ಕೋಪದ ಸರಸ ಸಲ್ಲಾಪ! ಸತ್ಯ ಯಾವಾಗಲೂ ಕಹಿ
ನಾನು VRS ತೆಗೆದುಕೊಂಡ ದಿನದಿಂದ ಮನೆಯಲ್ಲಿ ನಾವಿಬ್ಬರು ಒಬ್ಬರಿಗೊಬ್ಬರು ಸುಳ್ಳು ಹೇಳೋದು ನಿಂತಿದೆ. ಆದರೂ ಕೆಳಗಿನ ತರಹದ ಘಟನೆ ಕೆಲವೊಮ್ಮೆ ನಡೆಯುತ್ತೆ. ಬೆಂಗಳೂರಿನಲ್ಲಿ ಹತ್ತಿರ ಸಂಬಂಧಿಯ ಎರಡು ದಿನದ ಮದುವೆ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಮರಳಿ ಬಂದು RSS ಕಾರ್ಯಾಲಯಕ್ಕೆ ಸಂಜೆ ಎಂದಿನಂತೆ ಹೋದಾಗ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ನನಗೆ ಕಾರ್ಯಕ್ರಮದ ಬಗ್ಗೆ ಒಂದು ವಾರದ ಹಿಂದೆ WhatsApp ನಲ್ಲಿ ಬಂದಿತ್ತಾದರೂ ಅಂದು ನೆನಪಿರಲಿಲ್ಲ.
ಮುಂದೆ...
ಅವಳು: "ರೀ ಯಾಕ್ರೀ ಇಷ್ಟು ಲೇಟು? ಆಗಲೇ ರಾತ್ರಿ ಒಂಬತ್ತೂವರೆ"
ನಾನು: 'ಮಾಧವ ಕೃಪಾದ (RSS ನ ಕಾರ್ಯಾಲಯ) ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೆ'
ಅವಳು: "ಫೋನ್ ಮಾಡೋಕ್ಕೆ ಸಮಯ ಸಿಕ್ಕಲಿಲ್ವ?"
ನಾನು: 'ನಾನು ಫೋನ್ ಮಾಡೋಣ ಅಂತ ಅಂದುಕೊಂಡಿದ್ದೆ. ಆದರೆ ನೀನು ಸಂಜೆ ದೇವರನಾಮ ಕ್ಲಾಸ್ ನಲ್ಲಿ ಇರ್ತೀಯ ಅಂತ ಮಾಡಲಿಲ್ಲ'
ಅವಳು: "ಆಯ್ತು, ನಾನು ಮಾಡಿದ ಫೋನ್ ಯಾಕೆ ಎತ್ತಲಿಲ್ಲ"
ನಾನು: 'ಯಾರೋ ಬಂದಿದ್ದರು'
ಅವಳು: "ಸುಳ್ಳು ಬೇಡ"
ನಾನು: 'ಇಲ್ಲ ಹುಬ್ಬಳ್ಳಿಯಿಂದ ಬಂದಂತಹ ಸು.ರಾಮಣ್ಣ ಅವರ ಭಾಷಣ ಇತ್ತು'
ಅವಳು: "ಮತ್ತೆ ಇನ್ನೊಂದು ಸುಳ್ಳು"
ನಾನು: 'ಇಲ್ಲ ನಿಜವಾಗಿಯೂ ರಾಮಣ್ಣ ಅವರ ಭಾಷಣ ಇತ್ತು. ಮತ್ತೆ ನಿನಗೆ ಗೊತ್ತಿರಬೇಕಲ್ಲ, RSS ನಲ್ಲಿ ನಿಯಮ ಪಾಲನೆ ಕಡ್ಡಾಯ. ಕಾರ್ಯಕ್ರಮ ಇದ್ದಾಗ ಫೋನ್ ಸೈಲೆಂಟ್ ಮೊಡ್ ನಲ್ಲಿ ಇಡಬೇಕಲ್ಲ'
ಅವಳು: "ಆಗಲಿ ಮೆಸೇಜ್ ಯಾಕೆ ಕಳಿಸಲಿಲ್ಲ"
ನಾನು: 'ನೆನಪಾಗಲಿಲ್ಲ'
ಅವಳು: "ಮತ್ತೆ ಸುಳ್ಳು ಬೇಡ"
ನಾನು: 'sorry'
ಅವಳು: "ನಿಮಗೋಸ್ಕರ ನನಗೆ ಹಸಿವಾದ್ರೂ ಊಟ ಮಾಡಲಿಲ್ಲ"
ನಾನು: 'ನಿನಗೆ ಎಷ್ಟು ವರ್ಷ ಆಯ್ತು ಹೇಳಿ, ನಿನಗೆ ಹಸಿವಾದಾಗ ಊಟ ಮಾಡು ಅಂತ, ನನಗೆ ಕಾಯೋದು ಬೇಡ'
ಅವಳು: "ಅದ್ಹೇಗೆ ಆಗುತ್ತೆ?"
ನಾನು: 'ಆಯ್ತು, ಈಗ ಊಟಕ್ಕೆ ಕುಳಿತುಕೊಳ್ಳೋಣ'
ಅವಳು: "ನನಗೆ ಹಸಿವಿಲ್ಲ, ನೀವು ಮಾಡಿ"
ನಾನು: 'please ಬಾ' (ಮನಸ್ಸಿನಲ್ಲಿ ಅಯ್ಯೋ... ಮುಂದುವರೆಸಿದರೆ ಜಗಳ, ರಾದ್ಧಾಂತ ಆಗುತ್ತೆ ಅಂತ..)
ಸಾಕಲ್ಲವೇ. ರೈಲು ಬಿಡ್ತಾ ಇಲ್ಲ ಅಥವಾ ರೀಲು ಅಲ್ಲ. ಒಂದು recollection. ನಿಮ್ಮ ಮನೆಯಲ್ಲಿ ಏನು ನಡೆಯುತ್ತೋ? ನಮ್ಮನೆ ಹಾಗೆ ಕೂಡ ಇರಬಹುದೇ?
No comments:
Post a Comment