Showing posts with label harate- MOORKHA GURKHA ಮೂರ್ಖ ಗೂರ್ಖಾ 🤔😀. Show all posts
Showing posts with label harate- MOORKHA GURKHA ಮೂರ್ಖ ಗೂರ್ಖಾ 🤔😀. Show all posts

Friday, 30 March 2018

MOORKHA GURKHA ಮೂರ್ಖ ಗೂರ್ಖಾ 🤔😀

 


Imaginative write-up

(ಮಕ್ಕಳಿಗಾಗಿ) ಪ್ರಹಸನ    ಮೂರ್ಖ ಗೂರ್ಖಾ 

ಪಾತ್ರಗಳು 

1. ಗೂರ್ಖಾ    2. ಕಳ್ಳ 


Scene 1

ಗೂರ್ಖಾ: ಏಯ್ ಯಾರೋ ನೀನು ಇಷ್ಟು ಹೊತ್ನಲ್ಲಿ ಮನೆಯೊಳಗಿನಿಂದ ಬರ್ತಾ ಇದೀಯ ?

ಕಳ್ಳಅಯ್ಯೋ ಸಿಕ್ಕಿ ಬಿಟ್ಟೆನಲ್ಲಾ... ರೀ ಗೂರ್ಖಪ್ಪನೋರೆ, ದಯವಿಟ್ಟು ನನ್ನ ಬಿಟ್ಟು ಬಿಡ್ರೀ. ನಾನೊಬ್ಬ ಮಾಮೂಲಿ ಚಿಕ್ಕ ಕಳ್ಳಾ ರೀ 

ಗೂರ್ಖಾ: ಅಂತೂ ಸಿಕ್ಕಿದೆಯಲ್ಲ, ಸರಿಯಾಗಿ ಕೆಲ್ಸ ಮಾಡೋದಿಲ್ಲ ಅಂತಾ ನನ್ನ 4 ತಿಂಗಳುಗಳಲ್ಲಿ 5 ಕಡೆ ಕೆಲಸದಿಂದ ಕಿತ್ ಹಾಕಿಸಿಕೊಂಡು ಕಷ್ಟಪಟ್ಟು ಈ ಕೆಲ್ಸನ ಹೇಗೋ ಪಡೆದುಕೊಂಡಿದ್ದೇನೆ. ಇನ್ನೂ 1 ತಿಂಗಳೂ ಕೂಡ ಆಗಿಲ್ಲ. ಈಗ ನಿನ್ನನ್ನ ನಾನು ಬಿಟ್ಟು ಬಿಡ್ತೀನಾ ?

ಕಳ್ಳಏನೂ 5 ಕಡೆ ನಿಮಗೆ ಕೆಲ್ಸ ಹೋಯ್ತಾ ? ಯಾಕೆ ಈ ಕೆಲ್ಸ ಮಾಡುತ್ತೀರ? ಆರಾಮವಾಗಿ ಹಣ ಗಳಿಸೋ ವಿಧಾನ ಒಂದಿದೆ

ಗೂರ್ಖಾ: ಆ! ಏನದು ಕೆಲ್ಸ ?

ಕಳ್ಳಏನಿಲ್ಲ (ಯೋಚನೆ ಮಾಡುತ್ತಾನೆ)

ಗೂರ್ಖಾ: ಬೇಗ ಹೇಳು 

ಕಳ್ಳಹಾ. ನಿಮ್ಮ ಕೆಲಸದಲ್ಲಿ ರಾತ್ರಿ ಡ್ಯೂಟಿ ಸಹ ಇದೆಯಾ ?

ಗೂರ್ಖಾ: ರಾತ್ರಿ ಡ್ಯೂಟಿ ಕೂಡ ಅಲ್ಲಾ . ಬರೀ ರಾತ್ರಿ ಡ್ಯೂಟಿ ನೇ ಇದೆ ಗೊತ್ತಾ 

ಕಳ್ಳಹಾಗಾದ್ರೆ ರಾತ್ರಿ ಎದ್ದಿರೋದು ನಿಮಗೆ ಸುಲಭ ಅಂದ್ ಹಂಗೆ?

ಗೂರ್ಖಾ: ಹೌದು ಹೌದು 

ಕಳ್ಳಹಾಗಾದ್ರೆ ತುಂಬಾ ಸುಲಭದ ಕೆಲ್ಸ ಒಂದಿದೆ

ಗೂರ್ಖಾ: ಸುಲಭ.... ಅಯ್ಯೋ ಬೇಗ ಹೇಳಯ್ಯ ಯಾವ ಕೆಲ್ಸ ಅಂತ 

ಕಳ್ಳಏನಿಲ್ಲ ನನ್  ಜೊತೆ ಸೇರಿಬಿಡಿ ಇಬ್ರೂ ಸೇರಿ ಒಳ್ಳೇ  ಹಣ ಕಮಾಯ್ಸ್ ಬಹುದು

ಗೂರ್ಖಾ: ಏನೂ ಕಳ್ಳತನ ಮಾಡು ಅಂತೀಯ. ಏನೋ ಒಳ್ಳೇ  ಕೆಲ್ಸ ಅಂತ ಹೇಳ್ತಿದ್ದೀ 

ಕಳ್ಳಕಳ್ಳತನ ಕೂಡ ಒಂದು ಕೆಲ್ಸ ಸ್ವಾಮಿ. ಮತ್ತೇ ರಾತ್ರಿ ಮಾತ್ರ ಡ್ಯೂಟಿ 

ಗೂರ್ಖಾ: ಏಯ್ ಚುಪ್. ಏನೋ ಕೆಲ್ಸ ಅಂತಾ ಬಹಳ ಖುಷಿಯಾಗಿದ್ದೆ. ಸಧ್ಯ ನನ್ನ ಈಗಿನ ಕೆಲ್ಸ ಹೋಗದೇ ಇದ್ದರೆ ಸಾಕು. ಹೇಗೂ ನೀನು ಸಿಕ್ಕಿದ್ದೀಯಲ್ಲ ಇನ್ನು ಒಂದು ವರ್ಷ ಆದ್ರೂ ಇದೇ ಕೆಲಸದಲ್ಲಿ ಇರಬಹುದು. ಹಾ ಹಾ ಹಾ 

ಕಳ್ಳರೀ ಸ್ವಾಮಿ ಗೂರ್ಖಪ್ಪ ನೊರೇ ನನ್  ಬಿಟ್ಟು ಬಿಡ್ರೀ ದಯೆವಿಟ್ಟು 

ಗೂರ್ಖಾ:ಬಿಡೋದಾ, ಅದ್ ಮಾತ್ರ ಸಾಧ್ಯವಿಲ್ಲ 

ಕಳ್ಳ(ಯೋಚನೆ ಮಾಡಿ) ಹಾಗಾದ್ರೆ ಒಂದ್ ಸಣ್ಣ ವಿಷಯ ಮರೆತು ಹೋಗಿದೆಯಲ್ಲ 

ಗೂರ್ಖಾ: ಏನದೂ ?

ಕಳ್ಳಇಲ್ಲಿ ನೋಡಿ. ತುಂಬಾ ಕಲ್ಲುಗಳಿವೆ. ನೀವೋ ಬೂಟ್ಸ್ ಹಾಕಿದ್ದೀರ. ನನ್ನ ಕಾಲು ನೋಡಿ, ಚಪ್ಪಲಿನೇ ಇಲ್ಲ

ಗೂರ್ಖಾ: ಏಕೆ ?

ಕಳ್ಳಮನೆಯೊಳಗೆ ಮರೆತು ಬಿಟ್ಟಿದ್ದೀನಿ ಅದಕ್ಕೆ 

ಗೂರ್ಖಾ:ಅದಕ್ಕೆ ನಾನೇನು ಮಾಡ್ಲಿ ?

ಕಳ್ಳನೀವು ಏನೂ ಮಾಡಬೇಡಿ, permission ಕೊಟ್ರೆ ಒಳಗೆ ಹೋಗಿ ಚಪ್ಪಲಿ ಹಾಕೊಂಡ್ ಬಂದ್ ಬಿಡ್ತೀನಿ 

ಗೂರ್ಖಾ: ನೀನು ಹಾಗೇ ಓಡಿ ಹೋದರೆ ?

ಕಳ್ಳನಾನೇಕೆ ಓಡಿ ಹೋಗ್ಲಿ. ಇಲ್ಲಿ ತಂದಿದ್ದೀನಲ್ಲ ಕಳ್ಳ ಸಾಮಾನು, ಇದನ್ನು ಇಲ್ಲೇ ನಿಮ್ಮ ಹತ್ತಿರ ಇಡ್ತೀನಿ. ನಾನು ಹೀಗೆ ಹೋಗಿ ಹಾಗೇ ಬಂದ್ ಬಿಡ್ತೀನಿ

ಗೂರ್ಖಾ: ಅದು ಸರೀನೆ, ಸಾಮಾನು ಇಲ್ಲೇ ಇದ್ರೆ ನಿನ್ನ ನಾನು ಕಳಿಸಬಹುದಲ್ವಾ 

ಕಳ್ಳಅದೇ ಸ್ವಾಮಿ ನಾನು ಹೇಳೋದು 

ಗೂರ್ಖಾ: ತಕ್ಷಣ ಬರಬೇಕು ?

ಕಳ್ಳಹೀಗೋಗಿ ಹಾಗೆ ಬಂದ್ ಬಿಡ್ತೀನಿ 

(ಸ್ವತಃ ) ಸಧ್ಯ ಬದುಕಿದೆಯಾ ಬಡ ಜೀವವೇ..  

(ಓಡಿ ಹೋಗುವನು)

ಗೂರ್ಖಾ: ಎಷ್ಟೋ ಹೊತ್ತಾಯ್ತು ಇನ್ನೂ ಬರಲಿಲ್ಲವಲ್ಲ. ಸಧ್ಯ ಯಾರೂ ನೋಡಲಿಲ್ಲ. ನೋಡಿದ್ರೆ ಕಳ್ಳನನ್ನು ಹಿಡಿದಿಲ್ಲಾ ಅಂತ ನನ್ನ ಕೆಲಸಕ್ಕೆ ಕೊಕ್ ಕೊಡುತ್ತಿದ್ದರಲ್ಲ.


Scene 2

ಗೂರ್ಖಾ: ಏಯ್ ಯಾರೋ ನೀನು.... ಹಾಂ ನಿನ್ನೆಯ ಕಳ್ಳಾನೇ. ಏನಯ್ಯ ಚಪ್ಪಲಿ ತರ್ತೀನೀ ಅಂತ ಹೊಗೆ ಕೈ ಕೊಟ್ಟಿದ್ಯಲ್ಲ 

ಕಳ್ಳಅಯ್ಯಾ ತಪ್ಪಾಯ್ತು ಸ್ವಾಮಿ. ಇನ್ಮೇಲೆ ಹಾಗೆ ಮಾಡೋಲ್ಲ. ಇದೊಂಸಾರಿ ನನ್ನ ಬಿಟ್ಟು ಬಿಡಿ ದ್ಯಾವರೇ 

ಗೂರ್ಖಾ: ಏನೂ ? ನಿನ್ನ ಬಿಡೋದಾ. ಸಾಧ್ಯವೇ ಇಲ್ಲ. ನಡೀಯಯ್ಯಾ ನನ್ನ ಜೊತೆಗೆ ಪೊಲೀಸ್ ಸ್ಟೇಷನ್ ಗೆ 

ಕಳ್ಳ(ಯೋಚನೆ ಮಾಡುತ್ತಾ ಗೂರ್ಖಾನ ಕಾಲುಗಳನ್ನು ನೋಡಿ)  ರೀ ಗೂರ್ಖಾ ಸಾಹೇಬರೇ, ನಿಮ್ಮ ಕಾಲು ನೋಡ್ಕೊಳ್ಳಿ 

ಗೂರ್ಖಾ:ಯಾಕೆ ?  ಅರೇ ಬೂಟ್ಸ್ ಏ  ಹಾಕಿಲ್ಲವಲ್ಲ 

ಕಳ್ಳಅದೇ ಸ್ವಾಮಿ ನಾನು ಹೇಳ್ತಿರೋದು. ನೋಡಿ ಎಷ್ಟೊಂದು ಕಲ್ಲುಗಳಿವೆ. ಇಂತಹ ಜಾಗದಲ್ಲಿ ನೀವು ಹೇಗೆ ಬರೀ ಕಾಲಿನಲ್ಲಿ ನಡೆದು ಬರ್ತೀರಾ. ಮತ್ತೇ .. ಪೊಲೀಸ್ ಸ್ಟೇಶನ್ ನಲ್ಲಿ ನೀವು ಗೂರ್ಖಾ ಎಂದು ಹೇಗೆ ತಾನೇ ಒಪ್ಕೋತಾರೆ ಪೊಲೀಸ್ನವರು ? ಬೂಟ್ಸ್ ಇರಲೇಬೇಕಲ್ಲವಾ ?

ಗೂರ್ಖಾ: ಹೌದು. ನೀನು ಹೇಳೋದೂ ಸರಿ. ಆದ್ರೆ ಬೂಟ್ಸ್ ಅಲ್ಲಿ ಮನೆ ಹಿಂದುಗಡೆ ಇರುವ ನನ್ನ ರೂಮಿನಲ್ಲಿ ಇದೆಯಲ್ಲಾ. ಅಲ್ಲಿ ಬಿಟ್ಟಿದ್ದೀನಿ 

ಕಳ್ಳನಾನು ಹೋಗಿ ತಂದು ಕೊಡಲಾ ?

ಗೂರ್ಖಾ: ನಾನೇನು ಮೂರ್ಖ ಅಂದ್ಕೊಂಡಿದ್ಯಾ ಅಲ್ಲಿಗೆ ನಿನ್ನ ಕಳಿಸೋಕೆ ? ಮತ್ತೆ ನಿನ್ನೆಯ ತರಹ ನೀನು ಓಡಿ  ಹೋಗ್ತೀಯಾ ಅಂತ ನಂಗೆ ಗೊತ್ತಯ್ಯ 

ಕಳ್ಳಅಯ್ಯಾ ಅದಲ್ಲ ನಾನು ಹೇಳುತ್ತಾ ಇರುವುದು. ನೀವು... ನೀವು.... ಹೀಗೆ ಮಾಡಬಹುದಲ್ವಾ ?

ಗೂರ್ಖಾ: ಹೇಗೆ ?

ಕಳ್ಳನನ್ನ ಕಳಿಸೋಕೆ ನಿಮಗೆ ಸಂಶಯ. ಆದ್ರಿಂದ ನಾನು ಇಲ್ಲೇ ಇರ್ತೀನಿ. ಎಲ್ಲೂ ಹೋಗಲ್ಲ. ನೀವೇ ಹೋಗಿ ಬೂಟ್ಸ್ ತಂದುಬಿಡಿ 

ಗೂರ್ಖಾ: ಹಾಂ . ಇದು ಸರಿ. ನನಗೆ ಹೊಳದೇ ಇಲ್ಲ. ನೀನು ಇಲ್ಲೇ ಇರು. ನಾನು ಈಗಲೇ ಹೋಗಿ ಬೂಟ್ಸ್ ನ ಹಾಕೊಂಡ್ ಬಂದ್ ಬಿಡ್ತೀನಿ. 

(ಹೋಗುವನು)

ಕಳ್ಳಅಬ್ಬಾ. ಜೀವ ಬದುಕಿತು, ಈ ಸಾರಿ ನಾನು ಕದ್ದಿದ್ದ ಸಮಾನೂ ಕೂಡ ನನಗೇ ಸಿಕ್ಕಿತಲ್ಲ.  ಹಾ ಹಾ ಹಾ 

(ಓಡಿ ಹೋಗುವನು)       (ಮಕ್ಕಳಿಗಾಗಿ ಬರೆದಿರುವುದು)

curtain closes..

***
end- elloo ನಡೆದದ್ದು ಅಲ್ಲ imagination thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...