30 Dec 2002 Imaginative story - Time 1970s
ಕನ್ನಡ ಮಾಧ್ಯಮದ, ಕೇವಲ ಹುಡುಗರಿದ್ದ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಶಿಕ್ಷಣ ಮುಗಿಸಿದ ನಾನು ಪ್ರೀ-ಯೂನಿವರ್ಸಿಟಿ ಕಾಲೇಜಿಗೆ ಕಾಲಿಟ್ಟಾಗ ಹದಿನೈದು ತುಂಬಿ ಹದಿನಾರಕ್ಕೆ ಕಾಲಿಟ್ಟಿದ್ದೆ. ಕಾಲೇಜಿನಲ್ಲಿ ಸಹಶಿಕ್ಷಣ ಪದ್ಧತಿ ಇದ್ದದ್ದು ನನ್ನ ಹರೆಯದ ವಯಸ್ಸಿಗೆ ರೋಮಾಂಚಕ ಅನುಭವ ನೀಡಿತ್ತು. ಓದಿನಲ್ಲಿ ನಾನು ಮೊದಲಿನಿಂದಲೂ ಚುರುಕು; ಹಾಗಾಗಿ, ಮೊದಲ ಕಿರು ಪರೀಕ್ಷೆಯಲ್ಲಿ ಸುಲಭವಾಗಿ ಪ್ರಥಮ ಸ್ಥಾನ ಗಳಿಸಿದೆ.
ಬಹುಶಃ ಈ ಪ್ರಥಮ ಸ್ಥಾನವೇ ತರಗತಿಯ ಹುಡುಗಿಯರಲ್ಲಿ ನನ್ನ ಬಗ್ಗೆ ಸದ್ಭಾವನೆ ಮೂಡಿಸಿರಬಹುದು. ಇದನ್ನು ದೃಢೀಕರಿಸುವಂತೆ, ನನ್ನ ತರಗತಿಯಲ್ಲಿ ಓದುತ್ತಿದ್ದ ಭುವನೇಶ್ವರದ ಹುಡುಗಿಯೊಬ್ಬಳು ನನ್ನ ಸ್ನೇಹಕ್ಕಾಗಿ ಹಾತೊರೆಯುತ್ತಿದ್ದಳು. ಇಂಗ್ಲಿಷ್ ವಿಷಯದಲ್ಲಿ ಕಂಠಪಾಠದ ಮೂಲಕ ಹೆಚ್ಚು ಅಂಕಗಳನ್ನು ಗಳಿಸಿದ್ದರೂ, ಇಂಗ್ಲಿಷ್‌ನಲ್ಲಿ ಮಾತನಾಡಲು ಮಾತ್ರ ನನಗೆ ಸರಿಯಾಗಿ ಬರುತ್ತಿರಲಿಲ್ಲ; ಬೇರೆಯವರು ಮಾತನಾಡಿದರೆ ಅರ್ಥ ಮಾಡಿಕೊಳ್ಳುತ್ತಿದ್ದೆ ಅಷ್ಟೇ.
ನನ್ನ ಬುದ್ಧಿವಂತಿಕೆಯಿಂದ ಪ್ರಭಾವಿತಳಾದ ಆ ಹುಡುಗಿ, ಕೆಲ ದಿನಗಳ ನಂತರ, ದಿನದ ಮೊದಲ ಉಪನ್ಯಾಸ ಪ್ರಾರಂಭವಾಗುವ ಮುನ್ನ ನನ್ನ ಬಳಿ ಬಂದಳು. ಭೂಗೋಳಶಾಸ್ತ್ರದ ಒಂದು ಅಧ್ಯಾಯದ ಕುರಿತು ಕೆಲ ಸಂಶಯ ನಿವಾರಣೆಗಾಗಿ ಇಂಗ್ಲಿಷ್‌ನಲ್ಲಿಯೇ ಮಾತನಾಡಿಸಿ ಕೇಳಿದಳು. ಆಕೆಯ ಮಾತು, ಶೈಲಿ ಮತ್ತು ಮುಖಭಾವವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಅವಳು ನನ್ನ ಸ್ನೇಹಕ್ಕಾಗಿ ಆಶಿಸುತ್ತಿದ್ದಾಳೆಂದು ಸ್ಪಷ್ಟವಾಯಿತು. ಈ ಅನಿರೀಕ್ಷಿತ ಸನ್ನಿವೇಶದಿಂದ ನನಗೆ ಏನು ಹೇಳಬೇಕೆಂದು ತಿಳಿಯದೇ, ಕಷ್ಟಪಟ್ಟು 'Ok ok, no problem, later' ಎಂದು ಹೇಳಿ, 'excuse me' ಎನ್ನುತ್ತಾ ಮೆಲ್ಲನೆ ಅಲ್ಲಿಂದ ಜಾರಿಕೊಂಡೆ.
ಅಂದು ಇಡೀ ದಿನ ಪಾಠವೊಂದು ತಲೆಯಲ್ಲಿ ಹೋಗಲಿಲ್ಲ; ಆ ಹುಡುಗಿಯೊಂದಿಗೆ ಇಂಗ್ಲಿಷ್‌ನಲ್ಲಿ ಹೇಗೆ ಚರ್ಚಿಸುವುದೆಂಬ ಚಿಂತೆಯೇ ನನ್ನನ್ನು ಕಾಡಿತು. ಛೇ, ಎಷ್ಟೇ ಯೋಚಿಸಿದರೂ ಉಪಾಯ ಹೊಳೆಯಲಿಲ್ಲ. ನನಗೋ ಹಿಂದಿ ಭಾಷೆಯೂ ಬರುವುದಿಲ್ಲವಲ್ಲ ಎಂಬ ಕೊರಗು ಕಾಡಿತು. ನನ್ನ ಅಕ್ಕ ಹಿಂದಿ ಪ್ರಥಮಾ ಪರೀಕ್ಷೆಗೆ ಸೇರಿಸಲು ಮಾಡಿದ ಪ್ರಯತ್ನಗಳನ್ನು ಹೇಗೋ ತಪ್ಪಿಸಿಕೊಂಡಿದ್ದಕ್ಕೆ ಈಗ ನನ್ನನ್ನೇ ಶಪಿಸಿಕೊಳ್ಳುವಂತಾಯಿತು. ಕನಿಷ್ಠ ಹಿಂದಿಯ ಮಧ್ಯಮ ಪರೀಕ್ಷೆಯನ್ನಾದರೂ ಪಾಸ್ ಮಾಡಿದ್ದರೆ, ಈಗ ಹಿಂದಿಯಲ್ಲಾದರೂ ಅವಳೊಂದಿಗೆ ಮಾತನಾಡಿ ಸ್ನೇಹ ಬೆಳೆಸಬಹುದಿತ್ತಲ್ಲ; ಅಥವಾ ಅವಳೇಕೆ ಕನ್ನಡ ಕಲಿತಿಲ್ಲ ಎನ್ನುವ ಯೋಚನೆಗಳು ಮನಸ್ಸಿನಲ್ಲಿ ಹಾದುಹೋದವು.
ಒಂದೆಡೆ ಹರೆಯದ ವಯಸ್ಸಿನಲ್ಲಿ ಒಂದು ಸುಂದರ ಹುಡುಗಿಯ ಸ್ನೇಹವನ್ನು ಕಳೆದುಕೊಳ್ಳಲು ಮನಸ್ಸಿಲ್ಲ, ಇನ್ನೊಂದೆಡೆ ಇಂಗ್ಲಿಷ್ ಭಾಷೆಯನ್ನು ಒಂದೆರಡು ದಿನಗಳಲ್ಲಿ ಹೇಗೆ ಕಲಿಯುವುದು ಎಂಬ ಯೋಚನೆ. ಈ ದ್ವಂದ್ವದೊಂದಿಗೆ ಮನೆ ತಲುಪಿದೆ.
ನನ್ನ ತಂದೆಯವರು ಇಂಗ್ಲಿಷ್ ವಿಷಯದಲ್ಲಿ ಅಪಾರ ಜ್ಞಾನವುಳ್ಳವರಾಗಿದ್ದರು. ಅವರ ಬಳಿ "ಇಂಗ್ಲಿಷ್‌ನಲ್ಲಿ ಮಾತನಾಡಲು ಕಲಿಸಿ" ಎಂದು ನೇರವಾಗಿ ಕೇಳಲು ಭಯ. "ಇಂತಹ ಮನೆಯಲ್ಲಿ ಎಂತಹ ಮಗ ಹುಟ್ಟಿದ್ದಾನೆ, ಇದೇನಿದು ವಿಪರ್ಯಾಸ" ಎನ್ನುವ ನಿಂದನೆಯ ಮಳೆಯಲ್ಲಿ ಅವಮಾನಿತನಾಗಲು ನನ್ನ ಸ್ವಾಭಿಮಾನ ಒಪ್ಪಲಿಲ್ಲ. ಆದರೆ, ಭುವನೇಶ್ವರದ ಆ ಹುಡುಗಿಯ ಚಿತ್ರಣ ಮನದಲ್ಲಿ ಸುಳಿದಾಗ, ಧೈರ್ಯ ತಂದುಕೊಂಡು, ಅನ್ಯ ಮಾರ್ಗವಿಲ್ಲದ ಕಾರಣ, ಒಂದು ಉಪಾಯದೊಂದಿಗೆ ತಂದೆಯವರನ್ನು ವಿನಂತಿಸಿಕೊಳ್ಳಲೇಬೇಕಾಯಿತು. ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲೇ ಮಾತನಾಡಬೇಕೆಂದು ಅಧ್ಯಾಪಕರು ಕಡ್ಡಾಯ ಮಾಡಿದ್ದಾರೆ ಎಂದು ಸುಳ್ಳು ಹೇಳಿ ನನ್ನ ಇಂಗಿತವನ್ನು ವ್ಯಕ್ತಪಡಿಸಿದೆ.
ಅಂದಿನಿಂದಲೇ ವ್ಯಾಕರಣಬದ್ಧ ಇಂಗ್ಲಿಷ್‌ನ ಮನೆಪಾಠ ಆರಂಭವಾಯಿತು. ಕನಿಷ್ಠ ಆರು ತಿಂಗಳ ಸಮಯ ಬೇಕೆಂದು ತಂದೆಯವರು ಹೇಳಿದಾಗ, "ಇನ್ನೂ ಬೇಗ ಕಲಿಸಿ, ಕಷ್ಟಪಡುವೆ" ಎಂದು ನಾನು ಗೋಗರೆದರೂ ಅವರು ಒಪ್ಪಲಿಲ್ಲ. ಬದಲಿಗೆ, "ಬೇಕಿದ್ದರೆ ಕಾಲೇಜಿಗೆ ಬಂದು ಅಧ್ಯಾಪಕರನ್ನು ಭೇಟಿಮಾಡಿ ಮಾತನಾಡುತ್ತೇನೆ" ಎಂದರು. ತಕ್ಷಣ, "ನೀವು ಕಾಲೇಜಿಗೆ ಬರುವುದು ಬೇಡ, ನಾನೇ ಕೇಳಿಕೊಳ್ಳುವೆ" ಎಂದು ಮತ್ತೊಂದು ಸುಳ್ಳು ಹೇಳಿ ಅವರನ್ನು ತಪ್ಪಿಸಿದೆ.
ಇತ್ತ ಮಾರನೇ ದಿನ ಆ ಭುವನೇಶ್ವರದ ಬೆಡಗಿ ಉಪನ್ಯಾಸ ಪ್ರಾರಂಭವಾಗುವ ಮುನ್ನ ನನ್ನನ್ನು ನೋಡಿ ಮಂದಹಾಸ ಬೀರಿದಾಗ, ಮುಗ್ಧತೆಯೊಂದಿಗೆ ಭಯದ ನಗು ನನ್ನ ತುಟಿಗಳಲ್ಲಿ ಮೂಡಿತು. ಐದಾರು ದಿನ ನಾನು ಬೇರೆ ಹುಡುಗರ ಗುಂಪಿನಲ್ಲಿದ್ದು, ಹೇಗೋ ಅವಳ ಭೇಟಿಯನ್ನು ತಪ್ಪಿಸಿದೆ.
ಅತ್ತ ತಂದೆಯವರಾದರೋ 'ನಾಮಪದ ಎಂದರೇನು' ಎಂದು ವ್ಯಾಕರಣದ ಮೊದಲ ಪಾಠವನ್ನು ಪ್ರಾರಂಭಿಸಿದ್ದು, ನನಗೆ ಇಂಗ್ಲಿಷ್ ಮಾತನಾಡಲು ಕನಿಷ್ಠ ಎರಡು ವರ್ಷವಾದರೂ ಬೇಕೆಂದು ಮನದಟ್ಟಾಗಿತ್ತು. ಬೇಗ ಕಲಿಸಿರಿ ಎಂದು ಹೇಳಲು ಹೋದರೆ, ಕಾಲೇಜಿಗೆ ಬರುವೆ ಎನ್ನುತ್ತಾರೆ!
ಇತ್ತ ಆ ಹುಡುಗಿ ಪ್ರತಿದಿನ ನನ್ನ ನೋಡಿ ನಗುತ್ತಾಳೆ, ನನ್ನ ಸ್ನೇಹಕ್ಕಾಗಿ ಕಾಯುತ್ತಿದ್ದಾಳೆ. ನನ್ನ ಮನಸ್ಸೂ ಅವಳ ಸ್ನೇಹವನ್ನು ತೀವ್ರವಾಗಿ ಬಯಸುತ್ತಿದೆ. ನಮ್ಮಿಬ್ಬರ ಮನಸ್ಸು-ಭಾವನೆಗಳಿಗೆ ಒಂದೇ ಗುರಿ ಇದ್ದಂತಿತ್ತು: ಪಾಠದ ನೆಪದಲ್ಲಿ ಸ್ನೇಹವನ್ನು ಪ್ರಾರಂಭಿಸುವುದು, ನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ತರುವಾಯ ಪ್ರೀತಿ-ಪ್ರೇಮದ ಬಾಗಿಲು ತಟ್ಟುವುದು. ಆದರೆ, ಅವಳ ಬಳಿ ಹೋಗಲು ನನಗೆ ಭಯ. ಅತ್ತ ದರಿ (ಹುಡುಗಿ), ಇತ್ತ ಪುಲಿ (ನನ್ನ ತಂದೆ) ಎನ್ನುವ ಪರಿಸ್ಥಿತಿಯಲ್ಲಿ ಕೊನೆಗೂ ಒಂದು ನಿರ್ಣಯ ಕೈಗೊಂಡೆ.
ಮಾರನೆಯ ದಿನ ಸಂಜೆ, ಎಲ್ಲ ಹುಡುಗರೂ ಹೊರಗೆ ಹೋಗುವುದನ್ನು ಖಚಿತಪಡಿಸಿಕೊಂಡು, ಸ್ನೇಹಿತೆಯರೊಂದಿಗೆ ಮನೆಗೆ ಹೊರಟಿದ್ದ ಆ ಭುವನೇಶ್ವರದ ಹುಡುಗಿಯ ಹಿಂದೆ ಓಡಿದೆ. 'Excuse me' ಎಂದಾಗ ಉಳಿದ ಹುಡುಗಿಯರು ವಿದಾಯ ಹೇಳಿ ಅವಳಿಂದ ದೂರವಾದರು. ಯಾರೂ ಅಲ್ಲಿ ನಿಲ್ಲಲಿಲ್ಲ. ಸದ್ಯ ಒಬ್ಬಳೇ ಎಂದು ನಿಟ್ಟುಸಿರು ಬಿಟ್ಟು, ಮುಕ್ತ ಮನಸ್ಸಿನಿಂದ ನಾನು ಬಾಯಿಪಾಠ ಮಾಡಿದ್ದ ಮೂರು ವಾಕ್ಯಗಳನ್ನು ಇಂಗ್ಲಿಷ್‌ನಲ್ಲಿ ಹೇಳಿದೆ. ನನ್ನ ಇಂಗ್ಲಿಷ್‌ನ ಕೊರತೆಯನ್ನು ಅವಳಿಗೆ ಮನವರಿಕೆ ಮಾಡಿದೆ ಮತ್ತು ಪಾಠದ ಅಧ್ಯಾಯದ ಬಗ್ಗೆ ಚರ್ಚಿಸುವುದು ಕಷ್ಟ ಎಂದು ಹೇಳಿಬಿಟ್ಟೆ. "No problem" ಎಂದು ಅವಳು ಮನಸ್ಸಿಲ್ಲದಿದ್ದರೂ ಹೇಳಿ ನನಗೆ ವಿದಾಯ ಹೇಳಿದಳು.
ಅಂದಿನಿಂದ, ಆ ಎರಡು ವರ್ಷಗಳ ಪ್ರೀ-ಯೂನಿವರ್ಸಿಟಿ ಶಿಕ್ಷಣ ಮುಗಿಯುವವರೆಗೆ, ನನ್ನ ಮತ್ತು ಆ ಹುಡುಗಿಯ ಸ್ನೇಹ ಕೇವಲ ದಿನಕ್ಕೊಂದು ಅಥವಾ ಎರಡು ನಗೆಗಳಿಗೆ ಮಾತ್ರ ಸೀಮಿತವಾಯಿತು. ಆದರೆ, ನನ್ನ ಇಂಗ್ಲಿಷ್ ಕಲಿಯುವಿಕೆ ಮಾತ್ರ ತೀವ್ರವಾಗಿ ಸಾಗಿತ್ತು; ಸಾಗಲೇಬೇಕಿತ್ತು! ನಾನು ಬೇಡವೆಂದರೂ ನನ್ನ ತಂದೆಯವರು ಬಿಡಲಿಲ್ಲ!
ಅದೆಷ್ಟೋ ವರ್ಷಗಳ ಹಿಂದೆ ನನ್ನ ಕಣ್ಣ ಮುಂದೆಯೇ ಕಳೆದುಹೋದ ಆ ಅವಕಾಶ ಇಂದಿಗೂ ಮರೆಯಲಾಗಿಲ್ಲ. ಆದರೆ ಒಂದು ಸಂಶಯ ಕಾಡುತ್ತದೆ: ನಮ್ಮ ಪ್ರೀ-ಯೂನಿವರ್ಸಿಟಿ ಪ್ರೀತಿ ಯಶಸ್ವಿಯಾಗಿದ್ದರೆ, ನಮ್ಮ ಓದು ಎಷ್ಟು ಚೆನ್ನಾಗಿ ಮುಂದುವರೆಯುತ್ತಿತ್ತು ಮತ್ತು ನಾವಿಬ್ಬರೂ ಎಷ್ಟು ಒಳ್ಳೆಯ ನಾಗರಿಕರಾಗುತ್ತಿದ್ದೆವು?
ನನ್ನ ತಂದೆಯವರು ಹಾಕಿಕೊಟ್ಟ ಆ ಅಡಿಪಾಯವೇ ಇಂದು ನನ್ನ ಇಂಗ್ಲಿಷ್ ಜ್ಞಾನ ಉನ್ನತ ಮಟ್ಟದಲ್ಲಿರಲು ಕಾರಣವಾಗಿದೆ.
ಆ ಭುವನೇಶ್ವರದ ಹುಡುಗಿಗೆ ಹಾಗೂ ತೀರ್ಥರೂಪ Daddyಗೆ ಧನ್ಯವಾದಗಳು.
***
The Grammar of First Love - Imaginative story - Time 1970s
I was barely sixteen when I transitioned from a Kannada-medium, all-boys school to a pre-university college. The co-education environment was quite a thrilling shock for a teenager like me.
Since I was quick in my studies, I immediately secured the first rank in the initial internal exam. This achievement, I suspected, made a good impression on the girls in my class. Soon enough, a beautiful girl from Bhubaneswar started seeking my friendship. Though I'd scored well in English by pure rote memorisation, I was virtually mute—I could understand English perfectly, but I couldn't speak a word of it.
A few days later, before the first lecture, the girl approached me. Impressed by my ranking, she started talking to me in English, asking for clarification on a chapter in Geography. Analysing her tone, her style, and the eager expression on her face, I felt sure she wanted more than just academic help. Caught completely off guard, I panicked. I managed to stammer out a painful, "Okay, okay, no problem, later," and quickly scurried away, muttering, "Excuse me."
The rest of the day was a blur. My mind was consumed with a single thought: How do I discuss this chapter with her in English? I racked my brain, but no solution appeared. I even cursed my stubborn refusal to learn Hindi! I regretted successfully dodging my sister's determined efforts to make me take the Hindi Prathama exam. If I’d at least passed the intermediate level of Hindi exams, I could have used Hindi to build a friendship. Then I wondered, why hadn't she learned Kannada?
At my age, I couldn't bear the thought of losing the chance at a beautiful friendship, but how could I possibly learn to speak English in a couple of days? I arrived home completely dejected.
My father was an English language expert, but asking him for help felt impossible. My pride recoiled from the inevitable humiliation—I couldn't face the sarcastic rebuke: "Look at the son this brilliant man produced! What an irony!"
However, the image of the girl from Bhubaneswar won out. Summoning my courage, and with no other choice, I decided to approach my father indirectly. I lied, telling him the college faculty had made it mandatory for all students to speak only in English.
That very day, my formal home tuition in grammatically correct English began. When my father stated he needed at least six months, I pleaded to be taught faster, promising to work hard. He refused and even threatened to visit the college to verify the faculty's demand. "No, no need to go to college! I'll take care of it myself," I lied again, narrowly escaping detection.
The next day, the girl smiled brightly at me before the lecture, and a nervous, fearful grin automatically appeared on my own lips. For the next week, I successfully avoided her by surrounding myself with five or six other boys.
Meanwhile, my father had started with the absolute basics: "What is a Noun?" It quickly dawned on me that fluency was at least two years away. If I complained, he'd head straight to the college!
Yet, the girl smiled every day, clearly waiting for me. My heart ached for her friendship. We both seemed to share the same goal: use studies as an excuse to start a friendship, understand each other, and eventually explore romance. But fear paralysed me. Caught between the devil (the girl) and the deep sea (my father), I finally made a decision.
That evening, I waited for the boys to disperse, then ran after the girl and her friends as they headed home. When I called out, "Excuse me," her friends immediately said goodbye and melted away, leaving her alone. Letting out a huge sigh of relief, I used my three memorised English sentences to freely confess my language deficiency and told her that discussing the Geography chapter would be impossible. "No problem," she said, though clearly disappointed, and we said farewell.
For the next two years of pre-university, our entire relationship was limited to one or two daily smiles. My English learning, however, continued relentlessly—it had no choice, since my father would not let up!
The missed opportunity from all those years ago remains unforgettable. Yet, a cynical doubt lingers: had our pre-university romance succeeded, how thoroughly would our studies have progressed, and how good of citizens would we have become?
The solid foundation my father insisted on is the reason my command of English is at a high level today.
Thank you to that girl from Bhubaneswar and to my revered father (Daddy).
***

So good.
ReplyDelete