Imagination - poem
ಮೊದಲು ಮನ ಕೆಡಿಸಿ ನಂತರ ತಣಿಸಿದವಳು
ಚಲಿಸುವಾ ಮೋಡಗಳ ಹಿಂದೆ
ಕಂಡಂತೆ ಬೆಳದಿಂಗಳ ಬಾಲೆ
ಸೌಂದರ್ಯದ ನಗೆ ಬೀರಿ
ತೋರಿದಳು ಪ್ರೇಮದ ಹೆಬ್ಬಾಗಿಲೇ
ಬಿಸಿಲಿರಲಿ ಮಳೆಯಿರಲಿ ಚಳಿಯಿರಲಿ
ಬಿರುಗಾಳಿಯೇ ಬರಲಿ ನನ್ನ ಜೊತೆಗಿರುವವಳು
ಕಷ್ಟವಿರಲಿ ದುಖವಿರಲಿ ಖುಷಿಯಿರಲಿ
ಸದಾ ನನ್ನ ಜೊತೆ ಪಾಲುದಾರವಾಗುವವಳು
ಇವಳ ನಾ ನೋಡಿದಾಗ
ಇವಳ ಮೈ ಸ್ಪರ್ಶವಾದಾಗ
ಹೃದಯ ಬಡಿತ ಜೋರಾದಾಗ
ಮೈ ಝುಮ್ಮೆoದಿರಲು
ನನ್ನನೇ ನಾ ಮರೆತೆ
ಇವಳಲ್ಲಿ ನಾ ಬೆರೆತೆ
ಇವಳೇ ನನ್ನ ಸೌಂದರ್ಯ
ಇವಳೇ ನನ್ನ ಹೃದಯದಲ್ಲಿರುವ
ಮನ ಮಿಡಿದ
ನನ್ನ ಮಡದಿ
ಇವಳ ನಾ ನೋಡಿದಾಗ
ಇವಳ ಮೈ ಸ್ಪರ್ಶವಾದಾಗ
ಹೃದಯ ಬಡಿತ ಜೋರಾದಾಗ
ಮೈ ಝುಮ್ಮೆoದಿರಲು
ನನ್ನನೇ ನಾ ಮರೆತೆ
ಇವಳಲ್ಲಿ ನಾ ಬೆರೆತೆ
ಇವಳೇ ನನ್ನ ಸೌಂದರ್ಯ
ಇವಳೇ ನನ್ನ ಹೃದಯದಲ್ಲಿರುವ
ಮನ ಮಿಡಿದ
ನನ್ನ ಮಡದಿ
***
end- elloo ನಡೆದದ್ದು ಅಲ್ಲ imagination thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ
.
go back to...
click--> LINKS TO ARTICLES
...
No comments:
Post a Comment