆ ಮಾರ್ಗದರ್ಶನ ತೋರುವ ಕಾಲ ಯಾವಾಗ ಬರುವುದು?
***