Saturday, 12 October 2024

FRIENDS OF SENIOR GROUP ಹಿರಿಯರ ಗುಂಪಿನ ಸ್ನೇಹಿತರು 🤔😀



members in WhatsApp 'Senior Group'

ಸ್ನೇಹದ ಕಡಲಲ್ಲಿ  ನಿಂತಿರುವ ಈ ಹಿರಿಯರ ಗುಂಪಿನ  ನೆನಪಿನ ದೋಣಿಯಲ್ಲಿ ಕುಳಿತು ಪಯಣಿಸುವ ಪಯಣಿಗರ ಅಗಾಧ ಪ್ರತಿಭೆಗೆ ಎಣೆಯಿಲ್ಲ. ಅವರೆಲ್ಲರಿಗೆ ಇಂದಿನ  ಅಂದರೆ ಶರತ್  ಋತುವಿನ  ವಿಜಯದಶಮಿಯ ಶುಭಾಶಯಗಳು.


ದೋಣಿಯಲ್ಲಿ ತುಂಬಿದೆ....


ಬಾಲ ಗೋಪಾಲನ ಲೀಲೆ;


ಚಂದ್ರನಿಂದ ಉದುರುವ ಸಿಹಿಮುತ್ತಿನ ಸಾಹಿತ್ಯ- ರತ್ನ ವಜ್ರ ವೈಢೂರ್ಯ ಸಹಿತ;


ರಾಮಶೇಷರ ಚೊಕ್ಕ, ಚಿಕ್ಕ ಮತ್ತು ನೀಳ್ಗತೆ-ಪತ್ತೇದಾರಿ ಕಾಫಿ ಪರಿಮಳದೊಂದಿಗೆ;


ಲಕ್ಷ್ಮಣರ ಅನುಭವ;


ಬೆಟ್ಟದಷ್ಟು

ನಾ ವ್ ಕೇಳುವಷ್ಟು

ಯರಾಮರ ಮಧುರ ಕವನ;


ರದಿಂದ-ರಂಜಿಸಿ

ರಾರಾಜಿಸುವ 

ವಿಜಯರ  ತ್ರಿ/ಚೌ/ಷಟ್ಪದಿ;


ವಿಶ್ವವನ್ನೇ ನಗಿಸುವ ವಿಶ್ವನಾಥರ ಹಾಸ್ಯ, ವಿಡಂಬನೆಗೊಳಗೊಂಡ ವ್ಯಂಗ್ಯ ಚಿತ್ರ;


ಆದರೂ....


ಹೆಚ್ಚು ತಿಳಿಯಬೇಕಿದೆ..


ಇಂದಿರೆಯ ಅನುಭವದ ಚಿಗುರೆಲೆ;


ಶೀಲೆಯ ಚಿತ್ತಾರ;



ವೆಂಕಟ ತ್ರಯರು,

ಕೃಷ್ಣ ದ್ವಯರು,

ಗೋಪಾಲ ದ್ವಯರು,

ನಾಗ ದ್ವಯರು,

ರಾಜ ದ್ವಯರು,

ಭೀಮರ 

ಮತ್ತು..

ಇನ್ನೂ ಅನೇಕರಿಂದ...

ಮೊಳಗಲಿದೆ

ಝೇಂಕಾರ...


ಎಲ್ಲದಕ್ಕೂ....


ಈ ಅನೇಕರಿಂದ

ದಶಮಿಯ 

ಅರುಣೋದಯ ನಂತರ

ರಾಮ ಲಕ್ಷ್ಮಣರ 

ಲಂಕಾ ವಿಜಯ ಕಂಡಂತೆ...


ಆಶಾಕಿರಣಗಳೊಂದಿಗೆ ಕಾಯೋಣ.

ರಾಮ ಜಯ ರಾಮ ಜಯ ಶ್ರೀ ರಾಮ ಜಯರಾಮ.

***
end- thoughts documented ಸಂಟೈಂ ಇನ್ October 2024 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...


No comments:

Post a Comment