Showing posts with label chintane- DEDICATED TO RATAN TATA ರತನ್ ನಾವಲ್ ಟಾಟಾ 🤔😀. Show all posts
Showing posts with label chintane- DEDICATED TO RATAN TATA ರತನ್ ನಾವಲ್ ಟಾಟಾ 🤔😀. Show all posts

Thursday, 10 October 2024

DEDICATED TO RATAN TATA ರತನ್ ನಾವಲ್ ಟಾಟಾ 🤔😀

kindly note ratan tata demised on October 9, 2024

ಇಂದು ನಾನು ಬೆಳಿಗ್ಗೆ ಅದೇಕೋ ಬೇಗ ಎದ್ದಿದ್ದೆ.  ಛಳಿ ಜಾಸ್ತಿ ಇದೆ ಅಂತ ಅನ್ನಿಸ್ತು. ಕೂಡಲೇ ವೋಲ್ಟಾ ಸ್ AC ಬಂದ್ ಮಾಡಿದೆ.  ಟೈಟಾನ್ ಕೈ ಗಡಿಯಾರ ದಲ್ಲಿ ಸಮಯ ನೋಡಿದೆ.  ಇನ್ನೂ ಆರು ಹೊಡೆದಿರಲಿಲ್ಲ. ಒಂದು ಕಪ್ ಟೀ ಮಾಡಿ ಇವಳನ್ನ ಎಬ್ಬಿಸೋಣ ಎಂದು ಗಾಸ್ ಸ್ಟೋವ್ ಹಚ್ಚಿಸಿ ನೀರು ಕಾಯಲಿಕ್ಕೆ ಇಟ್ಟೆ. ಟಾಟಾ ಟೀ ಪೌಡರ್ ಹಾಕಿ ಘಮ ಘಮಾ ಎನ್ನುವ ಎರಡು ಲೋಟ ಟೀ ತಯಾರಿಸಿ  croma ಮಾಲ್ ನಿಂದ ತಂದ croma ಟಿವಿ ಸ್ವಿಚ್ ಹಾಕಿ ಟಾಟಾ  ಪ್ಲೇ ರಿಮೋಟ್ ನಿಂದ ಬೆಳಗಿನ ಸುಪ್ರಭಾತ ಹಾಕಿದೆ. ಹಾಗೇ ಇವಳನ್ನ ಎಬ್ಬಿಸಿದೆ. ನನ್ನಿಂದ ಪ್ರಾರಂಭವಾದ ನಮ್ಮಿಬ್ಬರ ಸಂಭಾಷಣೆ ಹೀಗಿತ್ತು.

"ಎಳ್ ತೀಯ.. ಟೀ ಮಾಡಿದೀನಿ"

"ಯಾಕ್ರೀ ಇವತ್ತು ಇಷ್ಟು ಬೇಗ ಎದ್ದಿದ್ದು?. ಸರ ಪ್ರಾಮಿಸ್ ಮಾಡಿದ್ರಲ್ಲ ಅದಕ್ಕೆ ನಿದ್ದೆ ಬರಲಿಲ್ವ ?"

"ಯಾಕೋ ಎಚ್ಚರ ಬೇಗ ಆಯ್ತು.  ಯೋಚಿಸಬೇಡ ಸಂಜೆ  Tanishq ಗೆ ಹೋಗೋಣ"

"ಹೇಗೆ ಹೋಗೋದು ಡ್ರೈವರ್ ಬೇರೆ ಅವನ ಹಳ್ಳಿಗೆ ಹೋಗಿದ್ದಾನಲ್ಲ ?"

"ನ್ಯಾನೋ ನ ನಾನೇ ಡ್ರೈವ್ ಮಾಡ್ತೀನಿ.  ಎಷ್ಟು ಮಹಾ ದೂರ ?"


"ರೀ"

'"ಏನು?"

"ಈ ಸಲ ಮುಂಬಯಿಗೆ ಹೋದಾಗ ತಾಜ್ ಹೋಟೆಲ್ ನಲ್ಲಿ ಇರೋಣವಾ"

ನಾನು ನನ್ನ ಮನಸ್ಸಿನಲ್ಲೇ  ನಾನೇನು ಟಾಟಾ ನಾ? ಅಂದ್ಕೊಂಡೆ.  ಆದರೂ ಇವಳಗೇಕೆ ಬೇಜಾರು ಮಾಡಬೇಕೆಂದು..

"ಮಗಳು ಹೇಗೂ  TCS ನಲ್ಲಿ ಇದ್ದಾಳಲ್ಲ, ಅವಳಿಗೆ ರೂಮ್ ಮತ್ತು ವಿಸ್ತಾರದಲ್ಲಿ air ಟಿಕೆಟ್ ಬುಕ್ ಮಾಡಲು request ಮಾಡ್ಕೋ.  ಟೀ ತಣ್ಣ ಗಾಗುತ್ತೆ ಬೇಗ ಕುಡಿ. ".

ಮಾತುಗಳ ಮುಕ್ತಾಯ 

dedicated to Ratan Tata

***
end- thoughts documented ಸಂಟೈಂ ಇನ್ October 2024 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...