
very easy way to forget all pains😀😃
30 Mar 2018 - ನೆನಪು
ಕೆಲವು ಘಟನೆಗಳನ್ನು ಮರೆಯಲು ಎಷ್ಟು ಯತ್ನಿಸಿದರೂ ಮರೆಯಲಾಗುವುದಿಲ್ಲ. ಏಕೆಂದರೆ ಅಂತಹ ಘಟನೆಗಳು ನಮ್ಮ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಬೀರಿರುತ್ತವೆ. ಇಂತಹ ಘಟನೆಗಳು ಮುಖ್ಯವಾಗಿ ಎರಡು ಬಗೆಯವು ಎಂದು ನನ್ನ ಅನಿಸಿಕೆ: ಒಂದು ಅತಿ ಸಂತೋಷ ತರುವ ವಿಷಯ, ಇನ್ನೊಂದು ಅತಿ ದುಃಖಕೊಡುವ ಸಂಗತಿ. ಇಲ್ಲಿ ನಾನು ವಿವರಿಸುತ್ತಿರುವುದು ನನಗೆ ಅತಿಯಾದ ಬೇಸರ ಮತ್ತು ದುಃಖ ತಂದಂತಹ ಒಂದು ಘಟನೆ.
೨೦೧೦ ರಲ್ಲಿ ನನ್ನ ಜೀವನದಲ್ಲಿ ಮೊದಲ ಬಾರಿಗೆ ದವಡೆ ಹಲ್ಲು ನೋವು ಕಾಣಿಸಿಕೊಂಡಾಗ ಮನೆಯ ಸಮೀಪದ ದಂತವೈದ್ಯರ ಬಳಿ ಹೋದೆ. ನನ್ನ ಹಲ್ಲನ್ನು ಪರೀಕ್ಷಿಸುತ್ತಲೇ ಡಾಕ್ಟರ್, ನನ್ನ ಮಾಸಿಕ ಆದಾಯ ಎಷ್ಟಿರಬಹುದು ಎಂದು ಅಂದಾಜಿಸಲು ಎಲ್ಲ ರೀತಿಯ ತಂತ್ರಗಳನ್ನು ಮಾಡಿದರು. ವೈದ್ಯರ ಈ ಸಾಮಾನ್ಯ ಚಾಳಿಯನ್ನು ನಾನು ಮೊದಲೇ ಊಹಿಸಿದ್ದರಿಂದ, ಹಳೆಯ ಪ್ಯಾಂಟ್ ಮತ್ತು ಶರ್ಟ್ ಧರಿಸಿ ಕ್ಲಿನಿಕ್‌ಗೆ ಹೋಗಿದ್ದೆ. ಯಾವುದೇ ಹುಳುಕು ಕಾಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟ ಡಾಕ್ಟರ್, ನಾಲ್ಕು ದಿನಗಳಿಗೆ ಆಗುವಷ್ಟು ೨೫೦mg ಆಂಟಿಬಯಾಟಿಕ್ ಮಾತ್ರೆಗಳನ್ನು ಬರೆದುಕೊಟ್ಟರು. ಪಕ್ಕದ ಮೆಡಿಕಲ್ ಶಾಪ್‌ನಲ್ಲಿ ಮಾತ್ರೆಗಳನ್ನು ಕೊಂಡು ಮನೆಗೆ ಬಂದು ನಿಟ್ಟುಸಿರು ಬಿಟ್ಟೆ. ನಾಲ್ಕು ದಿನಗಳ ನಂತರವೂ ನೋವು ಕಡಿಮೆಯಾದಂತೆ ಕಾಣಲಿಲ್ಲ. ಮತ್ತೆ ಅದೇ ಡಾಕ್ಟರ್ ಬಳಿ ಹೋದಾಗ, ಎಕ್ಸ್‌ರೇ ತೆಗೆದು ನೋಡೋಣ ಎಂದರು. ಎಕ್ಸ್‌ರೇನಲ್ಲಿ ಯಾವುದೇ ಹುಳುಕು ಕಾಣಿಸುತ್ತಿಲ್ಲ ಎಂದು ಹೇಳಿ, ಇನ್ನೂ ಹೆಚ್ಚು ಪ್ರಬಲವಾದ ಮಾತ್ರೆಗಳನ್ನು ಮೂರು ದಿನಗಳಿಗೆ ಬರೆದುಕೊಟ್ಟರು. ಹಲ್ಲು ಕೀಳಿಸುವ ಬಗ್ಗೆ ಯಾಕೋ ಡಾಕ್ಟರ್‌ರನ್ನು ಕೇಳಲು ಮನಸ್ಸು ಬರಲಿಲ್ಲ. ಮತ್ತೆ ಎಕ್ಸ್‌ರೇಯಲ್ಲಿ ಹಲ್ಲಿಗೆ ಹುಳುಕು ಇರಲಿಲ್ಲ. ಮಾತ್ರೆಯ ಪ್ರಭಾವದಿಂದ ನೋವು ಸ್ವಲ್ಪ ಕಡಿಮೆ ಆದಂತೆ ಅನಿಸಿದರೂ, ಸುಳಿಸುಳಿಯಾಗಿ ನೋವು ಇತ್ತು. ಒಂದು ವಾರದ ನಂತರ ಹಲ್ಲು ನೋವು ಮತ್ತೆ ಆರಂಭವಾಗಿ ತುಂಬಾ ಹೆಚ್ಚಾಗತೊಡಗಿತು. ಮಾತ್ರೆ ಮುಗಿದಿದ್ದರಿಂದ ನೋವು ಈಗ ಹೆಚ್ಚಾಗತೊಡಗಿತು ಮತ್ತು ನನ್ನ ಗಲ್ಲವೂ ಸ್ವಲ್ಪ ಕಂಪಿಸಲು ಶುರುವಾಯಿತು. ಬೇರೆ ದಾರಿ ಕಾಣದೆ ಪುನಃ ಅದೇ ಡಾಕ್ಟರ್ ಬಳಿ ಹೋಗಿ ನೋವು ಹೆಚ್ಚಾಗಿದೆ ಹಾಗೂ ಗಲ್ಲ ಕಂಪಿಸುತ್ತಿದೆ ಎಂದಾಗ, ಅವರು ಇದು ಹಲ್ಲಿನ ಸಮಸ್ಯೆಯೇ ಅಲ್ಲ, ನರಗಳ ತಜ್ಞರ ಬಳಿ ತೋರಿಸಿ ಎಂದುಬಿಟ್ಟರು. ದಿಕ್ಕು ತೋಚದೆ ಮತ್ತೆ ಮನೆಗೆ ಬಂದೆ. ನಡೆದಿದ್ದೆಲ್ಲವನ್ನು ಮನೆಯಲ್ಲಿ ಹೇಳಿದೆ. ನಾನು ಊಟವನ್ನೂ ಬಹಳ ಕಷ್ಟದಿಂದ ಮಾಡುತ್ತಿದ್ದದ್ದನ್ನು ಕಂಡು ನನ್ನ ಹೆಂಡತಿ ಮತ್ತು ಮಗಳು ಬಹಳ ಹೆದರಿಹೋದರು.
ಮರುದಿನವೇ ನನ್ನ ಮಗಳು ತನ್ನ ಸ್ಕೂಟರ್‌ನಲ್ಲಿ ಒಬ್ಬ ಉತ್ತಮ (ಎಂದು ಭಾವಿಸಲಾದ) ನರತಜ್ಞ ಸರ್ಜನ್ ಬಳಿಗೆ ಕರೆದೊಯ್ದಳು. ಹಿಂದಿನ ದಂತವೈದ್ಯರ ಬಳಿ ನಡೆದದ್ದೆಲ್ಲವನ್ನು ನಾನು ಡಾಕ್ಟರ್‌ಗೆ ವಿವರವಾಗಿ ತಿಳಿಸಿದೆ. ನನ್ನನ್ನು ಪರೀಕ್ಷಿಸಿದ ಡಾಕ್ಟರ್ ತಕ್ಷಣವೇ ಹೇಳಿದರು: "ಇದು ನರದ ಸಮಸ್ಯೆ (ನರ್ವ್ ಪ್ರಾಬ್ಲೆಮ್), ಮತ್ತು ಎಂದಿಗೂ ಹೋಗದ ಖಾಯಿಲೆ. ನೀವು ಪ್ರತಿನಿತ್ಯ ಮಾತ್ರೆ ತೆಗೆದುಕೊಳ್ಳಲೇಬೇಕು." ನನ್ನ ಮಗಳು ಆಪರೇಷನ್ ಮಾಡಿ ಸರಿಪಡಿಸಬಹುದೇ ಎಂದಾಗ, "ಕಷ್ಟ, ಸ್ವಲ್ಪ ದಿನ ಮಾತ್ರೆ ತೆಗೆದುಕೊಳ್ಳಲಿ, ಎರಡು ತಿಂಗಳ ನಂತರ ನೋಡೋಣ" ಎಂದರು. ನನ್ನ ಮಗಳು ಅಳುತ್ತಲೇ ನನ್ನನ್ನು ಮನೆಗೆ ಕರೆತಂದಳು. ನಾನು ಡಾಕ್ಟರ್ ಬರೆದ ಮಾತ್ರೆಗಳನ್ನು ಒಂದು ತಿಂಗಳಿಗಾಗುವಷ್ಟು ಕೊಂಡು ತಂದೆ. ಒಂದು ಮಾತ್ರೆಯ ಬೆಲೆ ಕೇವಲ ಒಂದು ರೂಪಾಯಿ ಇದ್ದದ್ದನ್ನು ನೋಡಿದಾಗ ನನಗೆ ಅರ್ಧ ನೋವು ಕಡಿಮೆಯಾದಂತೆ ಭಾಸವಾಯಿತು 😀😃. ಜೀವನಪರ್ಯಂತ ತೆಗೆದುಕೊಳ್ಳಬೇಕಾಗಿರುವುದರಿಂದ ಇದೂ ಒಂದು ಸಮಾಧಾನವೇ.
ಆ ಒಂದು ರೂಪಾಯಿಯ ಮಾತ್ರೆಯ ಪ್ರಭಾವವೇನು ಅಂತೀರಾ? ಬಹಳ ಸಂತೋಷದಿಂದಲೇ ಮಧ್ಯಾಹ್ನದ ಊಟವಾದ ಮೇಲೆ ಒಂದು ಮಾತ್ರೆ ತೆಗೆದುಕೊಂಡೆ. ಸ್ವಲ್ಪ ಹೊತ್ತಿನ ನಂತರ ಯಾಕೋ ತಲೆ ಸುತ್ತುವಿಕೆ. ಹೊರಗೆ ಓಡಾಡಿದ ಆಯಾಸ ಎಂದು ನಿದ್ರೆ ಮಾಡಿದೆ. ಸಾಯಂಕಾಲವೂ ಸ್ವಲ್ಪ ಹ್ಯಾಂಗೋವರ್ ಇತ್ತು, ಗಮನ ಕೊಡಲಿಲ್ಲ. ಮತ್ತೆ ರಾತ್ರಿ ಊಟವಾದ ಮೇಲೆ ಮಾತ್ರೆ ತೆಗೆದುಕೊಂಡು ಮಲಗಿದೆ.
ಬೆಳಿಗ್ಗೆಯೂ ಸ್ವಲ್ಪ ಹ್ಯಾಂಗೋವರ್ ಇತ್ತು. ಗಲ್ಲ ಕಂಪನ ಸ್ವಲ್ಪ ಕಡಿಮೆ ಆದಂತೆ ಅನಿಸಿದರೂ, ಹಲ್ಲು ನೋವು ಕಡಿಮೆಯಾಗಲಿಲ್ಲ. ಮೂರು-ನಾಲ್ಕು ದಿನ ಕಳೆದರೂ ಹಲ್ಲು ನೋವು ಕಡಿಮೆಯಾಗದಿದ್ದಾಗ, ನಾಲ್ಕನೇ ದಿನ ಸಂಜೆ ನಾನು ಹೊರಗೆ ಸಾಕಷ್ಟು ದೂರ ನಡೆದು ಮನೆಗೆ ಬಂದೆ. ಹ್ಯಾಂಗೋವರ್ ಹೋಗಿರಲಿಲ್ಲ; ತಲೆ ಸುತ್ತು ಯಾವಾಗಲೂ ಇತ್ತು. ನಾನು ನಡೆಯುತ್ತಿರುವುದನ್ನು ನೋಡಿದ ನನ್ನ ಪತ್ನಿ, "ನೀವು ಸರಿಯಾಗಿ ನಡೆಯುತ್ತಿಲ್ಲ" ಎಂದಳು. ನನಗೂ ಹಾಗೆಯೇ ಅನಿಸುತ್ತಿತ್ತು. ಏನಿಲ್ಲವೆಂದು ಸಮಾಧಾನ ಹೇಳಿ, ಊಟ ಮಾಡಿ, ಮಾತ್ರೆ ತೆಗೆದುಕೊಂಡು ಮಲಗಿಕೊಂಡೇ ಯೋಚನೆ ಮಾಡಲು ಶುರುಮಾಡಿದೆ. ಆದರೆ ಮಾತ್ರೆಯ ಪ್ರಭಾವದಿಂದ ತಕ್ಷಣವೇ ನಿದ್ದೆ ಬರುತ್ತಿತ್ತು, ಯೋಚನೆ ಮಾಡಲು ಸಮಯವೇ ಸಿಗುತ್ತಿರಲಿಲ್ಲ.
ಮಾರನೆಯ ದಿನ ನಾನು ದೀರ್ಘವಾಗಿ ಯೋಚಿಸಿ, ನಡೆದದ್ದೆಲ್ಲವನ್ನು ಮೆಲುಕು ಹಾಕಿದೆ. ನಮ್ಮ ಮನೆಯಲ್ಲಿ ಈ ಹಿಂದೆ ಯಾರಿಗೂ ನರ ದೌರ್ಬಲ್ಯದ ಖಾಯಿಲೆ ಇಲ್ಲ. ಹಾಗಾಗಿ ಇದು ಕೇವಲ ಹಲ್ಲಿನ ಸಮಸ್ಯೆಯೇ ಇರಬೇಕು. ಹೇಗೂ ವಯಸ್ಸಾದವರೆಲ್ಲ ಹಲ್ಲು ಕೀಳಿಸುವುದು ಸರ್ವೇಸಾಮಾನ್ಯ, ನನಗೆ ಸ್ವಲ್ಪ ಬೇಗ ಬಂದಿರಬಹುದು ಎಂದುಕೊಂಡೆ. ಒಂದು ನಿರ್ಧಾರಕ್ಕೆ ಬಂದೆ. ಹಲ್ಲಿನ ಡಾಕ್ಟರ್ ಬಳಿ ಹೋಗಿ, "ದಯವಿಟ್ಟು ಆ ನೋವು ಕೊಡುವ ದವಡೆ ಹಲ್ಲನ್ನು ಕಿತ್ತುಬಿಡಿ" ಎಂದು ಗೋಗೆರೆದೆ. ಕನಿಕರದಿಂದ ಆ ಡಾಕ್ಟರ್ ದವಡೆಗೆ ಮೂರು ಇಂಜೆಕ್ಷನ್ ಕೊಟ್ಟು ಆ ಹಲ್ಲನ್ನು ಕಿತ್ತರು. ಹಲ್ಲಿನ ಕೊನೆಯ ಕೆಳಭಾಗದಲ್ಲಿ ಹುಳುಕು ಸ್ಪಷ್ಟವಾಗಿ ಕಾಣಿಸುತ್ತಿತ್ತು. ನನಗೆ ಏನೋ ಸಮಾಧಾನ.
ಮನೆಗೆ ಬಂದ ಮೇಲೆ ಎರಡನೇ ದಿನದಿಂದ ಯಾವುದೇ ನೋವು ಕಾಣಲಿಲ್ಲ ಮತ್ತು ಅನುಭವಿಸಲೂ ಇಲ್ಲ. ನನ್ನ ನಿರ್ಧಾರ ಸರಿಯಿತ್ತು.
ಇನ್ನೂ ಮುಗಿದಿಲ್ಲ....
ಏಳು ವರ್ಷಗಳ ನಂತರ, ೨೦೧೭ ರಲ್ಲಿ, ಇನ್ನೊಂದು ದವಡೆ ಹಲ್ಲು ನೋಯಲು ಪ್ರಾರಂಭಿಸಿತು. ಆಗ ನಾನು ಅಮೆರಿಕದಲ್ಲಿದ್ದೆ. ಒಂದು ತಿಂಗಳ ಕಾಲ ಸ್ವಯಂ-ಔಷಧೋಪಚಾರ ವಿಫಲವಾದಾಗ ದಂತವೈದ್ಯರ ಬಳಿ ಹೋಗಲೇಬೇಕಾಯಿತು. ಭಾರತಕ್ಕೆ ಮರಳಲು ಕೇವಲ ೪೦ ದಿನಗಳು ಮಾತ್ರ ಉಳಿದಿದ್ದವು, ಆದರೆ ನೋವು ತಡೆಯಲು ಸಾಧ್ಯವಿರಲಿಲ್ಲ. ಈ ಬಾರಿ ಡಾಕ್ಟರ್ ಎಲ್ಲಾ ಹಲ್ಲುಗಳ ಎಕ್ಸ್‌ರೇ ತೆಗೆದಾಗ, ಅದು 'ಕ್ಲೀನ್' ಇದೆ ಎಂದರು. ಹಲ್ಲುಗಳಿಗೆ 'ಡೀಪರ್ ಕ್ಲೀನಿಂಗ್' ಅಗತ್ಯವಿದೆ ಎಂದು ಹೇಳಿ, ಮೊದಲ ಕೋಟೇಶನ್ ೬೨೫ ಡಾಲರ್ನದ್ದು ನೀಡಿದರು. ಎರಡನೇ ಕೋಟೇಶನ್ ನಂತರ ಕೊಡುವುದಾಗಿ ಹೇಳಿದರು. ನಾನು, "ನನಗೆ ಹಲ್ಲಿನ ವಿಮೆ ಇಲ್ಲ, ಮುಂದಿನ ವಾರ ಭಾರತಕ್ಕೆ ಹೋಗಬೇಕು, ಅಲ್ಲಿ ತೋರಿಸುವೆ" ಎಂದೆ. ಅವರು ೧೦ ದಿನಕ್ಕೆ ಆಂಟಿಬಯಾಟಿಕ್ ಬರೆದುಕೊಟ್ಟರು. ಮಾತ್ರೆಯ ಪ್ರಭಾವದಿಂದ ನೋವು ಕಡಿಮೆಯಾಯಿತು. ಮೈಸೂರಿಗೆ ಬಂದ ಮೇಲೂ ಎರಡು ತಿಂಗಳು ನೋವು ಬರಲಿಲ್ಲ, ಆದರೆ ಮನಸ್ಸಿನಲ್ಲೊಂದು ಕಿರಿಕಿರಿ ಇತ್ತು.
ಎರಡು ತಿಂಗಳ ನಂತರ ಮತ್ತೆ ಸ್ವಲ್ಪ ಹಲ್ಲು ನೋವು ಕಾಣಿಸಿಕೊಂಡಾಗ ಅದೇ ಮೈಸೂರಿನ ಡಾಕ್ಟರ್ ಬಳಿ ಹೋದೆ. ಈ ಬಾರಿ ಅವರು ಎಕ್ಸ್‌ರೇ, ರೂಟ್-ಕೆನಾಲ್ ಇತ್ಯಾದಿ ಬಗ್ಗೆ ಉಪದೇಶ ನೀಡಿದರು. ನಾನು, "ಹಲ್ಲು ಕೀಳಿರಿ, ಹಣವಿಲ್ಲ" ಎಂದೆ. ಆದರೂ ಬಿಡದೆ ಆಂಟಿಬಯಾಟಿಕ್ ಬರೆದುಕೊಟ್ಟರು. ಮಾತ್ರೆ ತೆಗೆದುಕೊಳ್ಳದೇ ಮನೆಗೆ ಬಂದು ಮೂರು ದಿನಗಳ ನಂತರ "ಮತ್ತೆ ತುಂಬಾ ನೋವು" ಎಂದು ಸುಳ್ಳು ಹೇಳಿ ಹಲ್ಲನ್ನು ಕೀಳಿಸಿದೆ. ಮೊದಲಿನ ಹಲ್ಲಿನಂತೆಯೇ ಈ ಹಲ್ಲಿನ ಕೊನೆ ತುದಿಯಲ್ಲೂ ಹುಳುಕು ಕಂಡಿತ್ತು.
ನನ್ನ ಅನಿಸಿಕೆ:
ಯಾವುದೇ ಡಾಕ್ಟರ್ ಬಳಿ ಬರುವ ಎಲ್ಲ ರೋಗಿಗಳು ಅವರಿಗೆ ಕೇವಲ ಒಂದು ಪರೀಕ್ಷಾ ಮಾದರಿ (test case) ಇದ್ದ ಹಾಗೆ. ರೋಗಿಗಳ ಗುಣಮುಖವಾಗುವುದು ಅವರ ಅದೃಷ್ಟದ ಮೇಲೆ ಅವಲಂಬಿಸಿರುತ್ತದೆ.
ಡಾಕ್ಟರ್ who prescribed wrong medicine
***
Some events are unforgettable, no matter how hard you try to bury them. They leave a deep, lasting impact on your mind. I've noticed these incidents usually fall into two categories: those that bring immense joy and those that cause extreme distress. The story I'm about to share belongs to the latter, an incident that caused me great sadness and anxiety.
My ordeal began in 2010 with my first molar toothache. I visited the nearest dentist, who, while examining my tooth, employed every trick to estimate my monthly income. Anticipating this common medical habit, I had deliberately worn old clothes. The doctor initially found no visible decay and prescribed a 250mg antibiotic for four days. I bought the pills and went home, relieved. Four days later, the pain hadn't subsided. On my next visit, the doctor took an X-ray. Again, they stated the X-ray showed no decay and prescribed a stronger dose for three days. Though I didn't ask about an extraction, the pain only lessened slightly due to the medication. A week later, the toothache returned with far greater intensity, and since the medication was gone, the pain spiked. My cheek even started to twitch. Desperate, I went back to the same doctor, explaining the increased pain and the cheek twitching. To my surprise, they dismissed it, saying, "This is not a dental problem at all; you need to see a nerve specialist." I returned home dejected and told my family everything. Seeing me struggle even to eat, my wife and daughter became very frightened.
The very next day, my daughter quickly took me on her scooter to a supposedly 'good' nerve specialist surgeon. I recounted my entire experience with the dentist. The surgeon examined me and immediately delivered a grim diagnosis: "This is a nerve problem, and it's incurable. You must take tablets every day for the rest of your life." When my daughter asked about surgery, the doctor stated it would be difficult and suggested I continue the medication, promising a re-evaluation in two months. My daughter tearfully drove me home. I bought a month's supply of the prescribed medicine. The fact that each tablet cost only one rupee gave me a moment of strange, half-relief (😀😃)—a small comfort for a lifetime commitment.
What was the effect of that one-rupee tablet? I happily took the first dose after lunch. Soon after, I felt dizzy. Thinking it was just exhaustion from being out, I slept. I felt a slight hangover that evening but ignored it, took the tablet after dinner, and went to sleep again.
The slight hangover persisted the next morning. I didn't worry about it. Two days passed; the toothache didn't lessen, though the cheek twitching seemed slightly reduced. After three or four days, with the toothache still present, I walked a good distance one evening and returned home. The feeling of a hangover and constant dizziness remained. My wife, observing me, commented that I wasn't walking straight. I felt it too. Trying to stay calm, I ate, took the tablet, and lay down to think. But the medication immediately induced sleep, robbing me of the time to deliberate.
The next day, I had a long, hard think, reviewing every detail. Since no one in my family had ever suffered from a nerve disorder, I concluded the issue must be purely dental. Anyway, it's common for older people to get their teeth pulled; perhaps mine just came early. I made a firm decision. I went straight to the dentist and pleaded with them to just extract the painful molar. Taking pity, the doctor administered three injections to my jaw and pulled the tooth. Decay was clearly visible at the very tip of the tooth's root. I felt immense relief.
I returned home, and from the second day onward, the pain was completely gone. My decision was proven right.
But the story doesn't end there...
Seven years later, in 2017, another molar began to ache while I was in America. After a month of failed self-medication, I was forced to see a dentist. I had only 40 days left before returning to India, and the pain was unbearable. This time, the doctor took a full mouth X-ray, declared it "clean," but said my teeth needed a "deeper clean." They gave me an initial quote of $625 and promised a second quote later. I explained that I had no dental insurance, was leaving for India the following week, and would get it treated there. They prescribed a 10-day course of antibiotics. The pain subsided due to the medicine. Even after arriving in Mysuru, the pain stayed away for two months, but the memory of the ordeal lingered.
After two months, a minor ache resurfaced, and I went back to the same Mysuru dentist. This time, they launched into a lecture about X-rays and root canals. I cut them off, simply saying, "Pull the tooth; I don't have the money." They insisted on antibiotics. I ignored the prescription, and three days later, I went back, lied that the pain was severe again, and had the tooth extracted. Just like the first time, decay was found at the very tip of the root.
My take on the whole experience is this:
Every patient who comes to a doctor is essentially a test case. A patient's recovery seems to be dependent more on their luck than on the precision of the diagnosis.
***
end- ನಡೆದದ್ದು documented ಸಂಟೈಂ ಇನ್ 2018 by ಸುರೇಶ್ ಹುಲಿಕುಂಟಿ
No comments:
Post a Comment