Friday, 30 March 2018

CHALA YATRE ಛಲ ಯಾತ್ರೆ 🤔😀

 


Imaginative story 

ಛಲ ಯಾತ್ರೆ chala yatre

ನಾನೊಬ್ಬ ಅತಿ ಸಾಮಾನ್ಯ ಬರಹಗಾರ. ನಮ್ಮೂರಿನ ಸಾವಿರಾರು ಬಡ ಸಾಹಿತಿಗಳಲ್ಲಿ ನಾನೂ ಒಬ್ಬ. ಸಾಹಿತಿ ಎಂದಾಕ್ಷಣ ನನ್ನ ಕಣ್ಣುಮುಂದೆ ಹಾದು ಹೋಗುವುದು ಆ ಜುಬ್ಬಾ ಪೈಜಾಮದ ಉಡುಗೆ.  ನಮ್ಮೂರಿನ ಕೆಲವು ಸಾಮಾನ್ಯ ಬರಹಗಾರರು ತಾನೊಬ್ಬ ಸಾಹಿತಿಯಂತೆ ತೋರ್ಪಡಿಸ್ಕೊಳ್ಳುತ್ತಾ ತಮ್ಮಲ್ಲಿರುವ ಒಂದೇ ರೇಷ್ಮೆಯ ಬಿಳೀ ಪೈಜಾಮ/ಪಂಚೆ ಹಾಗೂ ಬಿಳೀ ಜುಬ್ಬವನ್ನು ಧರಿಸಿ ಎಲ್ಲಾ ಸಮಾರಂಭಗಳಲ್ಲಿ  ಅರ್ಧ ಗಂಟೆ ಮುಂಚೆಯೇ ಬಂದು, ಒಂದೂ ನಿಮಿಷ ವ್ಯರ್ಥ ಮಾಡದೆಯೇ ಒಂದೂ ಜಾಗದಲ್ಲಿ ಕುಳಿತುಕೊಳ್ಳದಯೇ ಅಲ್ಲಿಲ್ಲಿ ಓಡಾಡುತ್ತಾ ಸಮಾರಂಭ ಪ್ರಾರಂಭವಾಗುವ ವೇಳೆಗೆ ತಾವು ಮೊದಲೇ ರುಮಾಲು ಹಾಕಿ ಕಾದಿರಿಸಿದ್ದ ಮೊದಲನೆಯ ಅಥವಾ ಎರಡನೆಯ ಸಾಲಿನ ಕುರ್ಚಿಯಲ್ಲಿ ಕೂರುವುದೆಲ್ಲವನ್ನು ನಾನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಅನ್ನಿಸಿದ್ದು. ನನಗನ್ನಿಸಿದ್ದು ತಪ್ಪಿರಲೂ ಬಹುದು. ಇರಲಿ ಬಿಡಿ.  

ಈ ಬಿಳೀ ಜುಬ್ಬಾ ಪೈಜಾಮ ತಾವು ಪ್ರಾಯಶಃ ಮದುವೆಯಲ್ಲಿ ಭಾವಿ ಮಾವನಿಂದ ಪಡೆದದ್ದಾಗಿದ್ದು ಆಗಾಗ್ಗೆ ಉಪಯೋಗಿಸದೆ ಭದ್ರವಾಗಿ ಕಾಪಾಡಿ ಈ ಸಾಹಿತಿ ಸಮಾರಂಭಕ್ಕೆಂದೇ ಮೀಸಲಿಟ್ಟುರುತ್ತಾರೆ. ವರ್ಷ ಕಳೆದಂತೆ ತಾವೊಬ್ಬ ಸಾಧಾರಣ ಸಾಹಿತಿಯೆಂದು ಗೊತ್ತಾದರೂ ತಮ್ಮಲ್ಲಿರುವ ವಿಶೇಷ ಉಡುಗೆ ಮಾತ್ರ ಒಗೆದು ujaala ದಿಂದ ಸಾಧ್ಯವಾದಷ್ಟೂ ಫಳಫಳಾಯಿಸಿ ಸಭೆಸಮಾರಂಭಗಳಲ್ಲಿ ಚಮಕಾಯಿಸುವುದನ್ನು ಮಾತ್ರ ಬಿಡಲು ಮನಸ್ಸಿರುವುದಿಲ್ಲ. 

ನನಗೂ ಸಹ ಮದುವೆಯಲ್ಲಿ ರೇಷ್ಮೆ ಮೊಗಟವೇನೋ ಸಿಕ್ಕಿದೆ. ಆದರೆ ನನ್ನ ಅರ್ಧಾಂಗಿ ಅದನ್ನುಡಲು ಮಾತ್ರ  ಕೊಡುವುದೇ ಇಲ್ಲ. ಅವಳ ತಂದೆ ಕೊಟ್ಟಿರುವುದೆಂದು ಹೇಳಿ ಈ dressನ್ನು ಕೇವಲ ಹಬ್ಬ ಹರಿದಿನಗಳಲ್ಲಿ ತೆಗೆಯುತ್ತಾಳೆ. ಬೇಕಾದರೆ ನೀವು ನಿಮ್ಮ ಹಣದಿಂದ ಹೊಸ ರೇಷ್ಮೆ fancy dressನ್ನು ಹೋಲಿಸಿಕೊಳ್ಳಿ ಎಂದು ಹೀಯಾಳಿಸುತ್ತಾಳೆ.

ಹೊಸ ರೇಷ್ಮೆ ಬಟ್ಟೆಯಿಂದ ಈ ಉಡುಗೆ ಹೊಲಿಸಲು ಬಹಳ ಹಣ ಬೇಕಲ್ಲಾ, ಎಲ್ಲಿದೆ ನನ್ನ ಹತ್ತಿರ ? ಆದ್ದರಿಂದ ನಾನು ಬರೆದಂತಹ ಕತೆ, ನಾಟಕ, ಕವನಗಳನ್ನು ಮಾರಿಯಾದಮೇಲೆಯೇ ಈ ಡ್ರೆಸ್ನ ಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೇನೆ. ದುರದೃಷ್ಟವಶಾತ್ ಇದುವರೆವಿಗೂ ಆ ಸಮಯ ನನಗಿನ್ನೂ ಲಭ್ಯವಾಗಿಲ್ಲ. ನಾನು ಸಾಧಾರಣ ಸಾಹಿತಿಗಳಿಗಿಂತ ಸ್ವಲ್ಪ ಕೆಳಮಟ್ಟದಲ್ಲೇ, ಅಂದರೆ ಈ lower middle class ತರಹ ಇದ್ದರೂ ಪರವಾಗಿಲ್ಲ ಎಂದು ಯೋಚಿಸಿ ಒಂದೂವರೆ ಆಣೆ ಗಲ್ಲಿಯಲ್ಲಿರುವ discount sale ಅಂಗಡಿಯಲ್ಲಿ salemನ cotton ಪಂಚೆಯನ್ನು ಕೊಂಡು ಹಾಗೆಯೇ ಖಾದಿ ಭಂಡಾರಿನ 40% ರಿಯಾಯಿತಿಗಾಗಿ ಗಾಂಧಿ ಜಯಂತಿಯ ವರೆಗೂ ಕಾಯ್ದು ಆಕ್ಟೊಬರ್ 2 ರಂದೇ ಒಂದು ಬಿಳೀ (ಯಾಕೋ ಹಳದೀ ತರಹ ಸ್ವಲ್ಪ ಕಾಣಿಸುತ್ತಿದೆ) ಖಾದಿ ಜುಬ್ಬಾ ಖರೀದಿಸಿದ್ದೇನೆ. ನನ್ನನ್ನು ಸಾಹಿತಿಯೆಂದು ಪರಿಚಯ ಮಾಡಿಕೊಳ್ಳಲು ಈ ಖರೀದಿ ಅನಿವಾರ್ಯವೆಂದು ಹೇಳಬೇಕಿಲ್ಲ ತಾನೇ? 

ಯಾವಾಗ ನಾನು ಕಳಿಸಿದ ಕವಿತೆ, ಕಥೆ, ನಾಟಕ ಯಾವುದೂ ಒಂದೂ ದಿನಪತ್ರಿಕೆಯಲ್ಲಾಗಲೀ, ವಾರ ಪತ್ರಿಕೆಯಲ್ಲಾಗಲೀ ಪ್ರಕಟವಾಗದಿದ್ದಾಗ ಛಲ ಬಿಡದ ತ್ರಿವಿಕ್ರಮನಂತೆ ಯಾರಾದರೂ ಪ್ರಕಾಶಕರನ್ನು ಹುಡುಕಿ ಹಿಡಿದು ಪುಸ್ತಕವನ್ನು ಬಿಡುಗಡೆ ಮಾಡಲೇಬೇಕೆಂದು ನಿರ್ಧರಿಸಿದೆ. 

ನಾನು ಬರೆದಿದ್ದೆಲ್ಲದರ ಹಡಪಾ ತೆಗೆದುಕೊಂಡು ಮಾವ ದೀಪಾವಳಿ ಹಬ್ಬದ ದಿನ ಕೊಟ್ಟ ಭಕ್ಷೀಸಿನಿಂದ black board ಬಸ್ಸಿನಲ್ಲಿ ಬೆಂಗಳೂರಿಗೆ ಬಂದದ್ದೂ ಆಯ್ತು. ಮೂರನೆಯ ತರಗತಿಯ ಸ್ನೇಹವನ್ನು ಜ್ಞಾಪಿಸಿ ಆ ಚಡ್ಡಿ ಗಳೆಯನ ಮನೆಗೆ ಹೋಗಿ ಒಂದು ತಿಂಗಳು झंडा ಹೂಡಿದ್ದೂ ಆಯ್ತು.

ದಿನವೂ avenue ರಸ್ತೆ, ಬಳೆಪೇಟೆ, ಚಿಕ್ಕಪೇಟೆ, ಬಸವನಗುಡಿ, ಮಲ್ಲೇಶ್ವರ ತಿರುಗಲು ಪ್ರಾರಂಭಿಸಿದೆ. ಎಲ್ಲಾ ಪ್ರಕಾಶಕರು ನನ್ನ ಅವಸ್ಥೆಯನ್ನು ಮನದಲ್ಲೇ ಗಮನಿಸಿ ತಮ್ಮ ನಿಸ್ಸಹಾಯಕ ಸಂದೇಶವನ್ನು ಒಂದೊಂದು ಕಾರಣ ಮುಖಾಂತರ ಕೊಟ್ಟು ನನ್ನನ್ನು ಓಡಿಸಲು ನೋಡಿದರು. 

ಕೆಲವರು ತಮ್ಮ ಹತ್ತಿರ ಆಗಲೇ ಒಂದು ವರ್ಷದಷ್ಟು ಸಾಹಿತ್ಯದ ಕೆಲಸ ಬಾಕಿಯಿದೆಯೆಂದರು. ಈಗಿನ Harry Poter, Spiderman ಕಾಲದಲ್ಲಿಯೂ ಅವರು ಎಷ್ಟು ನಿಜವನ್ನು ನುಡಿಯುತ್ತಿದ್ದಾರೆಂದು ನನಗೆ ಗೊತ್ತಾದರೂ ಮುಂದಿನ ವರ್ಷದ chanceಗೋಸ್ಕರ ಏನೂ ತಿಳಿಯದವನಂತೆ ನಟಿಸಿ ಆರು ತಿಂಗಳುಗಳ ನಂತರ ಬರುತ್ತೇನೆಂದು ಹೇಳಿ ಹೊರ ಬಂದೆ.

ಇನ್ನು ಮಾರ್ವಾಡಿ ಪ್ರಕಾಶಕರು ಪ್ರಕಟಕ್ಕೆ ಬೇಕಾಗುವ ಖರ್ಚಿನ ಶೇಕಡಾ 100 ರಷ್ಟು ಭಾಗವನ್ನು deposit ಮಾಡಲು ನನಗೆ ಸೂಚಿಸಿದರು. ಕಂತಿನ ಮುಖಾಂತರ ಪುಸ್ತಕ ಮಾರಾಟವಾದಂತೆ ವಾಪಸ್ಸು ಕೊಡುವುದಾಗಿ ಹೇಳಿದರು. ಎಲ್ಲಾ ಪುಸ್ತಕಗಳು ಮಾರಾಟವಾದಮೇಲೆ ಮುಂದಿನ ಪ್ರಕಟನೆಗಳಲ್ಲಿ royalty ಬಗ್ಗೆ ಮಾತಾಡೋಣವೆಂದರು.

ಹಲವಾರು ತಮ್ಮಲ್ಲಿರುವ ಹಳೇ lead prints ಮತ್ತು ಮಗ್ಗದ machine ತರಹ ಇರುವ printing ಸಾಮಗ್ರಿಗಳನ್ನು ನನಗೆ ತೋರಿಸಿ ಈಗ ಹೊಸ offsetಗೆ ಬದಲಾಯಿಸಲು ನಿರ್ಧರಿಸಿದ್ದೇವೆ. ಬಾಂಕಿನ ಸಾಲ ಸಿಕ್ಕನಂತರ ನಿಮ್ಮ ಪ್ರಕಾಶನ ಮಾಡಲು ಯೊಚಿಸೋಣ ಎಂದರು. ಬಾಂಕಿನ ಸಾಲ ಯಾವಾಗ ಸಿಗಬಹುದೆಂದು ಕೇಳಿದಾಗ ಸಾಲಕ್ಕೆ ಇನ್ನು ಅರ್ಜಿ ಸಲ್ಲಿಸಿಲ್ಲ ಎಂದರು.

ಮತ್ತೂ ಕೆಲವರು, ಕ್ಷಮಿಸಿ, ಬಹಳಷ್ಟು ಪ್ರಕಾಶಕರು ಹೊಸ ಸಾಹಿತಿಗಳ ಪ್ರಕಟನೆಗಳಿಂದ ತಮಗಾದ ಅವಸ್ಥೆಯನ್ನು ಮತ್ತು ಕಹಿ ಅನುಭವವನ್ನು ತೋಡಿಕೊಂಡರು. ತಮ್ಮಲ್ಲಿದ್ದ ಸ್ವಂತ ಮನೆ ಮಾರಿ ಈಗ ಬಾಡಿಗೆ ಮನೆಯ ಬಚ್ಚಲು ಮನೆ ಅಟ್ಟದ ಮೇಲೆ ಪ್ರಕಟಿತ ಪುಸ್ತಕಗಳನ್ನೆಲ್ಲ ಜೋಡಿಸಿ ಉರವಳಿಗೆಗೆ ಉಪಯೋಗಿಸುವುದನ್ನು ತಿಳಿಸಿದರು. ಕಟ್ಟಿಗೆಯ ಖರ್ಚಾದರೂ ಉಳಿಯಬಹುದೆಂದು ಅವರ ವಾದ.

ಇನ್ನೊಂದೆಡೆ... ಅಯ್ಯೋ ಬೇಡಾ ಬಿಡಿ result ಗೊತ್ತೇ ಇದೆಯಲ್ಲ. ಇನ್ನೇಕೆ ನೀವು ನನ್ನ ಗೊಳನ್ನು ಕೇಳಬೇಕು? 

ಬೋರೇಗೌಡ ಬೆಂಗಳೂರಿಗೆ ಬಂದು ಕೊನೆಯ ಪಕ್ಷ ಎಲ್ಲಾ ಪೇಟೆಗಳನ್ನು ನೋಡಿ ಹಾಗೆಯೇ ಮೈಸೂರಿಗೂ ಹೋಗಿ ಆನೆಯ ಅಂಬಾರಿಯಲ್ಲಿ ಹತ್ತಿ ಕುಳಿತ್ತಿದ್ದನು, ಜೊತೆಗೆ ತನ್ನ ಹೆಂಡತಿಯನ್ನೂ ಕರೆದುಕೊಂಡು ಹೋಗಿದ್ದನು. ನಾನಾದರೋ ಒಬ್ಬನೇ ಬರಲು ಕೂಡ ಹಣಕ್ಕಾಗಿ ಬಹಳಷ್ಟು ಪರದಾಟ ನಡೆಸಿದ್ದು ಆ ಭಗವಂತನಿಗೇ ಗೊತ್ತು. ಇನ್ನು ನನ್ನಾಕೆಯನ್ನು ಹೇಗೆತಾನೇ ಕರೆತರಲು ಸಾಧ್ಯವೆಂದು ನನ್ನನ್ನೇ ಪ್ರಶ್ನೆ ಮಾಡತೊಡಗಿದೆ. 

ವಾಪಸ್ಸು ಹೋಗಲು ಸ್ನೇಹಿತನಿಂದ ಸಾಲ ಪಡೆದು (ಸಾಲ ಸುಲಭವಾಗಿ ಸಿಕ್ತು, ಇಲ್ಲದಿದ್ದರೆ ಸ್ನೇಹಿತನ ಮನೆಯಲ್ಲಿಯೇ ನಾನು ಇರುವೆಯಲ್ಲ?) ಬಸ್ಸು ನಿಲ್ದಾಣದ ಕಡೆಗೆ ಹೆಜ್ಜೆ ಹಾಕತೊಡಗಿದೆ. ರಾಜ್ಯೋತ್ಸವ ತಿಂಗಳಾದ ನವೆಂಬರ್ನಲ್ಲಿ ನನ್ನ ಚಳಿ ಯಾತ್ರೆ, ಅಲ್ಲ ಛಲ ಯಾತ್ರೆ ಫಲಕಾರಿಯಗಲು ಸಫಲವಾಗಲಿಲ್ಲ. 


ಮೇಲೆ ಕಾಣಿಸುವ ಚಿತ್ರ ನೋಡಿ ಅದನ್ನು ಓದಿಕೊಂಡು ಬೇರೆ ದಾರಿ ಕಾಣದೆಯೇ ನನ್ನನ್ನೇ ನಾನು ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ.

***
end- elloo ನಡೆದದ್ದು ಅಲ್ಲ imagination thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...

No comments:

Post a Comment