30 Dec 2002 - Imaginative write-up ಪ್ರಹಸನ
ಪಾತ್ರಗಳು (Characters)
ಗಂಡ: ವಯಸ್ಸು 55
ಹೆಂಡತಿ: ವಯಸ್ಸು 52
ಆಗಂತುಕ: ವಯಸ್ಸು 57
ಅಪರಿಚಿತೆ: ವಯಸ್ಸು 53
ಗಂಡ: ಏನೇ ಕೇಳಿಸ್ತಾ? ಎಲ್ಲಿಟ್ಟಿದ್ದೀಯ ನನ್ನ ಕನ್ನಡಕನಾ?
ಹೆಂಡತಿ: ಕಸದ್ ಡಬ್ಬೀಲೀ. (ಕಿರಿಕಿರಿಗೊಂಡ ಧ್ವನಿಯಲ್ಲಿ)
ಗಂಡ: ಯಾಕೆ ಹೀಗೆ ಮಾತಾಡ್ತೀಯಾ? ಸ್ವಲ್ಪ ಸಹಾಯ ಮಾಡೇ ನನ್ನ ಕನ್ನಡಕ ಹುಡ್ಕೋದಿಕ್ಕೆ.
ಹೆಂಡತಿ: ಅಯ್ಯೋ, ಕನ್ನಡಕ ಹಾಳಾಗಿ ಹೋಗ್ಲಿ! ನಿಮ್ಮ ಕಾಟ ಜಾಸ್ತಿಯಾಯ್ತು.
ಗಂಡ: ಹೌದು, ನಾನು VRS (ವಯಸ್ಕ ನಿವೃತ್ತಿ ಯೋಜನೆ) ತೊಗೊಂಡಾಗಿನಿಂದ ನೀನು ಹೀಗೆ ನನ್ನ ಹೀಯಾಳಿಸ್ತಾ ಇರ್ತೀಯ.
ಹೆಂಡತಿ: ಇನ್ನೇನು ಮತ್ತೆ? ನಿಮಗೆ ಬೇರೆ ಕೆಲ್ಸ ಇದ್ದರೆ ತಾನೇ? ಅದೆಲ್ ಹೋಯ್ತು, ಅದನ್ಯಾಕೆ ಹೀಗೆ ಮಾಡ್ದೆ, ದುಡ್ಡು ಹೆಚ್ಚು ಖರ್ಚು ಮಾಡ್ತಿದ್ದೀಯಾ—ಹೀಗೆಲ್ಲ ಯಾವಾಗ ನೋಡಿದ್ರೂ ಆಫೀಸ್ನಲ್ಲಿದ್ದ supervise ಕೆಲ್ಸಾನಾ ಮನೆಯಲ್ಲೇ ಪ್ರಾರಂಭಿಸಿದ್ದೀರಲ್ಲಾ. ಅದಕ್ಕೆ!
ಗಂಡ: ನನ್ನ ಹಣೇಬರಹ! VRS ತೊಗೊಂಡಾಗಿನಿಂದ ಯಾರೂ ನನಗೆ ಬೆಲೆನೇ ಕೊಡೋದಿಲ್ಲ. ನೀನೋ ಹೀಗೆ. ಇನ್ನು ನನ್ನ ಮಗನಾದ್ರೋ ಮಾತಾಡದನ್ನೇ ನಿಲ್ಲಿಸಿದ್ದಾನೆ.
ಹೆಂಡತಿ: ಇನ್ನೇನು ಮತ್ತೆ? ಅವನ ಸ್ನೇಹಿತರ ಹತ್ತಿರ 'ನಮ್ಮಪ್ಪ ಎಲ್ಲೂ ಕೆಲ್ಸಾನೇ ಮಾಡೋಲ್ಲಾ' ಅಂತ ಹೇಳೋದಿಕ್ಕೆ ನಾಚ್ಕೆ ಆಗಿ ಮರ್ಯಾದೆ ಹೋದ ತರಹ ಆಗುತ್ತಲ್ಲ. ಅದಕ್ಕೆ ಹಾಗೆ.
ಗಂಡ: ಅಷ್ಟೇನೋ? ಅಥವಾ ಇನ್ನೇನಾದ್ರು ಇದೆಯೋ?
ಹೆಂಡತಿ: ಅವನ ಸ್ನೇಹಿತರೆಲ್ಲ ಅವರ ತಂದೆ ಇಂತಹ ದೊಡ್ಡ ಕೆಲಸದಲ್ಲಿ ಇದ್ದಾರೆ ಅಂತ ಜಂಭ ಕೊಚ್ಕೋತಾರಂತೆ ಮತ್ತು ಶ್ರೀಮಂತರಂತೆ.
ಗಂಡ: ನಂಗೂ ಕೂಡ ಕೆಲ್ಸ ಇಲ್ದೇ ಇದ್ದರೇನೆಂತೆ? ಈಗ ದೊಡ್ಡ ಕೆಲ್ಸದಿಂದ ತಾನೇ VRS ತಗೊಂಡಿರೋದು. ನಮ್ಗೂ ಕಾರು ಇದೆಯಲ್ಲ, ಡ್ರೈವರ್, ಆಳು, ಕಾಳು ಎಲ್ಲಾ ಇದ್ದಾರಲ್ಲ. ಹಾಗೇನೇ ನಾಳೆ ಬೇರೆ ಇವನ್ನ ನೋಡೋಕೆ ಮೂರ್ತಿಯವರು ಬರ್ತಾ ಇದ್ದಾರಲ್ಲ. ಒಬ್ಬಳೇ ಮಗಳು ಅವರಿಗೆ, ತುಂಬಾ ಶ್ರೀಮಂತರು ಬೇರೆ.
ಹೆಂಡತಿ: ನೀವೆನ್ ವಟ್ ವಟಾಂತ ಕಪ್ಪೆ ತರಹ ವಟಗುಟ್ಟಿದ್ರೂ ನಿಮ್ಗೆ ಕೆಲ್ಸ ಮಾತ್ರ ಇಲ್ಲವಲ್ಲ.
ಗಂಡ: ಹೋಗ್ಲಿ ಬಿಡು, ಯಾಕೆ ಸುಂಸುಮ್ನೇ ಹಿಯಾಳಿಸ್ತೀಯ. ಅಲ್ಲಾ... ಈಗ ನನ್ನ ನೋಡಿದ್ರೆ ಆ ಡ್ರೈವರ್ ಕೂಡ ಮೀಸೆ ತಿರುವುತಾನಲ್ಲಂತ.
ಹೆಂಡತಿ: ಇನ್ನೇನು ಮತ್ತೆ? ನಿಮ್ಮಿಂದ ಒಂದು ಪೈಸೆ extra ಸಿಗೋಲ್ಲವಲ್ಲ ಅವನಿಗೆ.
ಗಂಡ: ಏನ್ಮಾಡ್ಲಿ, ನಂಗೆ ಬರ್ತಿದ್ದ extra ಈಗ ನಿಂತೋಗಿದೆಯಲ್ಲ.
ಹೆಂಡತಿ: ಅದಿರಲಿ, extra ಅಂದ್ ಕೂಡ್ಲೇ ನೆನಪಾಯ್ತು. ನಿಮಗೊತ್ತಾ, ನಿಮ್ಮ ಜೊತೆಯಲ್ಲೇ ಕೆಲ್ಸ ಮಾಡ್ತಿದ್ದರಲ್ಲ ರಾಮಸ್ವಾಮಿಯವರು, ಅದೇ ಎದುರುಗಡೆ ಲೈನಿನಲ್ಲಿ ಕೊನೆಯ ಮನೆ. ಅವರ ಮನಗೆ CBI ರೇಡ್ ಮಾಡಿದ್ದಾರಂತೆ. ಇಂದು ಬೆಳಿಗ್ಗೆ ಕೆಲ್ಸದವಳು ಹೇಳ್ತಾ ಇದ್ಲು. ಬೆಳಿಗ್ಗೆಯಿಂದ ಯಾರನ್ನೂ ಒಳಗೆ ಬಿಡ್ತಾ ಇಲ್ಲವಂತೆ.
ಗಂಡ: ಅಯ್ಯೋ ಹೌದಾ! ಅಲ್ವೇ, ಮುಂಚೆನೇ ಯಾಕೆ ನಂಗೆ ಹೇಳಲಿಲ್ಲ? ನಮ್ಮನೆಗೂ ಬಂದ್ರೆ ಏನೇ ಮಾಡೋದು?
ಹೆಂಡತಿ: ಮತ್ತೇ, ನೀವೇ ಹೇಳ್ತಿದ್ದರಲ್ಲ ಎಲ್ಲಾ records ಸುಟ್ಟು ಹಾಕಿದ್ದೀನಿ ಅಂತ.
ಗಂಡ: ಅದೇನೋ ಸರಿ. ಆದ್ರೆ ಮನೆಗೆ ಬಂದು ಚೆಕ್ ಮಾಡಿದ್ರೆ ಸಿಕ್ಕಿ ಬೀಳ್ತಿವಲ್ಲೇ!
ಹೆಂಡತಿ: ಹಾಗಾದ್ರೆ.. ಏನ್ರೀ ಮಾಡೋದು ಈಗ? ಗಂಡ: ಅವರೇನಾದ್ರೂ ಬಂದ್ರೆ ನಾನು ಖಾಯಿಲೆಯಿಂದ ಬಳಲುತ್ತಾ ಮಲ್ಗಿದ್ದೇನೆ ಎಂದು ಹೇಳಿ ಬಿಡು. ನೀನೇ ಎಲ್ಲಾದಕ್ಕೂ ಉತ್ತರ ಕೊಟ್ಟು ವಾಪಸ್ ಕಳಿಸಿಬಿಡು. ತುಂಬಾ ಬಡವರು ಅಂತಾನೂ ಹೇಳೋದು ಮರೀಬೇಡ. ಹೆಂಡತಿ: ಆಯ್ತು ರೀ, ಅವರು ಬಂದ್ರೆ ತಾನೇ ಇದೆಲ್ಲಾ.
(ಬಾಗಿಲು ಟಿಕ್ ಟಿಕ್)
ಗಂಡ: ಅಯ್ಯೋ, ಯಾರೋ ಬಂದ್ರು! CBIನವರೇ ಇರಬಹುದು. ಕಿಂಡಿಯಿಂದ ನೋಡೇ ಯಾರೂಂತ.
ಹೆಂಡತಿ: (ಹೋಗಿ ಬಂದು) ರೀ, ನಿಮ್ಮಷ್ಟೇ ವಯಸ್ಸಾದ ಒಬ್ಬ ಗಂಡಸರು ಮತ್ತು ನನ್ನಷ್ಟೇ.... ಇಲ್ಲ.. ನನಗಿಂತ ಸ್ವಲ್ಪ ಜಾಸ್ತಿ ವಯಸ್ಸಾದ ಒಬ್ಬ ಹೆಂಗಸು ನಿಂತಿದ್ದಾರೆ.
ಗಂಡ: ಅಯ್ಯೋ, ಏನೇ ಮಾಡೋದು ಈಗ? ಈ CBIನೋರು ಇತ್ತೀಚೆಗೆ ಹೆಂಗಸರನ್ನೂ ಕೂಡ ಕರೆದು ಕೊಂಡು ಬರ್ತಾರೆ. ಯಾಕಂದ್ರೆ ನಿನ್ನಂತಹ ಪೆದ್ದ ಹೆಂಗಸರ ಹತ್ತಿರ ಬಾಯಿ ಬಿಡಿಸಬಹುದಾಂತ. ನಾನು ಒಳಗೆ ಹೋಗ್ತೀನೀ. ನಂಗೆ ಖಾಯಿಲೆ ಅಂತ ಹೇಳು. ಲೇ, cash ವಿಶಯ, ಮನೆಯಲ್ಲಿರೋದ್ ಚಿನ್ನದ್ ಹಾಗೂ ಬೆಳ್ಳೀದು ವಿಶಯ ಬಾಯ್ ಬಿಟ್ಟೀಯ ಮತ್ತೇ! (ಒಳಗೆ ಹೋಗುವನು)
ಹೆಂಡತಿ: (ಬಾಗಿಲು ತೆರೆದು) ಬನ್ನಿ ಒಳಗೆ.
ಆಗಂತುಕ: ಎಲ್ಲಿ ಜೋಶಿ ಸಾಹೇಬರು ಎಲ್ಲಿದ್ದಾರೆ? ಕರೆಯಿರಿ.
ಹೆಂಡತಿ: ಆಹ್ ಆಹ್.. ಅಂದ್ ಹಾಗೆ ಅವರಿಗೆ ತುಂಬಾ ಖಾಯಿಲೆ, ಮಲಗಿದ್ದಾರೆ, ಏಳೋಕೆ ಆಗಲ್ಲ.
ಆಗಂತುಕ: ಯಾಕೆ, ಡಾಕ್ಟರ್ ಗೆ ತೋರಿಸಲಿಲ್ವಾ?
ಹೆಂಡತಿ: ಅಯ್ಯೋ, ಡಾಕ್ಟರ್ ಹತ್ತಿರ ಹೋಗೋಕೆ ಎಲ್ಲಿದೆ ಹಣ?
ಆಗಂತುಕ: ಇಂತಹ ದೊಡ್ಡ ಬಂಗಲೆಯಲ್ಲಿದ್ದೀರಾ. ಮೇಲಾಗಿ ಕಾರು, ಮೋಟಾರ್ ಸೈಕಲ್ ಎರಡು, 64 ಇಂಚಿನ TV ಎಲ್ಲಾ ಕಾಣಿಸ್ತಿದೆಯಲ್ಲ?
ಹೆಂಡತಿ: ಅಯ್ಯೋ ಇದು.. ಈ ಮನೇ ನಮ್ದಲ್ಲ. ಅವರ ದೊಡ್ಡಪ್ಪನವರದು. ಕಾರು, ಮೋಟಾರ್ ಸೈಕಲ್ ಎಲ್ಲಾ ಅವರದ್ದೇ.
ಅಪರಿಚಿತೆ: ಯಾವುದೂ ನಿಮ್ದಲ್ವಾ?
ಆಗಂತುಕ: (ಅಪರಿಚಿತೆ ಕಡೆ ತಿರುಗಿ) ನೀನೇ ವಿಚಾರಿಸು.
ಹೆಂಡತಿ: ಅಯ್ಯೋ, ಸಂಶಯ ಬೇಡಾ. ನಾವು ತುಂಬಾ ಬಡವರು. ನಿಜವಾಗ್ಲೂ. ಏನೂ ಹಣ ಇಲ್ಲ. ಇವರು ಬೇರೆ VRS.. ಅಲ್ಲಾ, ಆಫೀಸಿನವರೇ ಕೆಲಸದಿಂದ ಕಿತ್ತು ಹಾಕಿದ್ದಾರೆ. ಬೇರೆ ಕೆಲ್ಸ ಕೂಡ ಮಾಡ್ತಾ ಇಲ್ಲಾ. ಖಾಯಿಲೆಯಿಂದ ಬೇರೆ ನರಳುತ್ತಾ ಇದ್ದಾರೆ.
ಅಪರಿಚಿತೆ: ಮತ್ತೇ.. ನಿಮ್ಮ ಮಗ ನೋಡುಕೊಳ್ಳೋದಿಲ್ವಾ?
ಹೆಂಡತಿ: ಅಯ್ಯೋ, ಅವನೂ ಕೂಡ ಈಗ ಹುಚ್ಚು ಹುಚ್ಚಾಗಿ ಆಡ್ತಾನೆ.
ಅಪರಿಚಿತೆ: ಏನೂ, ಹುಚ್ಚಾ?
ಹೆಂಡತಿ: ಇವರ ಕೆಲ್ಸ ಹೋದ ಮೇಲೆ ಅವನೂ ಹುಚ್ಚಾಗಿಬಿಟ್ಟಿದ್ದಾನೆ.
ಅಪರಿಚಿತೆ: (ಆಗಂತುಕನ ಕಡೆ ನೋಡಿ) ರೀ, ಬನ್ರೀ ವಾಪಸ್ಸು ಹೋಗೋಣ. ನಿಮ್ಮ ಮಾತು ಕೇಳಿ ಬಂದಿದ್ದಾಯ್ತು. ಈಗ ಗೊತ್ತಾಯ್ತಲ್ಲ. ಅವರಿಗೆ ಖಾಯಿಲೆ, ಮಗನಿಗೆ ಹುಚ್ಚು. ಇಂತಹ ಮನೆಗೆ ನಮ್ಮ ಒಬ್ಬಳೇ ಮಗಳನ್ನು ಕೊಟ್ಟರೇ.... ರಾಮ ರಾಮ...
ಆಗಂತುಕ: ಆಯ್ತು, ನಡೆ.
ಹೆಂಡತಿ: ಏನೂ! ನೀವು ಮೂರ್ತಿಯವರಾ? ಮತ್ತೇ ನಾಳೆ ಬರ್ತ್ತೀರಾಂತ ಇವರು ಹೇಳ್ತಾ ಇದ್ರಲ್ಲ.
ಆಗಂತುಕ: ನಾಳೆ ಅರ್ಜೆಂಟ್ ಆಗಿ ಡೈರೆಕ್ಟರ್ಸ್ ಮೀಟಿಂಗ್ ಇದೆ. ಹೋಗಲೇ ಬೇಕು. ಅದಕ್ಕೇ ಇಂದು ಬೆಳಿಗ್ಗೆ flightನಲ್ಲೇ ಹೋಗಿ ಬರೋಣಾಂತ ನಿರ್ಧಾರ ಮಾಡಿದ್ವಿ. ಫೋನ್ ಲೈನ್ ತುಂಬಾ busy ಆಗಿತ್ತು. ಖುದ್ದಾಗಿ surprise ಕೊಡೋಣಾಂತ ಹಾಗೇ ಬಂದ್ವಿ. ಇಲ್ ನೋಡಿದ್ರೇ .... ಆಯ್ತು, ನಾವು ಬರ್ತೀವಿ. ಜೋಶಿಯವರಿಗೆ ಆರೋಗ್ಯ ನೋಡಿಕೊಳ್ಳಲು ಹೇಳಿಬಿಡಿ. ನಮಸ್ಕಾರ.
ಅಪರಿಚಿತೆ: ನಡೀರೀ.. ಹೋಗೋಣ.
(ಹೋಗುವರು)
ಹೆಂಡತಿ: ಅಯ್ಯೋ! ಹೊರಟೇ ಹೋದ್ರಲ್ಲ! ರೀ .. ಕನ್ನಡಕ.. ಬನ್ರೀ ಹೊರಗೆ.
ಗಂಡ: ಏನೇ.. ಎಲ್ಲಾ ಹೋದ್ರಾ? ಸಧ್ಯ. ಏನೇನು ವಿಚಾರಿಸಿದ್ರು? ನೀನು ಸರಿಯಾಗಿ ಹೇಳಿದೆ ತಾನೇ - ನಾವು ಬಡವರು, ನಂಗೆ ಖಾಯಿಲೆ...
ಹೆಂಡತಿ: ಅಯ್ಯೋ... ಎಲ್ಲಾ ಹೇಳಿ, ಮಗನಿಗೆ ಹುಚ್ಚು ಅಂತಾನೂ ಕೂಡ ಹೇಳ್ದೆ. ಹೊರಟೋದ್ರು.
ಗಂಡ: Very good! ಇದು ನೋಡು ಹೆಂಡತಿ ಅಂದ್ರೆ ಹೀಗಿರಬೇಕು. ಏನ್ ಬುದ್ಧೀನೆ ನಿಂದು! ಇಲ್ದೆ ಹೋಗಿದ್ರೆ... ಏನ್ ಆಗ್ತಿತ್ತೋ!
ಹೆಂಡತಿ: ಅಯ್ಯೋ ಸುಮ್ ನಿರ್ರೀ ಸಾಕು. ಬಂದವರು ಮೂರ್ತಿ ಮತ್ತು ಅವರ ಪತ್ನೀ ರೀ....
ಗಂಡ: ಹಾಂ.. (ಕುಸಿದು ಬೀಳುವನು)
***
vrs na chakkar
Characters
Husband (Mr. Joshi): Age 55, recently took VRS.
Wife: Age 52, exasperated.
Visitor (Mr. Murthy): Age 57, a potential father-in-law.
Unknown Lady (Mrs. Murthy): Age 53, Murthy’s wife.
**
One Act Drama
Husband: Hey, are you listening? Where did you keep my spectacles?
Wife: In the garbage bin. (Sarcastically)
Husband: Why are you so rude? Just help me look for them.
Wife: Oh, let the spectacles be ruined; your nagging has become unbearable.
Husband: Yes, ever since I took the VRS (Voluntary Retirement Scheme), you’ve done nothing but mock me.
Wife: What else should I do? It would be different if you had another job! You’re always criticizing what I do, asking where things went, why I spent too much—you’ve just moved your office supervising job right here! That’s why.
Husband: This is my fate. Since I took VRS, no one respects me. You treat me like this, and my son has stopped talking to me altogether.
Wife: What else? He's embarrassed to tell his friends that his father is jobless. He feels humiliated. That's why.
Husband: Is that the only reason, or is there something else?
Wife: Apparently, all his friends boast that their fathers have big, rich jobs and are wealthy.
Husband: So what if I don't have a job now? I took VRS from a big job! We still have a car, a driver, and servants, don't we? Besides, Murthy and his wife are coming tomorrow to see our son, aren't they? They only have one daughter, and they are very rich.
Wife: You can chatter like a frog in the rain, but you still don’t have a job.
Husband: Just let it go! Why constantly taunt me? Look... even the driver rolls his mustache at me now!
Wife: What do you expect? He doesn't get a single extra paise from you anymore.
Husband: What can I do? The extra income I used to get has dried up.
Wife: Anyway, speaking of ‘extra,’ I just remembered. Do you know Ramaswamy, the one who worked with you? The last house in the opposite lane? The maid was telling me this morning that the CBI raided his house! They haven’t let anyone inside since dawn.
Husband: Oh, really? Why didn't you tell me earlier? What if they come to our house?
Wife: But you always said you burned all the records.
Husband: That might be true, but if they come and check the house, we'll be caught!
Wife: In that case... what should we do now?
Husband: If they come, just tell them I’m sick and lying down. You answer everything and send them away. And don’t forget to tell them we are very poor.
Wife: Okay, dear. But that's only if they come.
*(A sharp, distinct knock on the door—Tik Tik)
Husband: Oh no, someone’s here! It must be the CBI! Look through the peephole—who is it?
Wife: (Peers out, then steps back, agitated) Dear, a man about your age and a woman... of my age, no..slightly older than me... are standing there.
Husband: Oh dear, what should we do now? These CBI people bring women with them these days, thinking they can trick a simple woman like you into talking. I’m going inside! Tell them I’m sick. And don't you dare mention the cash or the gold and silver! (He rushes offstage)
Wife: (Opens the door) Welcome inside.
Visitor: Where is Mr. Joshi? Please call him.
Wife: Ah, ah... actually, he is very sick, lying down, and can't get up.
Visitor: Why haven't you shown him to a doctor?
Wife: Oh! where do we have the money to go to a doctor?
Visitor: But you live in such a big bungalow, and I can see a car, two motorcycles, and a 64-inch TV!
Wife: Oh, that... this house isn't ours. It belongs to his rich uncle. The car, the motorcycle—everything belongs to him.
Unknown Lady: So, none of this is yours?
Visitor: (Turns to the Unknown Lady, sighing) You inquire.
Wife: Oh, please don't be suspicious. We are very poor. Truly. We have no money. He even took VRS... no..., the office fired him from the job. He isn’t working anywhere else and is suffering from an illness.
Unknown Lady: Then... doesn't your son look after you?
Wife: Oh, he has started acting crazy now too.
Unknown Lady: Crazy?
Wife: After his job went, our son also became crazy.
Unknown Lady: (Looks pointedly at the Visitor) Dear, come on, let’s go back. We came because I listened to you. Now you know the truth. He is sick, and the son is crazy. If we give our only daughter to this house... Oh God, oh God...
Visitor: Alright, let’s go.
Wife: Wait! Are you Mr. Murthy? But he was saying you would come tomorrow.
Visitor: I have an urgent Directors' Meeting tomorrow. I must go. That's why we decided to take a morning flight. The phone line was too busy. We wanted to give a surprise, but what we see here... Anyway, we will leave now. Tell Joshi to take care of his health. Namaskar.
Unknown Lady: Let’s go. (They exit quickly)
Wife: Oh, they left! Dear... my spectacles... come outside!
Husband: (Re-entering, cautiously) Hey! Have they all gone? Whew. What did they ask? You told them correctly, didn't you—that we are poor, and I'm sick...
Wife: Oh... I told them everything, and I even told them that the son is crazy. They left.
Husband: Very good! Now, this is what a wife should be like! You're so smart! Otherwise... who knows what would have happened!
Wife: Oh, please be quiet, that's enough. The people who came were Mr. Murthy and his wife...
Husband: Huh... (He sways and collapses)
***
end- ನಡೆದದ್ದು ಅಲ್ಲ imagination written someಟೈಮ್ in 2002
