30 Dec 2002 - Imaginative write-up - Time 1970s
ನಾನು ಪದವಿಪೂರ್ವ ಕಾಲೇಜು (PUC) ಸೇರುವವರೆಗೂ ಯಾವುದೇ ಪತ್ರವನ್ನು ಬರೆಯುವ ಪ್ರಮೇಯವೇ ಬಂದಿರಲಿಲ್ಲ. ನಮ್ಮ ಶಾಲೆಯು ಮನೆಯ ಸಮೀಪವೇ ಇತ್ತು. ಅಕ್ಕ, ಅಣ್ಣ, ಅತ್ತಿಗೆ ಸೇರಿದಂತೆ ನಾವೆಲ್ಲರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದೆವು. ನನ್ನ ರಜಾ ಅರ್ಜಿಗಳೂ ಸೇರಿದಂತೆ, ಎಲ್ಲ ಪತ್ರಗಳನ್ನು ನನ್ನ ತಂದೆ ಅಥವಾ ದೊಡ್ಡ ಅಣ್ಣನವರೇ ಬರೆಯುತ್ತಿದ್ದರು.
ವಿಜ್ಞಾನ ವಿಭಾಗವನ್ನು ಆಯ್ದು ಪಿ.ಯು.ಸಿ. ಸೇರಿದಾಗ, ಇಂಗ್ಲಿಷ್ ಉಪನ್ಯಾಸಕ್ಕೆ ಕಲೆ (Arts) ಮತ್ತು ವಾಣಿಜ್ಯ (Commerce) ವಿಭಾಗದ ವಿದ್ಯಾರ್ಥಿಗಳೂ ಬರುತ್ತಿದ್ದರು. ಆಗಾಗ ಚಿಕ್ಕಪುಟ್ಟ ಕವಿತೆಗಳನ್ನು ಬರೆಯುತ್ತಿದ್ದ ನನಗೆ, ನನ್ನ ಕವನಗಳಲ್ಲಿ ಸೃಷ್ಟಿಸಿದ್ದ 'ಸೌಂದರ್ಯ' ನಿಜರೂಪದಲ್ಲಿ ಕಲಾ ವಿಭಾಗದ ಒಬ್ಬ ಹುಡುಗಿಯಲ್ಲಿ ಕಂಡಾಗ, ಅವಳ ಮೋಡಿಗೆ ನಿಜವಾಗಿಯೂ ಮನಸೋತೆನು. ಅವಳ ಗೆಳೆತನವನ್ನು ಗಿಟ್ಟಿಸಲು ಏನೆಲ್ಲಾ ಉಪಾಯ ಮಾಡಬಹುದೆಂದು ಸ್ನೇಹಿತರೊಂದಿಗೆ ಚರ್ಚಿಸಿದೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ಅವಳಿಗಾಗಿ ಒಂದು ಪತ್ರವನ್ನು ಬರೆದೆ. ಹೇಗಾದರೂ ಮಾಡಿ ನನ್ನಲ್ಲಿರುವ ಕವನ ಬರೆಯುವ ಸಾಮರ್ಥ್ಯವನ್ನು ಅವಳಿಗೆ ತಿಳಿಸಿ, ಪತ್ರದ ಮುಖಾಂತರ ಅವಳ ಗೆಳೆತನಕ್ಕೆ ಹಂಬಲಿಸಿದೆ. ಹಾಗಾಗಿ, ನನ್ನ ಪ್ರಪ್ರಥಮ ಪತ್ರವು ಪ್ರೇಮಪತ್ರದ ರೂಪ ತಾಳಿತ್ತು.
ಆದರೆ, ಈ ಪತ್ರವನ್ನು ಅವಳಿಗೆ ಹೇಗೆ ತಲುಪಿಸಬೇಕೆಂದು ರಾತ್ರಿಯೆಲ್ಲಾ ಯೋಚಿಸಿದೆ. ಮೊದಲು, ಪತ್ರವನ್ನು ಅಂಚೆಯಲ್ಲಿ ಅವಳ ಮನೆಯ ವಿಳಾಸಕ್ಕೆ ಕಳುಹಿಸಿದರೆ ಹೇಗೆ?
ಒಂದು ವೇಳೆ, ನನ್ನ ಕಾಗದ ಅಕಸ್ಮಾತ್ ಸೌಂದರ್ಯಳ ತಂದೆಗೆ ಸಿಕ್ಕಿದ್ದರೆ, ಅವರು ತಕ್ಷಣ ಕಾಲೇಜಿಗೆ ಬಂದು ನನ್ನನ್ನು ಹೊರಹಾಕುವವರೆಗೂ ಬಿಡುತ್ತಿರಲಿಲ್ಲವೇನೋ. ಒಂದು ವೇಳೆ ಅವಳ ತಾಯಿಗೆ ಸಿಕ್ಕಿದ್ದರೆ, ಮೊದಲ ದಿನ ಮಗಳನ್ನು ಬೈದರೂ, ಮಾರನೆಯ ದಿನ ನನ್ನ ಜಾತಿ, ಮನೆತನ ಮತ್ತು ಬುದ್ಧಿವಂತಿಕೆಯ ಬಗ್ಗೆ ವಿವರವಾಗಿ ವಿಚಾರಿಸಿ, ರಿಶ್ತಾ (ಸಂಬಂಧ) ಆಗಲೇ ಪಕ್ಕಾ ಮಾಡಲು ಯೋಚಿಸುತ್ತಿದ್ದರೇನೋ. ಮತ್ತೊಂದು ಅಪಾಯ: ಆಕಸ್ಮಿಕವಾಗಿ ಅವಳ ಅಣ್ಣನಿಗೆ ಆ ಪತ್ರ ಸಿಕ್ಕಿದ್ದರೆ, ಅವನು ತನ್ನ ಗ್ಯಾಂಗ್ ಮುಖಾಂತರ ನನಗೆ 'ಬ್ಯಾಂಗ್' ಮಾಡಿ, ನಾನು ಕಟ್ಟು ಹಾಕಿಸಿಕೊಂಡು (bandage) ಬರುವುದನ್ನು ನೋಡದ ಹೊರತು ಮನೆಗೆ ವಾಪಸಾಗುತ್ತಿರಲಿಲ್ಲವೇನೋ.
"ಒಂದು ಪ್ರೇಮಪತ್ರ ಬರೆದಾಗ ಇಷ್ಟೆಲ್ಲಾ ಮುಂದಾಲೋಚನೆ ಮಾಡಬೇಕೆ?" ಎಂದು ನೀವಾಗಲೇ ಯೋಚಿಸುತ್ತಿರಬಹುದು. ನಾನು ಊಹಿಸಿರುವುದರಲ್ಲಿ ನಿಜಾಂಶಗಳು ಇವೆ ಎನ್ನುವುದರಲ್ಲಿ ಯಾವುದೇ ಸಂದೇಹವೂ ಇಲ್ಲವೆಂದು ನನಗನ್ನಿಸುತ್ತದೆ.
ಪತ್ರವಂತೂ ಬರೆಯಲಾಗಿತ್ತು. ಈ ಪ್ರೇಮಪತ್ರವನ್ನು ನನ್ನ ಸೌಂದರ್ಯಳಿಗೆ ಹೇಗೆ ತಲುಪಿಸಬಹುದೆಂದು ಸುದೀರ್ಘವಾಗಿ ಆಲೋಚಿಸತೊಡಗಿದೆ. ಸ್ನೇಹಿತರ ಮುಖಾಂತರ, ಕಾಲೇಜಿನ ಜವಾನನ ಮುಖಾಂತರ, ಅವಳು ಬಳೆ ಕೊಳ್ಳುವ ಅಂಗಡಿಯವನ ಮುಖಾಂತರ, ಅವಳ ಚಿಕ್ಕ ತಮ್ಮನ ಮುಖಾಂತರ, ಪಾರಿವಾಳದ ಮುಖಾಂತರ—ಏನೆಲ್ಲಾ ಮನದಲ್ಲಿ ಹಾದುಹೋದರೂ ಯಾವುದೇ ಸಂಚಾರ ಮಾರ್ಗದಲ್ಲಿ (channel) ಸರಿಯಾದ ಪರಿಹಾರ ಕಾಣಿಸಲಿಲ್ಲ.
ಕೊನೆಗೂ ಆ ಪತ್ರವನ್ನು ನಾನೇ ಖುದ್ದಾಗಿ ಕಾಲೇಜಿನಲ್ಲಿ ತಲುಪಿಸಲು ನಿರ್ಧರಿಸಿದೆ. ಆ ದಿನ ಕೊನೆಯ ಉಪನ್ಯಾಸಕ್ಕೆ ಚಕ್ಕರ್ ಹಾಕಿ, ನನ್ನ ಸೌಂದರ್ಯ ಅವಳ ತರಗತಿಯಿಂದ ಹೊರಗೆ ಬರುವುದನ್ನೇ ಕಾಯ್ದು, ಧೈರ್ಯಮಾಡಿ ಅವಳ ಬಳಿ ಹೋಗಿ ನನ್ನನ್ನು ಪರಿಚಯಿಸಿಕೊಂಡು, "ನಾನೊಂದು ಕನ್ನಡದಲ್ಲಿ ಕವನ ಬರೆದಿದ್ದೇನೆ – ದಯವಿಟ್ಟು ಇದನ್ನು ಓದಿ ನಿಮ್ಮ ವಿಮರ್ಶೆ ತಿಳಿಸಿ" ಎಂದು ಕಾಗದವನ್ನು ನೀಡಲು ಮುಂದಾದೆ. ಅದಕ್ಕವಳು ಇಂಗ್ಲಿಷ್‌ನಲ್ಲಿ "Sorry, I can't read Kannada" ಎಂದಾಗ ನನ್ನ ಮುಖ ಪೆಚ್ಚಾಯಿತು. ಆ ಕ್ಷಣ ನನ್ನ ಮನದಲ್ಲಿ ಮೂಡಿದ್ದು ಹೀಗೆ:
"ಇದನ್ನು ನಾನು ಮೊದಲೇ ಯಾಕೆ ಗ್ರಹಿಸಲಿಲ್ಲ? ನೋಡಲಿಕ್ಕೆ ಕನ್ನಡದವಳ ಹಾಗೆಯೇ ಇದ್ದಾಳೆ, ಒಳ್ಳೆಯ ಮನೆತನದ ಹುಡುಗಿಯಂತೆ ಕಾಣುತ್ತಾಳೆ. ಅವಳು ಕನ್ನಡದಲ್ಲಿ ಮಾತನಾಡಿದ್ದನ್ನು ನಾನು ಕಿವಿಯಾರೆ ಕೇಳಿದ್ದೇನೆ. ಅವಳೇಕೆ ಹೀಗೆ ಹೇಳಿದಳು? ಬಹುಶಃ ನಿಜವಾಗಿಯೂ ಅವಳು ಕಾನ್ವೆಂಟ್ ಶಾಲೆಯಲ್ಲಿ ಕಲಿತು ಎರಡನೆಯ ಭಾಷೆ ಕನ್ನಡದ ಬದಲಿಗೆ ಸಂಸ್ಕೃತ ತೆಗೆದುಕೊಂಡಿರಬಹುದು; ಆಗ ಮೂರನೆಯ ಭಾಷೆಯಾಗಿ ೫೦ ಅಂಕಗಳಿಗೆ ಕನ್ನಡದ ಬದಲು ಹಿಂದಿ ವಿಷಯ ತೆಗೆದುಕೊಂಡಿದ್ದಾಳೋ ಏನೋ, ಆಗ ಕನ್ನಡ ಓದಲು ಬರದಿರಬಹುದು. ಅಯ್ಯೋ, ನಾವು ಎರಡನೆಯ ಭಾಷೆಯಾಗಿ ಕನ್ನಡ, ಮೂರನೆಯ ಭಾಷೆಯಾಗಿ ಹಿಂದಿಯನ್ನು ೫೦ ಅಂಕಗಳಿಗೆ ಓದಿದ ಹಾಗೆ ಅವಳೇಕೆ ಮಾಡಲಿಲ್ಲ? ಅಥವಾ ಒಂದು ವೇಳೆ ಕನ್ನಡ ಓದಿದ್ದರೂ, ನಾನು ಕವನ ಎಂದಾಕ್ಷಣ ವಿಮರ್ಶೆಗೆ ಕಷ್ಟವಾಗಬಹುದೆಂದು ಓದಲು ಹಿಂದೇಟು ಹಾಕಿರಬಹುದೇ? ಹೇ ರಾಮ ರಾಮ, ಎಂಥಹ ಕೆಲಸ ಮಾಡಿಬಿಟ್ಟೆ! ನನ್ನ ಕನ್ನಡದ ಪ್ರೇಮಪತ್ರವನ್ನು ಏಕೆ ಮೊದಲೇ ಇಂಗ್ಲಿಷಿನಲ್ಲಿ ಭಾಷಾಂತರಿಸಿ ಒಂದು ಪ್ರತಿಯನ್ನು ಇಟ್ಟುಕೊಳ್ಳಲಿಲ್ಲ?" ಹೀಗೆ ನನ್ನನ್ನು ನಾನೇ ಶಪಿಸಿಕೊಂಡೆನು.
ಸೌಂದರ್ಯಳಿಗೆ "It's Okay, no problem" ಎಂದು ಹೇಳಿ, ಕವನವನ್ನು ವಾಪಸ್ಸು ನನ್ನ ಜೇಬಿಗೆ ಸೇರಿಸಿದೆ. ಕೆಲವು ದಿನಗಳ ನಂತರ ಸೌಂದರ್ಯ ಅಪ್ಪಟ ಕನ್ನಡದವಳು, ಸಂಪ್ರದಾಯಸ್ಥ ಮನೆಯವಳು ಮತ್ತು ಚೂಟಿ ಹುಡುಗಿ ಎಂದು ಗೊತ್ತಾಯಿತು. ನನ್ನ ಕವನದಲ್ಲಿ ಏನಿರಬಹುದೆಂದು ಮೊದಲೇ ಊಹಿಸಿ ನನಗೆ ಕೈಕೊಟ್ಟಿದ್ದಳು (brush off/slip).
ಈಗ ಆ ನನ್ನ ಪ್ರಪ್ರಥಮ ಪ್ರೇಮಪತ್ರವನ್ನು ಯಾರಿಗೆ ಕೊಡಬಹುದೆಂದು ಯೋಚಿಸಿದೆ. ಒಬ್ಬರಿಗಾಗಿ ಬರೆದ ಪತ್ರ ಇನ್ನೊಬ್ಬರಿಗೆ ಹೇಗೆ ತಾನೆ ಕೊಡಲು ಸಾಧ್ಯ! ಸೌಂದರ್ಯಳ ವೇಷ-ಭೂಷಣ, ಹಾವ-ಭಾವ, ಕಣ್ಣು, ಮೂಗು, ತುಟಿ, ಗಲ್ಲ—ಎಲ್ಲವನ್ನೂ ಎಳೆಎಳೆಯಾಗಿ ನನ್ನ ಪತ್ರದಲ್ಲಿ ವಿವರಿಸಿದ್ದೆ. ಬೇರೆ ಹುಡುಗಿಗೆ ಕೊಡಲು ಹೊರಟರೆ ಇವಳಂತೆಯೇ ಅವಳು ಇರಬೇಕಲ್ಲ! ಅಂಥವರಾರೂ ನನಗೆ ಸಿಕ್ಕಲೇ ಇಲ್ಲ. ಹಾಗಾಗಿ ನನ್ನ ಮೊದಲನೆಯ ಪತ್ರ, ಅರ್ಥಾತ್ ಮೊದಲನೆಯ ಪ್ರೇಮಪತ್ರ, ನನ್ನಲ್ಲೇ ಉಳಿಯಿತು.
ನನ್ನ ಮದುವೆಯ ನಿಶ್ಚಿತಾರ್ಥದ ದಿನದವರೆಗೂ ಆ ಪತ್ರ ಭದ್ರವಾಗಿ ನನ್ನ ಬಳಿಯೇ ಇತ್ತು. ನಂತರದ ಜೀವನದಲ್ಲಿ ಯಾವುದೇ ಅನಗತ್ಯ ಗೊಂದಲಕ್ಕೆ ಎಡೆ ಮಾಡಿಕೊಡಲು ಇಚ್ಚಿಸದೆ ಮತ್ತು ಆ ಪತ್ರವನ್ನು ಹರಿಯಲು ಮನಸ್ಸಾಗದೆ, ಒಂದು ಜಾಣ ನಿರ್ಣಯ ತೆಗೆದುಕೊಂಡೆ: ಆ ಪತ್ರವನ್ನು ನನ್ನ ಭಾವೀ ಪತ್ನಿಯ ಹೆಸರಿಗೆ ಪೋಸ್ಟ್ ಮಾಡಿದೆ. ಕಾಲೇಜಿನಲ್ಲಿ ಬೇರೆ ಯಾವ ಹುಡುಗಿಗಾದರೂ ಕೊಟ್ಟಿದ್ದರೆ ಕವನದಲ್ಲಿ ನಾನು ಕೊಟ್ಟ ಉಪಮೆಗಳು ಸ್ವಲ್ಪವಾದರೂ ಸರಿ ಹೊಂದುತ್ತಿದ್ದವೋ ಏನೋ ಎಂದೆನಿಸಿದರೂ, ಬೇರೆ ದಾರಿ ಕಾಣದೆ ಈ ನಿರ್ಣಯ ಕೈಗೊಂಡೆನು.
***
My First Ever Love Letter - Imaginative write-up
Until I entered Pre-University, I'd never had to write a single letter. My school was right next door, and our large family—my elder sister, brother, and sister-in-law—all lived under one roof. Consequently, all correspondence, even my leave applications, was routinely handled by either my father or my eldest brother.
My decision to pursue the Science stream led me to PUC, where English lectures were attended by students from the Arts and Commerce departments as well. I enjoyed writing short poems, but my casual hobby became serious when the 'beauty' I idealized in my verses materialized in a girl from the Arts section. I was completely smitten. My friends and I plotted ways to win her friendship. Pressured by them, I finally drafted a letter—my very first—hoping to showcase my poetic talent and express my fervent desire to be her friend. This first piece of correspondence was, therefore, a love letter.
The Paranoia of Post
I spent the entire night agonizing over how to deliver the letter. Mailing it to her home address seemed like a terrifying gamble.
If it fell into Sowndarya’s father’s hands, I was sure he'd expel me from college and wouldn't rest until it was done.
If her mother found it, she might scold Sowndarya initially, but would likely switch to inquiring about my family, caste, and academic standing the next day, eager to confirm the rishta (match).
Most terrifyingly, if the letter reached her elder brother, I imagined him gathering his gang to 'bang' me up, ensuring I needed bandages before he returned home.
I’m certain you’re chuckling at the sheer paranoia required for a first love letter, but I firmly believe these grim predictions had a basis in reality.
With the letter written, I began a lengthy contemplation on the best channel to reach my Sowndarya. I considered everyone: friends, the college peon, the bangle seller she frequented, her younger brother, even a pigeon. Despite this exhaustive mental review, no delivery method seemed adequately secure or reliable.
The Fatal Delivery
Ultimately, I decided to deliver the letter myself, in person, at college. I skipped the last lecture, waited for Sowndarya to leave her class, and, mustering every ounce of courage, approached her. I introduced myself and held out the paper, stating, "I’ve written a poem in Kannada—please read it and share your critique."
Her response, delivered in crisp English, was brutal: "Sorry, I can't read Kannada." My heart sank, and my face must have been a picture of confusion. My mind raced: Why didn't I think of this? She looks and sounds like a local Kannada girl from a respectable family. I've heard her speak Kannada! I frantically rationalized: Did she attend a convent school? Did she take Sanskrit instead of Kannada as a second language? Or perhaps Hindi for the 50-mark option? I chastised myself: Why didn't I just take Kannada? And why, oh why, didn't I translate a copy of this crucial love letter into English beforehand? "Oh Rama, Rama, what a blunder!" I internally cried, cursing my own lack of foresight.
I managed a weak "It’s Okay, no problem," to Sowndarya and retreated, pocketing the poem. Days later, I discovered the truth: Sowndarya was indeed a fluent Kannada speaker from a traditional, clever family. She had simply guessed the content of my 'poem' and had politely but firmly brushed me off.
The Final Destination
The problem now was the fate of the letter. How could a missive written explicitly for one woman be passed to another? I had meticulously detailed Sowndarya’s features—her attire, expressions, eyes, nose, lips, and cheeks. To give it to anyone else, they would need to be her identical twin! Since no such girl appeared, my first love letter stayed with me.
I kept the letter safe until the day of my engagement. Then, facing the prospect of future marital complications, yet unable to bring myself to tear it up, I took a clever, final decision: I posted the letter to my fiancée (my future wife). While I had a fleeting thought that the poetic metaphors might have marginally suited some other college girl, I saw no better option than to wisely redirect my youthful blunder to its designated final recipient.
***
end- elloo ನಡೆದದ್ದು ಅಲ್ಲ imagination written sometime ಇನ್ 2002
.


Good read. a ಕವನವನ್ನು ಯಾಕೆ ನಮ್ಮಲ್ಲಿ ಹಂಜಿ ಕೊಳ್ಳ ಭಾರದು?
ReplyDelete