write-up
ಹರಟೆ - ಪ್ರೇಮ ಪ್ರೀತಿ prema preeti
ಪ್ರೇಮ ಅಥವಾ ಪ್ರೀತಿ ಎನ್ನುವ ಶಬ್ದ ಎಲ್ಲ ಹುಡುಗ ಹುಡುಗಿಯರ ಹರೆಯದ ವಯಸ್ಸಿನಲ್ಲಿ ಪ್ರೀತಿಸಿದಷ್ಟೇ ಪ್ರಿಯವಾದದ್ದು. ಆದ್ದರಿಂದಲೇ ಪ್ರೀತಿ ಪ್ರೇಮ ಬಗ್ಗೆ ತೆಗೆದಂತಹ ಎಲ್ಲಾ ಚಿತ್ರಗಳೂ ಗಲ್ಲಾಪಟ್ಟಿಯಲ್ಲಿ ಗೆಲುವನ್ನು ಸಾಧಿಸುವುದು. ಆ demanded ದೇವರುಗಳಾದ ಶ್ರೀ ಕೃಷ್ಣ, ಶ್ರೀನಿವಾಸ ಕೂಡ ಪ್ರೀತಿಸಿರುವುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಅಂತೆಯೇ ಎಲ್ಲವನ್ನು ತ್ಯಾಗಮಾಡಿದ ಋಷಿ ಮುನಿಗಳೂ ಸಹ ಈ ಜಾಲದಲ್ಲಿ ಸಿಕ್ಕಿಬಿದ್ದಿರುವ ಉದಾಹರಣೆಗಳು ಬಹಳ.
ಈ ಪ್ರೇಮಸಾಗರದಲ್ಲಿ ಈಜಲು ಇಷ್ಟಪಡುವಿರಾದರೆ, ಪ್ರೀತಿ ಎಂದರೇನು, ಅದರ ಗುಣಗಳೇನು ಎಂದು ನೀವು ತಿಳಿಯಲೇ ಬೇಕು.
ಭೌತಶಾಸ್ತ್ರದ ಪ್ರಕಾರ
ಪ್ರೇಮ ಕಾಣಿಸುವುದಿಲ್ಲ, ಅದರ ತೂಕವನ್ನು ಯಾವುದೇ ಅಳತೆಯಲ್ಲಿ ತೂಗಲು ಸಾಧ್ಯವಿಲ್ಲ. ಪ್ರೇಮ ಹತ್ತಿರವಾದಂತೆ ಆಯಸ್ಕಾಂತ (magnetic) ಶಕ್ತಿ ಎರಡರಷ್ಟು ಹೆಚ್ಚಾಗುತ್ತದೆ.
ರಸಾಯನ ಶಾಸ್ತ್ರದ ಪ್ರಕಾರ
ಪ್ರೇಮ ರಂಗು ರಂಗಾಗಿರುತ್ತದೆ, ಸಿಹಿಯಾಗಿಯೂ ಇರುತ್ತದೆ. ಉಪ್ಪಿನ ತರಹ ಇರುವುದಿಲ್ಲ. ಹೃದಯದಿಂದ ಇವುಗಳನ್ನು ಅನುಭವಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಪ್ರೇಮದ action ಆರಂಭವಾಗುತ್ತದೆ. ಮೊದಲು ಯಾವುದೇ ಸಮಸ್ಯೆ simple ಆಗಿ ಕಂಡು ಕ್ರಮೇಣ compound ಆಗಿ ನಂತರ complex ಆಗುವ ಲಕ್ಷಣಗಳೂ ಸಹ ಇರುತ್ತದೆ.
ಗಣಿತ ಶಾಸ್ತ್ರದ ಪ್ರಕಾರ
ಪ್ರೀತಿ ಮಾಡುವವ = ರೇಖೆ (line) ಎಂದು ತಿಳಿದಾಗ
ಪ್ರೇಮ = ಕೋನ (angle _/ )
ಎರಡು ರೇಖೆಗಳು ಭೇಟಿ ಆದಾಗ ಪ್ರೀತಿ ಹುಟ್ಟುತ್ತದೆ. ಕೋನದ ಡಿಗ್ರಿ ಕಡಿಮೆ ಆದಷ್ಟೂ ಪ್ರೇಮ ಗಾಢ ವಾಗುತ್ತದೆ. ಆದರೆ ಕೆಲವೊಮ್ಮೆ ತ್ರಿಕೋಣ ದಿಂದ ಸಮಸ್ಯೆಗಳು ಉದ್ಭವಿಸಿ ಪರಿಹಾರಕ್ಕೆ ಕಂಪ್ಯೂಟರ್ ಕೂಡ ಹ್ಯಾಂಗ್ ಆಗುವ ಸಾಧ್ಯತೆ ಇದೆ.
ಲೆಕ್ಕ ಶಾಸ್ತ್ರದ ಪ್ರಕಾರ
ಪ್ರೇಮದಲ್ಲಿ ಎಷ್ಟು ಹಣವಿದ್ದರೂ ಖರ್ಚಾಗುತ್ತದೆ, ಬಂಡವಾಳ ಎಷ್ಟು ಹಾಕಿದರೂ ಕೆಲವೇ ದಿನಗಳಲ್ಲಿ ಖಾಲಿಯಾಗಿ ಕಾಶ್ ಮಾತ್ರ ಸೊನ್ನೆಯೇ.
ಮನಃ ಶಾಸ್ತ್ರದ ಪ್ರಕಾರ
- ಮದುವೆಗೆ ಮುಂಚೆ - ಪ್ರೇಮದಲ್ಲಿ ಮೂರು ಹೆಜ್ಜೆಗಳಿವೆ. ಒಬ್ಬರ ಬಗ್ಗೆಯೇ ಯಾವಾಗಲೂ ಯೋಚಿಸುವುದು, ಇಷ್ಟಪಡುವುದು ನಂತರ ಪೂಜಿಸುವುದು
- ಮದುವೆಯ ನಂತರ - ಮಕ್ಕಳಲ್ಲಿ ಪ್ರೇಮ ಹಂಚಲಾಗುತ್ತದೆ, ಮಕ್ಕಳ ಮದುವೆಯ ನಂತರ ಮೊದಲ ಸ್ಥಿತಿಗೆ ಬರುವ ಸಾಧ್ಯತೆ ಇದೆ.
ಮಕ್ಕಳಾದ ಕೂಡಲೇ per capita income ಹಂಚಿಹೋಗುತ್ತದೆ. per capita ಆದಾಯ ಕಮ್ಮಿ ಯಾಗಿರುವುದರಿಂದ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತದೆ.
ನಿಸರ್ಗ ನೀತಿಯ ಪ್ರಕಾರ
ಪ್ರತಿಯೊಬ್ಬರೂ ತನ್ನ ಪ್ರೀತಿಯೇ ನಿಜವಾದದ್ದು ಮತ್ತು ಆಚಲವಾದದ್ದು ಎಂದು ಹೇಳುವುದು.
ರಾಜನೀತಿಯ ದೃಷ್ಟಿಯಿಂದ
ಕೇವಲ ಪ್ರೀತಿಗೋಸ್ಕರ ಯುದ್ಧ ಮಾಡಿ ದೇಶವನೆಲ್ಲ ಹಾಳುಮಾಡಿದಂತಹ ಹಠಮಾರಿ ರಾಜರನ್ನು ಇತಿಹಾಸದಲ್ಲಿ ಓದಿರಬಹುದು.
ಇನ್ನು ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿ ಪ್ರೀತಿಗಾಗಿ ಹಾತೊರೆಯುತ್ತಾರೆ. ಪ್ರೀತಿ ಸಿಕ್ಕಮೇಲೆ ಅವರ ಮುಖ ಅರಳಿದ ಮಲ್ಲಿಗೆಯಂತಾಗುತ್ತದೆ. ಪ್ರೀತಿಯ ಕೊನೆಯ ಮೆಟ್ಟಿಲು ಬಂದಾಗ ಭಯ ಕಾಡಲು ಆರಂಭವಾಗುತ್ತದೆ. ಹಿರಿಯರ ಮುಂದೆ ಹೇಗೆ ಹೇಳುವುದು ಎನ್ನುವ ಭಯ. ಆ ಸಮಯದಲ್ಲಿ ಒಬ್ಬರೇ ಇರಲು ಯತ್ನಿಸುತ್ತಾರೆ, mukeshರವರ ಹಾಡುಗಳನ್ನು ಕೇಳುತ್ತಾರೆ, ದೇವರ ಮೇಲೆ ಅಪಾರ ಭಕ್ತಿ ಬೆಳೆಯುತ್ತದೆ.
ಪ್ರೇಮಕ್ಕೆ ಕಣ್ಣಿಲ್ಲವೆಂದು ಹೇಳಿ ಪ್ರೀತಿ ಮಾಡುವವರೂ ಕುರುಡರಾಗುತ್ತಾರೆ. ಪ್ರೀತಿ ಎಂಬುದು ಒಂದು ದೊಡ್ಡ ಖಾಯಿಲೆ. ಇದರ ಔಷಧಿ ಪ್ರಪಂಚದ ಯಾವ ವೈದ್ಯನ ಬಳಿಯೂ ಇಲ್ಲ. ಆದರೆ ಈ ಪ್ರೀತಿಜ್ವರದಿಂದ ಪಾರುಮಾಡಲು ಕೇವಲ ಎರಡು ವಿಧಗಳಿಂದ ಸಾಧ್ಯ. ಒಂದು ಮದುವೆ, ಇನ್ನೊಂದು ಆತ್ಮಹತ್ಯೆ.
No comments:
Post a Comment