Yesterday, a poignant (ಹೃದಯಸ್ಪರ್ಶಿ) notification at the revered Varadaraja Temple stirred something deep within me. Moved by the message, I felt compelled to share my thoughts and reflections, leading to this heartfelt write-up.
ವೃದ್ಧನ ಮನಸ್ಸು
ಎಲ್ಲ ಸಮಕಾಲೀನರು ವೃದ್ಧರಾಗಿದ್ದಾರೆ
ನಿತ್ಯ ಯೋಚನಾಮಗ್ನರಾಗಿದ್ದಾರೆ.
ಕೆಲವರಿಗೆ ಬೊಜ್ಜು ಬಂದಿದೆ
ಇನ್ಯಾರಿಗೋ ತಲೆ ಬೋಳಾಗಿದೆ.
ಯಾರಿಗೂ ಜವಾಬ್ದಾರಿ ಇಲ್ಲ
ಆದರೂ ಯೋಚನೆಗಳು ಇದೆಯಲ್ಲ!
ಯೌವ್ವನದಲ್ಲಿ ಓಡುತ್ತಾ ಕಚೇರಿ ತಲುಪುವುದೇ ಪ್ರಾಮುಖ್ಯ
ಮನೆಯೊಡತಿ ಮತ್ತು ಮಕ್ಕಳ ಏಳಿಗೆ ಅತಿಮುಖ್ಯ.
ತಾರುಣ್ಯದಲ್ಲಿತ್ತು ಸಮಯದ ಅಭಾವ
ಈಗ ಸಮಯವೇ ಸಮಯ.
ಯೌವ್ವನದಲ್ಲಿ ತಂದೆ ತಾಯಿಯರ ಬಗ್ಗೆ ನಿರ್ಲಕ್ಷ್ಯ
ಏಕೋ ಅದು ಕಾಡುವುದು ಈಗ ದಿನನಿತ್ಯ.
ಹಾಯ್! ಜೀವನ ಕೆಲವೊಮ್ಮೆ ಸಾಕೆನಿಸುತ್ತಿದೆ
ಆದರೂ ಜೀವ ಹೋಗುವ ಬಗ್ಗೆ ವಿಚಾರ ಬೇಡವೆನಿಸುತ್ತಿದೆ.
ಎಲ್ಲರಿಗೂ ವಯಸ್ಸಾಗಿದೆ
ಆದರೂ ಮನಸ್ಸು ಪಕ್ವವಾಗಿದೆ.
ಮಿತಿಗೆ ತಕ್ಕಂತೆ ಸಾಧಿಸಿದ್ದೀರಿ
ಇನ್ನಾದರೂ ನೆಮ್ಮದಿಯ ಬಾಳಿನ ಬೆಳಕನ್ನು ಕಾಣಿರಿ.
ಮರಣ ಎಲ್ಲರಿಗೂ ಇರುವುದೇ
ಸಂತಸದ ಬಾಳು ನಿಮ್ಮ ಕೈಯಲ್ಲಿದೆ.
ಬದುಕು ನಿರಾಳವಾಗಿರಲಿ
ದ್ವೇಷ ಅಸೂಯೆಯಿಂದ ದೂರವಾಗಿರಲಿ.
ನೋವಿರಲಿ ನಲಿವಿರಲಿ
ಸ್ನೇಹಿತರಲ್ಲಿ ವಿಶ್ವಾಸವಿರಲಿ.
ಸ್ನೇಹಿತರಲ್ಲಿ ಸಂತೋಷ ಹಂಚಿಕೊಳ್ಳಿ
ಅವರ ಸಂತಸದಲ್ಲಿ ಭಾಗಿಯಾಗುವ ಮನಸ್ಸು ಬೆಳಸಿಕೊಳ್ಳಿ.
ಮನದ ಅಳಲು ಎಲ್ಲಿ ತೋಡಿಕೊಳ್ಳುವಿರಿ?
ಹಾ! ಸ್ನೇಹಿತರಲ್ಲಿ ಮನಬಿಚ್ಚಿ ಹೇಳಿಕೊಳ್ಳಿರಿ.
Feb 1, 2025
***
No comments:
Post a Comment