Friday, 30 March 2018

ANAHUTA ಅನಾಹುತ 🤔😀

 

Imaginative story

ನಮ್ಮ ಮದುವೆಯಾಗಿ ಸುಮಾರು ಮೂರು ವರುಷಗಳು ಕಳೆದಿರಬಹುದು. ನಾವಾಗ ಮುಂಬಯಿಯ ನಗರದಲ್ಲಿ ಕೆಲಸದ ಕಾರಣದಿಂದ ವಾಸಿಸುತ್ತಿದ್ದೆವು. ನನ್ನ ಅತ್ತೆಯ ಸಂಬಂಧಿಕೊರೊಬ್ಬರ ಮಗಳನ್ನು ಮುಂಬಯಿಯಲ್ಲಿರುವ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದರು. ಮದುವೆ ಮೈಸೂರಿನಲ್ಲಿ ನಡೆಯಿತಾದ ಕಾರಣ ಹುಡುಗನ ಕಡೆಯವರು ಮುಂಬಯಿಯಲ್ಲಿರುವ ಸ್ನೇಹಿತರಿಗೋಸ್ಕರ ಒಂದು ಪುಟ್ಟ ಸಮಾರಂಭವನ್ನು (reception) ಒಂದು ಭಾನುವಾರ ಸಂಜೆ 6 ಕ್ಕೆ churchgate ಸ್ಟೇಷನ್ ಹತ್ತಿರದ ಸಭಾಂಗಣದಲ್ಲಿ ಇಟ್ಟುಕೊಡಿದ್ದರು. ನಮ್ಮ ವಾಸವೂ ಮುಂಬೈಯಿಯಾಗಿದ್ದರಿಂದ ನಮಗೂ ಆಮಂತ್ರಣ ಬಂದಿತ್ತು.

ಹೇಗೂ ಆಮಂತ್ರಣ ಬಂದಿದೆ. ಮುಂಬೈನಲ್ಲಿರುವ ನಮ್ಮ ಸಂಬಂಧಿಗಳು reception ಗೆ ಬಂದಾಗ ಎಲ್ಲರನ್ನು ಭೇಟಿ ಮಾಡಿದಹಾಗೆ ಆಗುತ್ತದೆಯೆಂದು ನಾವು ಯೋಚಿಸಿ ಒಂದರ್ಧ ಗಂಟೆ ಮುಂಚಿತವಾಗೆ ಆಮಂತ್ರಣದ ಜಾಗವನ್ನು ತಲುಪಿದೆವು. ನನ್ನಾಕೆ ಹೊಸ ರೇಶಿಮೆ ಸೀರೆಯನ್ನು ಉಟ್ಟಿದ್ದಳು. ಮಗನಿಗೆ ಹೊಸದಾದ ಇನ್ನೂ ಉಪಯೋಗಿಸದ ಡ್ರೆಸ್ ಹಾಕಲಾಗಿತ್ತು.

ಈ ಸಂಜೆ ಸಮಾರಂಭ ಸ್ವಲ್ಪ ಬೇರೆಯ ತರಹ ಆಯೋಜಿಸಿದ್ದರು. stage ಇರಲಿಲ್ಲ. ಹುಡುಗ ಹುಡುಗಿಗೆ ಅಂದರೆ ನವ ದಂಪತಿಗಳಿಗೆ ಯಾವ ತರಹದ ಸ್ಪೆಷಲ್ ಕುರ್ಚಿ ಇರಲಿಲ್ಲ. ಎಲ್ಲ ಕಡೆ ಸಾಕಷ್ಟು table ಮತ್ತು ಕುರ್ಚಿಗಳನ್ನು ಹಾಕಿದ್ದರು. ನವ ದಂಪತಿಗಳೇ ಎಲ್ಲ ಕಡೆ ಓಡಾಡುತ್ತಾ ಎಲ್ಲಾರನ್ನು ಮಾತಾಡಿಸುದುವುದೆಂದಿತ್ತು. 

ತನ್ನ ಸಂಬಂಧಿಕರೆಲ್ಲರನ್ನು ಮಾತನಾಡಿಸಲು ನನ್ನಾಕೆ ನಮ್ಮ ಮಗನನ್ನು ನನ್ನ ಹತ್ತಿರ ಕೊಟ್ಟು ಎಲ್ಲರ ಹತ್ತಿರ ಹೋಗಿ ಮಾತನಾಡಿಸುತ್ತಿದ್ದಳು. ಮದುವೆಯಾದ ಹುಡುಗ ಆಗಲೇ ready ಆಗಿ ಸಂಜೆ ೬ ಗಂಟೆಯ ಹೊತ್ತಿಗೆ ಸಭಾಂಗಣದಲ್ಲಿ ಹಾಜರಿದ್ದ ಮತ್ತು ಬಂದವರನೆಲ್ಲ ಹಾಗೂ ಬರುತ್ತಿರುವವರನ್ನೆಲ್ಲ ಮಾತನಾಡಿಸಲು ಪ್ರಾರಂಭಿಸಿದ್ದನು. ಮದುಮಗಳು ಎಲ್ಲಾ ವಿಷಯಗಳಲ್ಲಿ ತುಂಬಾ ನಿಧಾನಿ. ಇನ್ನೂ ಡ್ರೆಸ್ ಮಾಡಿ ತಯಾರಿಗಿರಲಿಲ್ಲ, ಹಾಗಾಗಿ ಸಭಾಂಗಣಕ್ಕೆ ಬಂದಿರಲಿಲ್ಲ. ನಮಗೆ ಹುಡುಗ ಮತ್ತು ಅವನ ಕಡೆಯವರು ಹೊಸಬರು. ಹಾಗಾಗಿ ಒಂದು ಸಮಯದಲ್ಲಿ ಹುಡುಗ ನನ್ನಾಕೆಯ ಹತ್ತಿರ ಬಂದಂತೆ ಇವಳು ತನ್ನ ಪರಿಚಯ ಮಾಡಿಕೊಂಡು ನನ್ನನ್ನೂ ಕರೆದು ನನ್ನ  ಪರಿಚಯವನ್ನು ಸಹ ಮಾಡಿಸಿದಳು. ಆ ಸಮಯದಲ್ಲಿ ನಮ್ಮ ಮಗ ತುಂಬಾ ಹಠ ಮಾಡಿದ್ದರಿಂದ ಅವನನ್ನು ಕರೆದುಕೊಂಡು ನಾನು ಅಲ್ಲಿಂದ ಸಭಾಂಗಣದ ಬೇರೆಡೆ ಕೊಂಡೊಯ್ದೆ. ನನ್ನಾಕೆ ಮತ್ತು ಮದುಮಗ ಹಾಗೆಯೇ ಮಾತು ಮುಂದುವರೆಸಿದ್ದರು. ನನ್ನವಳು ರೇಶಿಮೆ ಸೀರೆಯನ್ನು ಗುಜರಾತಿ ಮಾದರಿಯಲ್ಲಿ ಉಟ್ಟಿದ್ದು ಎಲ್ಲರ ಕೇಂದ್ರ ಬಿಂದುವಾಗಿದ್ದಳು.  ಆ ಸಮಯಕ್ಕೆ ಒಳಗೆ ಬಂದಂತಹ ಅತಿಥಿ ದಂಪತಿಗಳು ಕೈಯಲ್ಲಿ ಎರಡು ಪುಷ್ಪಗುಚ್ಚ ಗಳನ್ನು ಹಿಡಿದು ಹುಡುಗನ ಕಡೆಗೆ ಹೋಗುತ್ತಿದ್ದರು. 

ಅದೃಷ್ಟವಶಾತ್ ನಾನವರನ್ನು ನೋಡಿದೆ. ಅವರಾಗಲೇ ಹುಡುಗನ ಹತ್ತಿರ ಬಂದಿದ್ದರು. ಅನಾಹುತಕ್ಕೆ ಎಡೆ ಮಾಡಿಕೊಡಬಾರದೆಂದು ಕೂಡಲೇ ಮಗನನ್ನು ಕೆಳಕ್ಕೆ ಇಳಿಸಿ ಅಮ್ಮನ ಹತ್ತಿರ ಹೋಗು ಎನ್ನಲು ಮಗು ಸ್ವಲ್ಪ ದೂರ ಓಡಿ ಇನ್ನೂ ಎರಡು ವರ್ಷದವನಾಗಿದ್ದರಿಂದ ಸರಿಯಾಗಿ  ಓಡಲಾಗದೆಯೇ  ಬಿದ್ದುಬಿಟ್ಟನು. 

ಆ ಅತಿಥಿ ದಂಪತಿಗಳು ಹುಡುಗನ ಕೈ ಕುಲುಕಿ ಪುಷ್ಪಗುಚ್ಛವನ್ನು ಕೊಟ್ಟು ಇನ್ನೇನು ನನ್ನಾಕೆಯ ಕೈಗೆ ಇನ್ನೊಂದು ಪುಷ್ಪಗುಚ್ಛವನ್ನು ಕೊಡಬೇಕು ಅಷ್ಟರಲ್ಲಿ ನನ್ನ ಮಗ ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿದ್ದ. ಮಮ್ಮಿ ಮಮ್ಮಿ ಎಂದು ಕಿರುಚಿದಾಗ ಎಲ್ಲರ ಗಮನ ಮಗುವಿನ ಕಡೆಗೆ ತಿರುಗಿತು. ಆ ಅತಿಥಿ ದಂಪತಿಗಳ ಗಮನ ಕೂಡ ಮಗುವಿನ ಕಡೆಗೆ ತಕ್ಷಣ ಸೆಳೆಯಿತು. ಇವಳೂ  ಮಗನನ್ನು ನೋಡಿ,  ಓಡಿ ಬಂದು ಕೂಡಲೇ ಎತ್ತಿಕೊಂಡು ಸಮಾಧಾನ ಮಾಡಲು ಪ್ರಾಂಭಿಸಿದಳು. ಈ ದೃಶ್ಯವನ್ನು ಆ ಅತಿಥಿ ದಂಪತಿಗಳು ಗರಬಡಿದವರಂತೆ ನೋಡಿದರು. ನಂಬಲಿಕ್ಕೇ  ಆಗದಂತೆ ಒಂದು ಕ್ಷಣ ಅವರಿಗೇನೂ ಅರ್ಥವಾಗದಂತೆ ಹಾಗೆಯೇ ಸ್ತಬ್ಧರಾಗಿ ನಿಂತುಬಿಟ್ಟಿದ್ದರು. 

ನಾನೂ ಕೂಡ ಮಗನ ಹತ್ತಿರ ಬಂದು ನನ್ನ ಸ್ಥಾನ ಗೊತ್ತಾಗಲೆಂದು  ಕರವಸ್ತ್ರ ಇದ್ದರೂ ಇವಳ ಸೀರೆಯ ಸೇರಗಿನಿಂದ ಮಗುವಿನ ಕಣ್ಣನ್ನು ಒರೆಸಲು ಪ್ರಾರಂಭಿಸಿದೆ. ಅಂತೂ ಆ ಅತಿಥಿಗಳಿಗೆ ಸಂದೇಶ ರವಾನೆಯಾಗಿತ್ತು.  ಇವಳು ಮಗುವನ್ನು ಸಂತೈಸುತ್ತಿರುವಾಗಲೇ ಮದುಮಗಳು ಸಭಾಂಗಣಕ್ಕೆ ಬಂದು ಮದುಮಗನ ಜೊತೆಗೆ ನಿಂತು ಆ ಅತಿಥಿಗಳಿಗೆ ಕೈ ಮುಗಿಯಿತ್ತುರುವುದನ್ನು ನಾನು ಗಮನಿಸಿದೆ. ಅನಾಹುತ ಅಂತೂ ತಪ್ಪಿತ್ತು. ನನಗೆ ನೆಮ್ಮದಿಯ ನಿಟ್ಟುಸಿರು. 

ಇದುವರೆವಿಗೂ ನನ್ನವಳ ಸೌಂದರ್ಯದಲ್ಲಿ ಅಷ್ಟೇನು ಮಹತ್ವ ಕೊಡದ ನಾನು ಅದರ ಮಹಿಮೆಯನ್ನು ನಿಜವಾಗಿಯೂ ಅರಿತುಕೊಳ್ಳಲು ಈ ಸನ್ನಿವೇಶ ಸಹಾಯ ಮಾಡಿತು.

***

end- elloo ನಡೆದದ್ದು ಅಲ್ಲ imagination thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...

No comments:

Post a Comment