Showing posts with label chintane- PREETI NIBHAYISUVUDU ಪ್ರೀತಿ ನಿಭಾಯಿಸುವುದು. Show all posts
Showing posts with label chintane- PREETI NIBHAYISUVUDU ಪ್ರೀತಿ ನಿಭಾಯಿಸುವುದು. Show all posts

Friday, 30 March 2018

PREETI NIBHAYISUVUDU ಪ್ರೀತಿ ನಿಭಾಯಿಸುವುದು

  


thoughts write-up

ಆಲೋಚನೆ - ಪ್ರೀತಿ ಪಡೆಯುವುದು ಮತ್ತು ನಿಭಾಯಿಸುವುದು preeti padeyuvudu mattu nibhayisuvudu

ಪ್ರೀತಿ ಮಾಡಬೇಕು ಎಂದು ಕೆಲವರು ಹೇಳಿದರೂ ಪ್ರೀತಿ ಅದಾಗಿಯೇ ಇದ್ದಕ್ಕಿದ್ದಂತೆ ಹೇಗೋ ಆಗಿಹೋಗುತ್ತದೆ ಎಂದು ಬಹಳ ಜನರ ವಾದ, ವಿಚಾರ, ಭಾವನೆ. ಪ್ರೀತಿ ಎಂದರೆ, ಹುಡುಗ-ಹುಡುಗಿ, ಗಂಡ-ಹೆಂಡತಿ, ಅಕ್ಕ-ತಂಗಿ, ಅಕ್ಕ-ತಮ್ಮ, ಅಣ್ಣ-ತಮ್ಮ, ಅಣ್ಣ-ತಂಗಿ,  ಸ್ನೇಹಿತರ ನಡುವೆ, ಯಾವ ತರಹದ ಪ್ರೀತಿಯೂ ಆಗಿರಬಹುದು. 

'ಪ್ರೀತಿ ಪಡೆಯುವುದು ಮತ್ತು ನಿಭಾಯಿಸುವುದು' ಎಂಬುದರ ಬಗ್ಗೆ ಕೆಳಗೆ ಕೊಟ್ಟಿರುವ ವಿಚಾರಗಳನ್ನು ಪರಿಶೀಲಿಸಿ. 

  • ಎರಡೂ ಸುಲಭ - ಕಾರಣ ಕೇಳಬೇಡಿ, ಯೋಚಿಸಿಲ್ಲ 
  • ಎರಡೂ ಕಷ್ಟ - ಕಾರಣ ಕೇಳಬೇಡಿ, ಯೋಚಿಸಿಲ್ಲ 
  • ಪ್ರೀತಿ ಪಡೆಯುವುದು ಸುಲಭ ಆದರೆ ಅದನ್ನು ನಿಭಾಯಿಸುವುದು ಕಷ್ಟ 
  • ಪ್ರೀತಿ ಪಡೆದರೆ ತಾನೇ ನಿಭಾಯಿಸುವ ಬಗ್ಗೆ ಯೋಚಿಸಬೇಕು 
  • ಪ್ರೀತಿ ಒಂದು ಕ್ಷಣದಲ್ಲಿ ಆಗುತ್ತದೆ ಆದರೆ ಜೀವನ ಪರ್ಯಂತ ನಿಭಾಯಿಸಬೇಕಾಗುತ್ತದೆ 
  • ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳಿಂದ ಮನಸ್ತಾಪ ಉಂಟಾಗಿ ಪ್ರೀತಿಯನ್ನು ನಿಭಾಯಿಸಲು ಕಷ್ಟವಾಗುತ್ತದೆ 
  • ಪ್ರೀತಿ ಒಂದು ಹೂವಿನ ತರಹ, ಹೂದಾನಿಯಲ್ಲಿಟ್ಟುಬಿಡಬಹುದು. ಆದರೆ ಹೂವಿನ ಪರಿಮಳವನ್ನು (ನಿಭಾಯಿಸುವಿಕೆ) ಕಾಪಾಡುವುದು ಕಷ್ಟ 
  • ಜೀವನದ್ಲಲಿನ ಕಹಿ ಅನುಭವಗಳ ಕಾರಣ ಪ್ರೀತಿ ನಿಭಾಯಿಸುವುದು ನಿಜಕ್ಕೂ ಕಷ್ಟ ಕರ 
  • ಯಾರು ಪ್ರೀತಿ ಮಾಡುವದಕ್ಕೆ ಹೆದರುವುದಿಲ್ಲವೋ ಅವರು ನಿಭಾಯಿಸಲೂ ಹೆದರುವುದಿಲ್ಲ 
  • ಎರಡೂ ಸುಲಭ - ಇಬ್ಬರಲ್ಲಿಯೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಶಕ್ತಿ ಇದ್ದರೆ 
  • ಮೊದಲು ತನ್ನನ್ನು ತಾನು ಅರ್ಥ ಮಾಡಿಕೊಂಡರೆ ಎರಡೂ ಸುಲಭ 
  • ನಾನು ನಿಭಾಯಿಸಲು ತಯಾರು, ಆದರೆ ಅವನೂ/ಅವಳೂ ಕೂಡ ತಯಾರಿದ್ದರೆ 
  • ಸಂಸ್ಕಾರ ಒಳ್ಳೆಯದಿದ್ದರೆ ಎರಡೂ ಕಷ್ಟಕರವಲ್ಲ 
  • ಪ್ರೀತಿ ಪಡೆಯಲು ಏನೆಲ್ಲಾ  ಕಷ್ಟಗಳನ್ನು ಎದುರಿಸಿ ಅಭ್ಯಾಸವಾಗಿದ್ದರಿಂದ ನಿಭಾಯಿಸಲು ಅಂತಹ ಕಷ್ಟವಾಗುವುದಿಲ್ಲ 
  • ಜೀವನ ಪರ್ಯಂತ ಸವಾಲುಗಳಿವೆ, ನಿಭಾಯಿಸಲು ಕಷ್ಟ 
ಮೇಲೆ ಕೊಟ್ಟ ವಿಚಾರಗಳಲ್ಲಿ ನಿಮ್ಮ ಮನಸ್ಸು ಯಾವುದಕ್ಕೆ ಸರಿತೂಗುವುದು? ಪರವಾಗಿಲ್ಲ, ನನಗೆ ತಿಳಿಸಬೇಡಿ, ನಿಮ್ಮಲ್ಲೇ ಇಟ್ಟುಕೊಳ್ಳಿ.

ಈ ವಿಚಾರಗಳನ್ನೆಲ್ಲ ತುಲನೆ ಮಾಡಿದಾಗ ನನಗನ್ನಿಸುವುದು ಹೀಗೆ:
ಪ್ರೀತಿ ಪವಿತ್ರದಿಂದ ಕೂಡಿದ್ದು. ಪ್ರೀತಿ ಮಾಡಿದಮೇಲೆ (ಪ್ರೀತಿ ಇಟ್ಟಮೇಲೆ) ಅದನ್ನು ನಿಭಾಯಿಸಲೇ ಬೇಕು. 
ಇನ್ನು ಗಂಡ ಹೆಂಡತಿಯ ಬಗ್ಗೆ ಹೇಳುವುದಾದರೆ ಮದುವೆಗೆ ಮುಂಚೆ ಇದ್ದ ಪ್ರೀತಿ ನಂತರವೂ ನಿಮ್ಮ ಕಡೆಯಿಂದ ಇರಲೇಬೇಕು, ಮತ್ತು ಹೆಚ್ಚಾಗಲೇ ಬೇಕು, ತೆರೆದ ಮನಸ್ಸಿನಿಂದ ಪ್ರೀತಿ ನಿಭಾಯಿಸಬೇಕು. ಅತಿ ಮುಖ್ಯವಾಗಿ 'ರಾಜಿ' (compromise) ಮಾಡಿಕೊಳ್ಳುವುದನ್ನು ಕಲಿಯಬೇಕು. ಹಿಟ್ಲರ್ ಶಾಹಿ ಅವತಾರ ಯಾರಲ್ಲಿಯೂ ಬೇಡ. ಭಾವನೆಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಿರಿ. ಸಹಭಾಗಿಯ  ಭಾವನೆಗಳಿಗೆ ಮತ್ತು ವಿಚಾರಗಳಿಗೆ ಹುರಿದುಂಬಿಸಿರಿ.  ಇನ್ನೂ ಹೆಚ್ಚಿನ ಪ್ರೀತಿ ಪಡೆಯಿರಿ.
***
end- thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...